Sunday, November 16, 2025

Latest Posts

ಕ್ರಾಂತಿಗೂ ಮುನ್ನ ಡಿಕೆಶಿ ಬೆಲ್ಲದ ತುಲಾಭಾರ ಮಾಡಿಸಿದ್ದೇಕೆ?

- Advertisement -

ಡಿಸಿಎಂ ಡಿ.ಕೆ ಶಿವಕುಮಾರ್ ದೀಪಾವಳಿಯ ಬಲಿಪಾಡ್ಯಮಿ ದಿನ, ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ಜೊತೆಗೆ ರಾಯರ ಅನುಗ್ರಹಕ್ಕಾಗಿ ತುಲಾಭಾರ ಸೇವೆ ನೆರವೇರಿಸಿದ್ದಾರೆ. ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಬಳಿಕ ಪಂಚಮುಖಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಮೂಲ ರಾಮ ದೇವರ ದರ್ಶನವನ್ನೂ ಮಾಡಿದ್ದಾರೆ.

ಪಂಚಮುಖಿ ಆಂಜನೇಯನ ದರ್ಶನದ ಬಳಿಕ ಮಂತ್ರಾಲಯಕ್ಕೆ ಮರಳಿದ ಡಿಕೆಶಿ ತುಲಾಭಾರ ನೆರವೇರಿಸಿದ್ದಾರೆ. ರಾಯರ ಅನುಗ್ರಹಕ್ಕಾಗಿ ಬೆಲ್ಲದ ಮೂಟೆಯನ್ನಿಟ್ಟು, ತುಲಾಭಾರ ಮಾಡಲಾಗಿದೆ. ಬಳಿಕ ಮಂತ್ರಾಲಯದಲ್ಲಿ ವರ್ಷಕ್ಕೆ ಎರಡು ಬಾರಿ ಮಾತ್ರ ನಡೆಯುವ ಧಾರ್ಮಿಕ ಕಾರ್ಯಕ್ರಮ, ಮೂಲ ರಾಮದೇವರ ಪೂಜೆಯಲ್ಲಿ ಭಾಗಿಯಾಗಿದ್ದರು. ದೀಪಾವಳಿ ಬಲಿಪಾಡ್ಯ ಹಿನ್ನೆಲೆ ಮೂಲರಾಮ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಿದರು.

ಬಳಿಕ ಮಾತನಾಡಿರುವ ಡಿಸಿಎಂ ಡಿಕೆಶಿ, ಜನರ ಜೊತೆ ನಿಷ್ಪಕ್ಷಪಾತವಾಗಿ ಸೇವಾ ಮನೋಭಾವದಿಂದ ಇದ್ದಾಗ, ಸಮಾಜ ನಮ್ಮನ್ನು ಗುರುತಿಸುತ್ತದೆ. ವ್ಯಕ್ತಿ ಪೂಜೆ ಮಾಡಬಾರದು, ಪಕ್ಷ ಪೂಜೆ ಮಾಡಬೇಕು. ಕಾಂಗ್ರೆಸ್ ಪಕ್ಷ ಇದ್ರೆ ನಾವೆಲ್ಲ. ಗುಂಪು ರಾಜಕಾರಣ ಮಾಡಲು ನಾನು ಅವಕಾಶ ಕೊಟ್ಟಿಲ್ಲ.

ನಮ್ಮ ಸರ್ಕಾರ ಬಂದ ಮೇಲೆ ಯಡಿಯೂರಪ್ಪನವರು, ಒಂದು ಕಾಳು ಅಕ್ಕಿ ಕಡಿಮೆ ಕೊಟ್ರೂ ನಾವು ಒಪ್ಪಲ್ಲ ಎಂದು ಹೇಳಿದರು. ಮೋದಿ ಹೇಳಿದ್ರು ಸರ್ಕಾರ ದಿವಾಳಿ ಆಗುತ್ತೆ ಎಂದು. ಆದರೆ ಮೊನ್ನೆ ಬಿಜೆಪಿ ಅವರು ಬಿಹಾರದಲ್ಲಿ ಒಮ್ಮೆಲೆ 10 ಸಾವಿರ ಹಣ ಕೊಡ್ತಿದ್ದಾರೆ. ನಮ್ಮ ಮಾದರಿಯನ್ನ ಬಿಜೆಪಿ ಅನುಸರಿಸ್ತಿದಾರೆ. ನಮ್ಮ ಗ್ಯಾರಂಟಿ ಮಾದರಿ ಯೋಜನೆಗಳನ್ನು ಅವರು ಕಾಪಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

- Advertisement -

Latest Posts

Don't Miss