- Advertisement -
ಬೆಂಗಳೂರು: ಬೆಂಗಳೂರು ಉತ್ತರ ಲೋಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದ ಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿನ್ನೆಯಷ್ಟೇ ತಮ್ಮನ್ನು ಟೀಕಿಸಿದ್ದ ಸಿದ್ದಾರಮಯ್ಯ ವಿರುದ್ಧ ಟ್ವೀಟ್ ಮಾಡೋ ಮೂಲಕ ಸದಾನಂದಗೌಡ ಕಿಡಿ ಕಾರಿದ್ದಾರೆ.
ದುರಹಂಕಾರದಿಂದ ನನ್ನನ್ನು ಟೀಕಿಸಿದ, ನನ್ನ ನಗುವನ್ನು ಅಪಹಾಸ್ಯಗೈದ, ವೈಯುಕ್ತಿಕ ನಿಂದನೆಗೆ ಇಳಿದ ಅತಿ ಬುದ್ದಿವಂತ ವಿರೋಧ ಪಕ್ಷ ನಾಯಕರುಗಳಿಗೆ ನನ್ನ ಕ್ಷೇತ್ರದ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ. ಜನ ಸೇವಕನಾಗಿ ನಾನು ಸದಾ ಲಭ್ಯ ಅಂತ ಟ್ವೀಟ್ ಮಾಡೋ ಮೂಲಕ ಪ್ರತಿಕ್ರಿಯಿಸಿದ್ದಾರೆ.
- Advertisement -