Sunday, December 22, 2024

Latest Posts

ಮೋದಿ ಪರ ನಿಂತ ಅಹಿಂಸಾ ಚೇತನ್‌! ಸಂತೋಷ್‌ ಲಾಡ್‌ಗೆ ಅಜ್ಞಾನಿ ಸಚಿವರೇ ಎಂದು ವ್ಯಂಗ್ಯ

- Advertisement -

Bengaluru News: ಬೆಂಗಳೂರು: ಗೋಮಾಂಸ ರಫ್ತು ವಿಚಾರದಲ್ಲಿ ಭಾರತವು ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ. ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ (‌PM Narendra Modi) ಅವರಿಗೆ ಸಲ್ಲುತ್ತದೆ ಎಂದು ಸಚಿವ ಸಂತೋಷ್‌ ಲಾಡ್‌ (Minister Santosh Lad) ಹೇಳಿಕೆಯನ್ನು ನಟ ಚೇತನ್‌ ಅಹಿಂಸಾ ಖಂಡಿಸಿದ್ದಾರೆ. ಅಲ್ಲದೆ, ಮೋದಿ ಪರ ಬ್ಯಾಟಿಂಗ್‌ ಮಾಡಿದ್ದು, ರಫ್ತು ಹೆಚ್ಚಿರುವುದು ಕಾಂಗ್ರೆಸ್‌ ಅವಧಿಯ ಕೇಂದ್ರ ಸರ್ಕಾರ ಇದ್ದಾಗ. ಈ ಕೀರ್ತಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಸಲ್ಲಬೇಕು. ಸಂತೋಷ್ ಲಾಡ್ ಅವರಂತಹ ಕಾಂಗ್ರೆಸ್ ನಾಯಕರು ಅಜ್ಞಾನಿಗಳಾಗಿದ್ದು, ಮೋದಿಯವರ ತಪ್ಪು ಹುಡುಕಲು ಹೆಚ್ಚಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ ಎಂದು ಹೇಳಿದ್ದಾರೆ.

ಇದುವರೆಗೆ ಬಿಜೆಪಿ ಸೇರಿದಂತೆ ಬಲಪಂಥೀಯದ ಬಗ್ಗೆ ಕಟುವಾಗಿ ಟೀಕಿಸುತ್ತಲೇ ಬರುತ್ತಿದ್ದ ನಟ ಅಹಿಂಸಾ ಚೇತನ್‌ ಅವರು ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್‌ ಬೀಸಿರುವುದು ಅಚ್ಚರಿಗೆ ಕಾರಣವಾಗಿದೆ.

ಏನಿದು ವಿವಾದ?

ಭಾರತ ದೇಶವು ಗೋಮಾಂಸವನ್ನು ರಫ್ತು ಮಾಡುವುದರಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಬ್ರೆಜಿಲ್ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರ ಹಾಗೂ ಕರ್ನಾಟಕ ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿವೆ. ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಬೇಕು ಎಂದು ಸಚಿವ ಸಂತೋಷ್ ಲಾಡ್ ಭಾನುವಾರ ಧಾರವಾಡದಲ್ಲಿ ಹೇಳಿಕೆ ನೀಡಿದ್ದರು. ಈ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಹಿಂಸಾ ಚೇತನ್‌, ಸಂತೋಷ್‌ ಲಾಡ್‌ಗೆ ಅಂಕಿಅಂಶಗಳ ಸಹಿತ ತಿರುಗೇಟು ನೀಡಿದ್ದಾರೆ.

ಚೇತನ್‌ ಪೋಸ್ಟ್‌ನಲ್ಲೇನಿದೆ?

ಗೋಮಾಂಸ ರಫ್ತಿನಲ್ಲಿ ಭಾರತವು ವಿಶ್ವದ 2ನೇ ಅತಿದೊಡ್ಡ ಸ್ಥಾನ ಪಡೆದಿದೆ. ಇದರ ಶ್ರೇಯಸ್ಸು/ ಕ್ರೆಡಿಟ್‌ ಮೋದಿ ಅವರಿಗೆ ಸಲ್ಲಬೇಕು’ ಎಂದು ಕಾಂಗ್ರೆಸ್‌ನ ಸಂತೋಷ್ ಲಾಡ್ ಹೇಳಿದ್ದಾರೆ. ಇದೊಂದು ಸುಳ್ಳು ಆರೋಪವಾಗಿದೆ.

APEDA ಗ್ರಾಫ್ ಯುಪಿಎ II ಆಡಳಿತದಲ್ಲಿ 2009 ರಿಂದ 2014 ರ ವರೆಗೆ ವಾರ್ಷಿಕವಾಗಿ ಶೇ. 30ರಷ್ಟು ಗೋಮಾಂಸದ ರಫ್ತು ಹೇಗೆ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ. 2014 ರಿಂದ 2019ರ ವರೆಗೆ ಬಿಜೆಪಿ ಆಡಳಿತದ ಮೊದಲ ಐದು ವರ್ಷಗಳಲ್ಲಿ, ಗೋಮಾಂಸ ರಫ್ತು ಸ್ಥಿರವಾಗಿದೆ ಮತ್ತು ಕಡಿಮೆಯಾಗಿದೆ.

ಗೋಮಾಂಸ ರಫ್ತು ಮಾಡುವುದರಲ್ಲಿ ಭಾರತ 2ನೇ ಸ್ಥಾನ ಪಡೆದಿರುವುದು ಇದರ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕೇ ಹೊರತು ನರೇಂದ್ರ ಮೋದಿಯವರಿಗೆ ಅಲ್ಲ. ಸಂತೋಷ್ ಲಾಡ್ ಅವರಂತಹ ಕಾಂಗ್ರೆಸ್ ನಾಯಕರು ಅಜ್ಞಾನಿಗಳಾಗಿದ್ದು, ಮೋದಿಯವರ ತಪ್ಪು ಹುಡುಕಲು ಅವರುಗಳು ಹೆಚ್ಚಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ” ಎಂದು ಅಹಿಂಸಾ ಚೇತನ್‌ ತಮ್ಮ ಪೋಸ್ಟ್‌ ಮೂಲಕ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗೇಟ್ ಮೇಲೆಯೇ ಬಟ್ಟೆ ಒಣ ಹಾಕಿದ ಮಹಿಳೆ, ಫೋಟೋ ವೈರಲ್

ಹಾಸನಾಂಬೆಯ ದರ್ಶನ ಪಡೆದ ಸಿಎಂ: ಹೆಚ್ಡಿಕೆ, ಯತ್ನಾಳ್ ವಿರುದ್ಧ ವಾಗ್ದಾಳಿ

ಅನುಮಾನಕ್ಕೆ ಬಾಣಂತಿ ಪತ್ನಿಯನ್ನೇ ಕೊಂದ ಪತಿ: ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪೊಲೀಸಪ್ಪ

- Advertisement -

Latest Posts

Don't Miss