Saturday, October 12, 2024

Latest Posts

ಕೆಪಿಸಿಸಿ ಸಮಿತಿ ವಿಸರ್ಜನೆ..!- 170 ಮಂದಿ ಮುಖಂಡರ ಕೈ ಬಿಟ್ಟ ಕಾಂಗ್ರೆಸ್

- Advertisement -

ಬೆಂಗಳೂರು: ದಿಢೀರ್ ರಾಜಕೀಯ ಬೆಳೆವಣಿಗೆಯಲ್ಲಿ ಕೆಪಿಸಿಸಿ ಸಮಿತಿಯನ್ನು ವಿಸರ್ಜಿಸಿ ಎಐಸಿಸಿ ತೀರ್ಮಾನ ಕೈಗೊಂಡಿದೆ. ಇದರಿಂದ ಸುಮಾರು 170 ಮಂದಿ ಮುಖಂಡರು ಸಮಿತಿಯಲ್ಲಿ ಸ್ಥಾನ ಕಳೆದುಕೊಂಡಂತಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ ಕಾಂಗ್ರೆಸ್ ಇದೀಗ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಿದೆ. ಹಾಲಿ ಕೆಪಿಪಿಸಿ ಸಮಿತಿಯನ್ನೇ ವಿಸರ್ಜಿಸೋ ಮೂಲಕ ಎಐಸಿಸಿ 170 ಮಂದಿ ಮುಖಂಡರಿಗೆ ಸಮಿತಿಯಿಂದ ಕೊಕ್ ನೀಡಿದೆ. ಹೊಸಬರಿಗೆ ಅವಕಾಶ ಸ್ಥಾನ ಕೊಡಬೇಕು, ನಿಷ್ಠಾವಂತರಿಗೆ ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಅಂತ ಈ ಕುರಿತು ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಪಿಸಿಸಿ ಉಪಾಧ್ಯಕ್ಷ ಬಿ.ಎಸ್ ಶಂಕರ್,ವಿ.ಆರ್ ಸುದರ್ಶನ್,ಡಾ.ಎಲ್ ಹನುಮಂತಯ್ಯ,ವೀರಣ್ಣ ಮತ್ತಿಕಟ್ಟಿ, ಪ್ರೊ. ಬಿ.ಕೆ ಚಂದ್ರಶೇಖರ್, ರಾಣಿ ಸತೀಶ್, ಮೋಟಮ್ಮ, ಕೆ.ಸಿ ಕೊಂಡಯ್ಯ, ಕೃಷ್ಣಂ ರಾಜು, ಆತ್ಮಾನಂದ, ವಿ.ವೈ ಘೋರ್ಪಡೆ, ಕೆ.ಗೋವಿಂದ ರಾಜು, ಮುಖ್ಯಮಂತ್ರಿ ಚಂದ್ರು ಸೇರಿದಂತೆ 170 ಮಂದಿ ಸದಸ್ಯರು ಸ್ಥಾನ ಕಳೆದುಕೊಂಡಿದ್ದಾರೆ.

ಆದ್ರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷರನ್ನು ಮಾತ್ರ ಉಳಿಸಿಕೊಂಡು ಮಿಕ್ಕೆಲ್ಲಾ ಸದಸ್ಯರಿಗೂ ಎಐಸಿಸಿ ಕೊಕ್ ನೀಡಿದೆ. ಹೀಗಾಗಿ ಶೀಘ್ರದಲ್ಲಿ ಹೊಸಬರ ನೇಮಕಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು ಈ ಬಗ್ಗೆ ಮಾತುಕತೆ ನಡೆದಿದೆ.

ಮೈತ್ರಿ ಸರ್ಕಾರ ಸೇಫ್ ಮಾಡೋಕೆ ಗೌಡರ ಫಾರ್ಮುಲಾ ಏನು..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=AirN2a0YfAE
- Advertisement -

Latest Posts

Don't Miss