ಮಂಡ್ಯ: ಮಂಡ್ಯ ಕೈ ಬಂಡಾಯ ಶಮನಕ್ಕೆ ಎಐಸಿಸಿ ಪದಾಧಿಕಾರಿಗಳು ಎಂಟ್ರಿಯಾಗಿದ್ದು, ಡಾ.ಕೃಷ್ಣ ನಿವಾಸಕ್ಕೆ ಪದಾಧಿಕಾರಿಗಳು ಭೇಟಿ ನೀಡಿದ್ದಾರೆ.
ಡಾ.ಕೃಷ್ಣಗೆ ಕಾಂಗ್ರೆಸ್‌ನಲ್ಲಿ ಟಿಕೇಟ್ ಸಿಗಲಿಲ್ಲವೆಂದು, ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ತೆಲಂಗಾಣದ ರಾಜ್ಯಸಭಾ ಸದಸ್ಯ ಕುಸುಮ್ ಕುಮಾರ್ ಚೌಧರಿ, ಎಐಸಿಸಿ ಸೆಕ್ರೆಟರಿ ರೋಜಿ ಜಾನ್, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಅಭ್ಯರ್ಥಿ ರವಿಕುಮಾರ್ ಸೇರಿ ಸಂಧಾನ ಮಾಡಿದ್ದು, ಸಂಧಾನ ಸಭೆ ಸಫಲವಾಗಿದೆ.
ಈ ಕಾರಣಕ್ಕೆ ಇಂದು ನಾಮಪತ್ರ ವಾಪಸ್ ಪಡೆಯಲು ಡಾ.ಕೃಷ್ಣ ಒಪ್ಪಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಜೊತೆ ತೆರಳಿ ನಾಮಪತ್ರ ವಾಪಸ್ ಪಡೆಯಲು ಕೃಷ್ಣ ನಿರ್ಧರಿಸಿದ್ದಾರೆ.
ಬಿಜೆಪಿ ಚುನಾವಣಾ ಸಾಂಸ್ಕೃತಿಕ ಪ್ರಚಾರ, ಬೀದಿ ನಾಟಕ ಅಭಿಯಾನಕ್ಕೆ ಚಾಲನೆ..
ಸುಧಾಕರ್ ಬೆಂಬಲಿಸಿ ಬಿಜೆಪಿ ಸೇರ್ಪಡೆಯಾದ ಜನ, ಚಂದನ್ ಶೆಟ್ಟಿ ಜೊತೆ ಸಿಎಂ ಕ್ಯಾಂಪೇನ್..
ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲೂ ತಕ್ಕ ಪಾಠ: ರಾಜೀವ್ ಚಂದ್ರಶೇಖರ್ ವಿಶ್ವಾಸ..