ಈ ಕೊರೊನಾ ಕಾಟದಿಂದ ಲಾಕ್‌ಡೌನ್ ಆಗಿ ಎರಡು ತಿಂಗಳು ಎಲ್ಲರೂ ಮನೆಯಲ್ಲೇ ಕೂರೋ ಪರಿಸ್ಥಿತಿ ಬಂತು. ಇದಕ್ಕೂ ಮುನ್ನ ಮಾಲ್, ಥಿಯೇಟರ್, ಟ್ರಿಪ್, ಪಿಕ್ನಿಕ್ ಅಂತಾ ಊರೂರು ಅಲೆದು ಎಂಜಾಯ್ ಮಾಡುತ್ತಿರುವರು ಕೊರೊನಾಗೆ ಶಾಪ ಹಾಕಿ ಮನೆಯಲ್ಲೇ ಕೂತರು.

ಸದ್ಯ ಲಾಕ್‌ಡೌನ್ ಕೊಂಚ ಸಡಿಲಿಕೆಯಾಗಿದೆ. ಈ ಮಧ್ಯೆ ರಿಲ್ಯಾಕ್ಸ್ ಆಗೋಕ್ಕೆ ಕೆಲವರು ಈಗಲೇ ಟ್ರಿಪ್, ಪಿಕ್ನಿಕ್ ಅಂತಾ ಸುತ್ತಾಡೋಕ್ಕೆ ಶುರು ಮಾಡಿದ್ದಾರೆ. ಅಂಥವರಲ್ಲಿ ಸ್ಯಾಂಡಲ್‌ವುಡ್‌ನ ರೋಮ್ಯಾಂಟಿಕ್ ಕಪಲ್ ಐಂದ್ರಿತಾ ರೇ ಮತ್ತು ದಿಗಂತ್ ಕೂಡಾ ಒಬ್ರು.
ಹೌದು.. ಐಂದ್ರಿತಾ ದಿಗಂತ್ ಮತ್ತು ಅವರ ಅಪ್ಪ ಅಮ್ಮ ಮತ್ತು ಮುದ್ದಿನ ಶ್ವಾನಗಳ ಜೊತೆ ಜಾಲಿ ಟ್ರಿಪ್ ಅಂತಾ ಕೊಡಗಿಗೆ ಭೇಟಿ ನೀಡಿದ್ರು.
ಈ ಬಗ್ಗೆ ಐಂದ್ರಿತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರಿಪ್‌ನ ಫೋಟೋ ಹಂಚಿಕೊಂಡಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ.
ಮದುವೆ ಬಳಿಕ ಕೆಲ ದಿನಗಳ ಕಾಲ ಶೂಟಿಂಗ್‌ಗೆ ಬ್ರೇಕ್ ತೆಗೆದುಕೊಂಡಿದ್ದ ಐಂದ್ರಿತಾ ಮತ್ತೆ ತೆರೆಮೇಲೆ ಮಿಂಚೋಕ್ಕೆ ರೆಡಿಯಾಗಿದ್ರು. ಶೂಟಿಂಗ್ ಶುರುವಾಗುವ ಹೊತ್ತಿಗೆ ಕೊರೊನಾ ವಕ್ಕರಿಸಿ, ಶೂಟಿಂಗ್ ಇಲ್ಲದೇ ಮನೆಯಲ್ಲೇ ಕೂರುವಂತಾಯಿತು. ಸಿನಿಮಾ ಶೂಟಿಂಗ್‌ಗೆ ಸರ್ಕಾರದ ಅನುಮತಿ ಸಿಕ್ಕ ಬಳಿಕ ಶೂಟಿಂಗ್ ಶುರುವಾಗಲಿದ್ದು, ಐಂದ್ರಿತಾ ಮತ್ತೆ ತೆರೆ ಮೇಲೆ ಮೋಡಿ ಮಾಡೋಕ್ಕೆ ರೆಡಿಯಾಗಿದ್ದಾರೆ.
ಇನ್ನು ಈ ವರ್ಷ ದಿಗಂತ್ ಅಭಿನಯದ ಹುಟ್ಟುಹಬ್ಬದ ಶುಭಾಶಯಗಳು, ಗಾಳಿಪಟ- 2, ವೆರ್ ಈಸ್ ಮೈ ಕನ್ನಡಕ, ಮಾರಿಗೋಲ್ಡ್ ಸಿನಿಮಾ ರೆಡಿಯಾಗ್ತಿದೆ.
2018ರ ಡಿಸೆಂಬರ್‌ನಲ್ಲಿ ನಂದಿಬೆಟ್ಟದ ಸಮೀಪವಿರುವ ಡಿಸ್ಕವರಿ ವಿಲೇಜ್‌ನಲ್ಲಿ ದಿಗಂತ್ ಮತ್ತು ಐಂದ್ರಿತಾ ಬೆಂಗಾಲಿ ಮತ್ತು ಹವ್ಯಕ ಬ್ರಾಹ್ಮಣ ಪದ್ಧತಿ ಪ್ರಕಾರ ವಿವಾಹವಾಗಿದ್ದರು.
