- Advertisement -
Recipe: ಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿ, 3 ಈರುಳ್ಳಿ, 1 ಸ್ಪೂನ್ ಜೀರಿಗೆ, 5 ಒಣಮೆಣಸು, ಕರಿಬೇವು, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ರೊಟ್ಟಿ ಬೇಯಿಸಲು ಬೇಕಾದಷ್ಟು ಎಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ: ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, 5 ತಾಸು ಅಕ್ಕಿ ನೆನೆಸಿ, ಬಳಿಕ ಮಿಕ್ಸಿಗೆ ಹಾಕಿ, ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ಉಪ್ಪು, ಜೀರಿಗೆ, ಒಣಮೆಣಸು ಸೇರಿಸಿಕೊಳ್ಳಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ರುಬ್ಬಿಕೊಂಡ ಅಕ್ಕಿ, ಈರುಳ್ಳಿ, ಕರಿಬೇವು, ಕೊತ್ತೊಂಬರಿ ಸೊಪ್ಪು, ಉಪ್ಪು ಸೇರಿಸಿ ಮಿಕ್ಸ್ ಮಾಡಿ.
ಈಗ ತವ್ವಾ ಬಿಸಿ ಮಾಡಿ, ಎಣ್ಣೆ ಸವರಿ, ರೊಟ್ಟಿ ತಟ್ಟಿ ಬೇಯಿಸಿ. ಅಕ್ಕಿರೊಟ್ಟಿಯೊಂದಿಗೆ ಬೆಣ್ಣೆ ಮತ್ತು ತೆಂಗಿನಕಾಯಿಯ ಗಟ್ಟಿ ಚಟ್ನಿ ತಿನ್ನಲು ರುಚಿಯಾಗುತ್ತದೆ.
- Advertisement -