Sandalwood News: ಭಾರತೀಯ ಚಿತ್ರರಂಗದಲ್ಲೇ ಇದೀಗ ಸೌತ್ ಇಂಡಿಯನ್ ಸಿನಿಮಾರಂಗದ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಬರೀ ಭಾರತೀಯ ಚಿತ್ರರಂಗ ಮಾತಾಡುತ್ತಿಲ್ಲ. ಬದಲಾಗಿ ಇಡೀ ವಿಶ್ವವೇ ನಮ್ಮ ಸೌತ್ ಫಿಲ್ಮ್ಸ್ ಬಗ್ಗೆ ಪ್ರೀತಿಯಿಂದ ಮಾತಾಡುತ್ತಿದೆ. ಇದಕ್ಕೆ ಕಾರಣ, ಸೌತ್ ಇಂಡಿಯನ್ ಫಿಲ್ಮ್ಸ್ ನಲ್ಲಿರುವ ಕಂಟೆಂಟ್. ಹೌದು, ಈ ಕಾರಣಕ್ಕಾಗಿಯೇ ಇಂದು ಬಾಲಿವುಡ್ ಮಂದಿ ಕೂಡ ನಮ್ಮ ಸೌತ್ ಸಿನಿಮಾಗಳ ಬಗ್ಗೆ ಹೊಗಳುತ್ತಿದ್ದಾರೆ. ಇಷ್ಟೇ ಆಗಿದ್ದರೆ, ಇದನ್ನು ಹೇಳುವ ಅಗತ್ಯ ಇರುತ್ತಿರಲಿಲ್ಲ. ಬಾಲಿವುಡ್ ನ ಸೂಪರ್ ಸ್ಟಾರ್ ಗಳು ನಮ್ಮ ಕನ್ನಡದ ಸಿನಿಮಾಗಳು ಮತ್ತು ಸ್ಟಾರ್ಸ್ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.
ಇಷ್ಟಕ್ಕೂ ಸೌತ್ ಸಿನಿಮಾಗಳು ಮತ್ತು ಸೌತ್ ಸ್ಟಾರ್ಸ್ ಗಳನ್ನು ಹೊಗಳಿದ ಆ ಬಾಲಿವುಡ್ ಸ್ಟಾರ್ಸ್ ಯಾರು? ಸಹಜವಾಗಿಯೇ ಈ ಪ್ರಶ್ನೆ ನಿಮ್ಮನ್ನು ಕಾಡುತ್ತೆ. ಅಂದಹಾಗೆ, ಸೌತ್ ಸಿನಿಮಾಗಳನ್ನು ಹೊಗಳಿದ್ದು ಬೇರಾರೂ ಅಲ್ಲ, ಬಾಲಿವುಡ್ ನ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್. ಇವರಿಬ್ಬರೂ ಸೌತ್ ಫಿಲ್ಮ್ ಇಂಡಸ್ಟ್ರಿಯನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆ ಕೂಡ ಕನ್ನಡದ ಕೆಜಿಎಫ್ ಹಾಗು ಯಶ್ ಬಗ್ಗೆ ಖುಷಿಯ ಮಾತುಗಳನ್ನಾಡಿದರೆ, ಅತ್ತ, ಕಾಂತಾರ ಚಿತ್ರ ಮತ್ತು ರಿಷಭ್ ಬಗ್ಗೆಯೂ ಹೇಳಿದ್ದಾರೆ.
ಅದೇನೆ ಇರಲಿ, ಸೌತ್ ಸಿನಿಮಾಗಳು ಸಖತ್ ಸಕ್ಸಸ್ ಕಾಣುತ್ತಿರೋದು ಗೊತ್ತೇ ಇದೆ. ಇದು ನಿಜಕ್ಕೂ ಬಾಲಿವುಡ್ ಮಂದಿಯನ್ನು ಬೆಚ್ಚಿ ಬೀಳಿಸಿರೋದಂತೂ ನಿಜ. ಇತ್ತೀಚಿನ ದಿನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸೌತ್ ಸಿನಿಮಾಗಳು ವಿಶ್ವ ಮಟ್ಟದಲ್ಲೂ ಜೋರು ಸದ್ದು ಮಾಡುತ್ತಿವೆ. ಅದರ ಜೊತೆಗೆ ಭರ್ಜರಿ ಹಣ ಗಳಿಕೆಯಲ್ಲೂ ಯಶಸ್ಸು ಕಾಣುತ್ತಿವೆ. ಸಹಜವಾಗಿಯೇ ಈ ಬೆಳವಣಿಗೆ ಬಾಲಿವುಡ್ ಮಂದಿಗೆ ಅಚ್ಚರಿ ತಂದಿರೋದು ನಿಜ.
ಸೌತ್ ಸಿನಿಮಾಗಳ ಭರ್ಜರಿ ಯಶಸ್ಸು ಒಂದು ಕಡೆಯಾದರೆ, ಬಾಲಿವುಡ್ ನ ಸ್ಟಾರ್ಸ್ ಸಿನಿಮಾಗಳೂ ಕೂಡ ಸಾಲು ಸಾಲಾಗಿ ಮಕಾಡೆ ಮಲಗುತ್ತಿವೆ. ಬೆರಳೆಣಿಕೆಯ ಚಿತ್ರಗಳನ್ನು ಹೊರತುಪಡಿಸಿದರೆ ಬಾಲಿವುಡ್ ನ ಬಹುತೇಕ ಸರಕು ಖಾಲಿಯಾದಂತೆ ಕಾಣುತ್ತಿದೆ. ಇದು ಸಿನಿಮಾ ಪಂಡಿತರ ಲೆಕ್ಕಾಚಾರದ ಮಾತು. ಆ ಮಾತಿಗೆ ಬಾಲಿವುಡ್ ಸ್ಟಾರ್ ನಟರಾದ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಕೂಡ ಧ್ವನಿಯಾಗಿದ್ದಾರೆ ಅಂದರೆ ನಂಬಲೇಬೇಕು.
ಅಷ್ಟಕ್ಕೂ ಅವರಿಬ್ಬರೇಕೆ ಸೌತ್ ಸಿನಿಮಾಗಳಿಗೆ ಬಹು ಪರಾಕ್ ಹೇಳಿದ್ದು? ಈ ಪ್ರಶ್ನೆಗೆ ಉತ್ತರ, ಮುಂಬೈನಲ್ಲಿ ಹಿಂದೂಸ್ತಾನ್ ಟೈಮ್ಸ್ ಆಯೋಜಿಸಿದ್ದ ಲೀಡರ್ ಶಿಪ್ ಸಮ್ಮಿಟ್. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್, ಸೌತ್ ಇಂಡಿಯನ್ ಸಿನಿಮಾಗಳು ಈಗಂತೂ ಹೆಚ್ಚು ಯಶಸ್ಸು ಪಡೆಯುತ್ತಿವೆ. ಬರೀ ಮನರಂಜನೆ ಮಾತ್ರವಲ್ಲದೆ, ಗಳಿಕೆಯಲ್ಲೂ ಸಾವಿರಾರು ಕೋಟಿ ರುಪಾಯಿ ಮಾಡುತ್ತಿವೆ. ನಿಜಕ್ಕೂ ಇದು ಉತ್ತಮ ಬೆಳವಣಿಗೆ ಅಂತ ಅಕ್ಷಯ್ ಕುಮಾರ್ ಮನದುಂಬಿ ನಮ್ಮ ಸೌತ್ ಇಂಡಿಯನ್ ಸಿನಿಮಾಗಳ ಬಗ್ಗೆ ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಇಂತಹ ಯಶಸ್ಸಿನ ಸಿನಿಮಾಗಳು ಈಗ ಬಾಲಿವುಡ್ ಗೂ ಬೇಕಾಗಿದೆ. ಆದರೆ, ಅದೇಕೋ ಏನೋ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಒಗ್ಗಟ್ಟಿದೆ. ಅಲ್ಲಿನ ತಾಂತ್ರಿಕ ವರ್ಗ ತುಂಬಾ ಹೊಂದಾಣಿಕೆಯಿಂದ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಹಾಗಾಗಿಯೇ ಈ ಸಕ್ಸಸ್ ಪಡೆಯೋಕೆ ಸಾಧ್ಯವಾಗಿದೆ ಎಂಬುದು ಅಕ್ಷಯ್ ಆವರ ಮಾತು.
ಇದು ಅಕ್ಷಯ್ ಕುಮಾರ್ ಅವರ ಮೆಚ್ಚುಗೆ ಮಾತುಗಳಾದರೆ, ಅದೇ ಕಾರ್ಯಕ್ರಮದಲ್ಲಿದ್ದ ಅಜಯ್ ದೇವಗನ್ ಕೂಡ ನಮ್ಮ ಸೌತ್ ಇಂಡಿಯನ್ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 90ರ ದಶಕದ ನಮ್ಮ ಹೀರೋಗಳ ನಡುವೆ ಒಗ್ಗಟ್ಟಿತ್ತು. ಸೌಹಾರ್ದತೆ ಇತ್ತು. ಪ್ರೀತಿ, ಸ್ನೇಹವಿತ್ತು. ಅಷ್ಟೇ ಅಲ್ಲ, ಆರೋಗ್ಯಕರ ಸ್ಪರ್ಧೆಯೂ ಇತ್ತು. ನಾನು, ಅಕ್ಷಯ್, ಶಾರುಖ್, ಸಲ್ಮಾನ್, ಅಮೀರ್ ಅವರು ಪರಸ್ಪರರ ಸಿನಿಮಾಗಳ ಯಶಸ್ಸಿಗೆ ಶ್ರಮಿಸುತ್ತಿದ್ದೆವು. ಆದರೆ, ಈಗಿರುವ ಸ್ಟಾರ್ ಗಳಲ್ಲಿ ಅಂತಹ ವಾತಾವರಣ ಕಾಣುತ್ತಿಲ್ಲ ಅಂತ ಅಕ್ಷಯ್ ಕುಮಾರ್ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ.
ಒಗ್ಗಟ್ಟಿನ ಕೊರತೆ ಒಂದೆಡೆಯಾದರೆ, ಇಂಡಸ್ಟ್ರಿಯಲ್ಲಿ ಒಬ್ಬರು ಮತ್ತೊಬ್ಬರನ್ನು ಸರಿಯಾಗಿ ಗೌರವಿಸುತ್ತಿಲ್ಲ ಅನ್ನೋದು ಅಕ್ಷಯ್ ಮಾತು. ಅದೇನೆ ಇರಲಿ, ಸೌತ್ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಎಲ್ಲರಿಗೂ ನಿರೀಕ್ಷೆ ಇದೆ. ಸಕ್ಸಸ್ ಫುಲ್ ಇಂಡಸ್ಟ್ರಿ ಎಂಬ ಮಾತೂ ಇದೆ. ಹಾಗೆ ನೋಡಿದರೆ, ಭಾರತೀಯ ಚಿತ್ರರಂಗವನ್ನೊಮ್ಮೆ ತಿರುಗಿ ನೋಡುವಂತೆ ಮಾಡಿದ ಸೌತ್ ಸಿನಿಮಾಗಳೇ ಇದಕ್ಕೆಲ್ಲಾ ಕಾರಣ, ಕೆಜಿಎಫ್, ಬಾಹುಬಲಿ, ಕಾಂತಾರ, ಪುಷ್ಪ, ಆರ್ ಆರ್ ಆರ್ ಸೇರಿದಂತೆ ಮಲಯಾಳಂನಲ್ಲಿ ಬಂದಂತಹ ಅನೇಕ ಹೊಸಬರ ಸಿನಿಮಾಗಳ ಯಶಸ್ಸು ಜಾಗತಿಕ ಮಟ್ಟದಲ್ಲಿ ಸೌಂಡು ಮಾಡಿರೋದೇ ಎಲ್ಲರೂ ಮಾತಾಡುವಂತೆ ಮಾಡಿದೆ.
ಒಂದಂತೂ ನಿಜ, ಭಾರತೀಯ ಚಿತ್ರರಂಗಕ್ಕೆ ದೊಡ್ಡಣ್ಣನಂತಿದ್ದ ಬಾಲಿವುಡ್ ಮಂದಿಯೇ, ಅದೇಕೋ ಬೆಚ್ಚಿಬಿದ್ದಂತೆ ಕಾಣುತ್ತಿದೆ. ಇದು ಕಾಂಪಿಟೇಷನ್ ಕಾಲ. ಅದರಲ್ಲೂ ಸಿನಿಮಾ ನೋಡುವ ನೋಡುಗನಿಗೆ ಏನು ಬೇಕು, ಏನು ಬೇಡ ಎಂಬ ನಾಡಿಮಿಡಿತದ ಅರಿವಿರಬೇಕು. ಅಂಥದ್ದೊಂದು ಅರಿವು ನಮ್ಮ ಸೌತ್ ಸಿನಿಮಾ ಮೇಕರ್ಸ್ ಗೆ ಇದ್ದಂತಿದೆ. ಆ ಕಾರಣಕ್ಕೆ ಇಂದು ಸೌತ್ ಸಿನಿಮಾಗಳು ಸಖತ್ ಸೌಂಡ್ ಮಾಡುತ್ತಿವೆ. ಎಲ್ಲರೂ ಇತ್ತ ತಮ್ಮ ಚಿತ್ತವನ್ನು ಹರಿಸುವಂತೆ ಮಾಡಿದೆ. ಸದ್ಯಕ್ಕೆ ಈಗ ಕೊಟ್ಟಿರುವ ಕೊಡುತ್ತಿರುವ ಸಕ್ಸಸ್ ಬಗ್ಗೆ ಬಾಲಿವುಡ್ ಸ್ಟಾರ್ಸ್ ಮಾತಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಸೌತ್ ನ ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿವೆ. ಪುಷ್ಪ 2, ಮ್ಯಾಕ್ಸ್, ಟಾಕ್ಸಿಕ್, ಯುಐ ಸೇರಿದಂತೆ ಒಂದಷ್ಟು ತೆಲುಗು, ತಮಿಳು ಮಲಯಾಳಂನ ಸ್ಟಾರ್ಸ್ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿರೋದಂತೂ ಸುಳ್ಳಲ್ಲ ಬಿಡಿ…
ವಿಜಯ್ ಭರರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ