Sunday, September 8, 2024

Latest Posts

ಅಕ್ಷಿತ್ ಶಶಿಕುಮಾರ್ ಅಭಿನಯದ ಸೀತಾಯಣ ಈ ಶುಕ್ರವಾರ ರಿಲೀಸ್..!

- Advertisement -

ಸುಪ್ರೀಮ್ ಹೀರೋ ಶಶಿಕುಮಾರ್ ಪುತ್ರ ಸ್ಯಾಂಡಲ್‌ವುಡ್‌ಗೆ ಕಾಲಿಡೋ ತವಕದಲ್ಲಿದ್ದಾರೆ. ಇದೇ ಇನ್ನೆರಡು ದಿನದಲ್ಲಿ ಅಕ್ಷಿತ್ ಶಶಿಕುಮಾರ್ ಸೀತಾಯಣ ಮೂಲಕ ಸ್ಯಾಂಡಲ್‌ವುಡ್ ಜರ್ನಿ ಆರಂಭಿಸಲಿದ್ದಾರೆ. ಇಷ್ಟಕ್ಕೂ ಸೀತಾಯಣ ಕೋವಿಡ್ ಬರದೇ ಇದ್ದಿದ್ರೆ ೨೦೨೦ರಲ್ಲೇ ರಿಲೀಸ್ ಆಗಿರಬೇಕಿತ್ತು. ಈಗತಾನೆ ಕಾಲೇಜು ಮುಗಿಸಿ ಬಂದು ಅಮೂಲ್ ಬೇಬಿ ಥರ ಇರೋ ಅಕ್ಷಿತ್ ಶಶಿಕುಮಾರ್‌ಗೆ ಇಲ್ಲಿ ಜೋಡಿಯಾಗಿರೋದು ಅನ್ಹಿತಾ ಭೂಷಣ್.
ಕನ್ನಡ ಮಾತ್ರ ಅಲ್ಲ ತೆಲುಗಿನಲ್ಲೂ ರಿಲೀಸ್ ಆಗ್ತಿರೋ ಚಿತ್ರ ಲವ್ ಕಮ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇದಾಗಿದ್ದು ಮೊದಲ ಸಿನಿಮಾದಲ್ಲೇ ಪವರ್‌ಫುಲ್ ಪಾತ್ರ ಅಕ್ಷಿತ್ ಶಶಿಕುಮಾರ್‌ಗೆ ಸಿಕ್ಕಿದೆ. ಹಾಗೆ ನೋಡಿದ್ರೆ ಅಕ್ಷಿತ್ ಆಂಧ್ರದಲ್ಲೇ ಆಡಿ¸ಷನ್ ಕೊಟ್ಟು ಸೆಲೆಕ್ಟ್ ಆದ ಸಿನಿಮಾ ಇದು. ಆಡಿಷನ್‌ನಲ್ಲಿ ಸೆಲೆಕ್ಟ್ ಆಗೋವರೆಗೂ ಇವರು ಕನ್ನಡದ ದೊಡ್ಡ ನಟರೊಬ್ಬರ ಪುತ್ರ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಗೊತ್ತಾದ ನಂತ್ರ ನಿರ್ದೇಶಕ ಪ್ರಭಾಕರ್ ಆರಿಪಾಕ ನಿರ್ದೇಶನದ ಲಲಿತ ರಾಜ್ಯ ಲಕ್ಷಿö್ಮ ನಿರ್ಮಾಣದ ಚಿತ್ರವನ್ನು ತೆಲುಗು ಮತ್ತು ಕನ್ನಡ ಎರಡರಲ್ಲೂ ರಿಲೀಸ್‌ಗೆ ಪ್ಲಾö್ಯನ್ ಮಾಡಿದ್ದಾರೆ. ಈಗ ಇದೇ ೨೭ಕ್ಕೆ ಚಿತ್ರ ರಿಲೀಸ್ ಆಗ್ತಿದೆ.
ರೋಮ್ಯಾಂಟಿಕ್ ದೃಶ್ಯಗಳು ಚಾಲೆಂಜಿAಗ್ ಅನ್ನಿಸ್ತು ಅಂತ ಹೇಳ್ತಿರೋ ಸುಪ್ರೀಮ್ ಹೀರೋ ಪುತ್ರ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ತೆಲುಗಿನ ತಾರಾಗಣವೇ ಚಿತ್ರದಲ್ಲಿದ್ದು, ಅನೀಶ್ ಬೆಳ್ತಂಗಡಿ ಮತ್ತು ಒಂದಿಬ್ಬರು ಕನ್ನಡದ ನಟರು ಮಾತ್ರ ಚಿತ್ರದಲ್ಲಿದ್ದರೂ ಒಳ್ಳೆಯ ಚಿತ್ರವನ್ನು ಕನ್ನಡಿಗರು ಸದಾ ಸ್ವೀಕರಿಸ್ತಾರೆ. ನನ್ನನ್ನೂ ತಂದೆಯAತೆಯೇ ಹರಸಿ, ಆಶೀರ್ವದಿಸಿ ಅಂತ ಕೇಳಿಕೊಳ್ತಾರೆ ಅಕ್ಷಿತ್ ಶಶಿಕುಮಾರ್. ಅಕ್ಷಿತ್ ಪೂರ್ತಿ ಮಾತುಕತೆಯನ್ನು ನಮ್ಮ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು

- Advertisement -

Latest Posts

Don't Miss