Political News: ಪ್ರಧಾನಿ ಮೋದಿಗೆ ಕುಟುಂಬಸ್ಥರೇ ಇಲ್ಲವೆಂದು ಲಾಲೂಪ್ರಸಾದ್ ಯಾದವ್ ಟೀಕಿಸಿದ್ದು, ಇದಕ್ಕೆ ಬಿಜೆಪಿಗರು ಆಕ್ರೋಶ ಹೊರಹಾಕಿದ್ದರು. ಆದರೆ ಇಂದು ಪ್ರಧಾನಿ ಮೋದಿ, ಭಾರತೀಯರೆಲ್ಲರೂ ನನ್ನ ಪರಿವಾರದವರೇ ಎನ್ನುವ ಮೂಲಕ, ಲಾಲೂ ಟೀಕೆಗೆ ತಿರುಗೇಟು ನೀಡಿದ್ದಾರೆ.
ಇಂದು ತೆಲಂಗಾಣದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿರುವ ಪ್ರಧಾನಿ ಮೋದಿ, ನೀವೆಲ್ಲ ನನ್ನ ಕುಟುಂಬ ಮತ್ತು ನಾನು ನಿಮ್ಮವ ಎಂದಿದ್ದಾರೆ. ನಾನು ಬಾಲ್ಯದಲ್ಲಿಯೇ ಮನೆಯನ್ನು ತೊರೆದಿದ್ದೇನೆ. ದೇಶಕ್ಕಾಗಿ ಬದುಕುವ ಕನಸ್ಸು ಕಂಡಿದ್ದೇನೆ. ನನಗೆ ಯಾವುದೇ ವೈಯಕ್ತಿಕ ಕನಸುಗಳಿಲ್ಲ. ನಿಮ್ಮ ಕನಸುಗಳೇ ನನ್ನ ನಿರ್ಣಯವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಲ್ಲದೇ ನೀವು ನನ್ನ ಕುಟುಂಬ, ಯಾರು ಇಲ್ಲದವರಿಗೂ ಮೋದಿ ಇದ್ದಾನೆ. ದೇಶದಲ್ಲಿರುವ ತಾಯಂದಿರು, ಹೆಣ್ಣು ಮಕ್ಕಳು ನನ್ನ ಸಹೋದರಿಯರು. ದೇಶದ ಪ್ರತೀ ಬಡವರೂ ನನ್ನ ಕುಟುಂಬದವರೇ, ನಾನು ಅವರಿಗಾಗಿ, ಅವರು ನನಗಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಿನ್ನೆ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಲಾಲೂಪ್ರಸಾದ್ ಯಾದವ್, ಮೋದಿಯವರು ನಮ್ಮ ರಾಜಕಾರಣವನ್ನು ಕುಟುಂಬ ರಾಾಜಕಾರಣ ಎನ್ನುತ್ತಾರೆ. ಮೋದಿಯವರಿಗೆ ಕುಟುಂಬವಿಲ್ಲದಿದ್ರೆ ನಾವೇನು ಮಾಡಲಿಕ್ಕಾಗುತ್ತದೆ..? ರಾಮಮಂದಿರದ ಬಗ್ಗೆ ಸದಾ ಕೊಚ್ಚಿಕೊಳ್ಳುತ್ತಾರೆ. ಅವರು ನಿಜವಾದ ಹಿಂದೂ ಕೂಡ ಅಲ್ಲ. ನಿಜವಾದ ಹಿಂದೂಗಳು ತಂದೆ ತಾಯಿ ತೀರಿಕೊಂಡಾಗ, ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ. ಆದರೆ ಮೋದಿಯ ತಾಯಿ ತೀರಿಕೊಂಡಾಗ ಮೋದಿ ಹಾಗೆ ಮಾಡಲಿಲ್ಲವೆಂದು ಲಾಲೂ ವ್ಯಂಗ್ಯವಾಡಿದ್ದರು.
ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ