International News: ಲೈವ್ ನ್ಯೂಸ್ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು, ಸಿಬ್ಬಂದಿಗಳಿಗೆ ಬಂದೂಕು ತೋರಿಸಿ, ಬೆದರಿಸಿದ ಘಟನೆ ಈಕ್ವೇಡರ್‌ನಲ್ಲಿ ನಡೆದಿದೆ.
ಈ ದುಷ್ಕರ್ಮಿಗಳು ಬಂದೂಕುಧಾರಿಗಳಾಗಿದ್ದು, ಆ್ಯಂಕರ್‌ನನ್ನು ಗುಂಡಿಕ್ಕುವುದಾಗಿ ಬೆದರಿಸಿದೆ. ಆತ ಬೇಡಾ ನನ್ನನ್ನು ಕೊಲ್ಲಬೇಡಿ ಎಂದು ಗೋಗರೆದಿದ್ದು ಕೂಡ, ಲೈವ್‌ನಲ್ಲಿ ಹೋಗಿದೆ. ಅಟ್ಯಾಕ್ ಆಗಿ 15 ನಿಮಿಷ ನ್ಯೂಸ್ ಲೈವ್ ಹೋಗಿದ್ದು, ದುಷ್ಕರ್ಮಿಗಳು ಯಾವ ರೀತಿ ಬೆದರಿಸಿದ್ದಾರೆ ಎಂಬುದನ್ನು ಕೂಡ ಜನ ನೋಡಿದ್ದಾರೆ. ಇನ್ನು ನ್ಯೂಸ್ ಚಾನೆಲ್ ಸಿಬ್ಬಂದಿಗಳನ್ನು ಸಹ ಒತ್ತೆಯಾಳಾಗಿ ಇರಿಸಕೊಳ್ಳಲಾಗಿತ್ತು.
ಇದೀಗ ಅಟ್ಯಾಕ್ ಮಾಡಿದವರಲ್ಲಿ 13 ಜನರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಚಾನೆಲ್‌ನ ಇಬ್ಬರು ಸಿಬ್ಬಂದಿಗಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್ ನಿರ್ಧಾರ
‘ನಮ್ಮ ಗ್ಯಾರಂಟಿ ಕಾಪಿ ಮಾಡಿ, ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿಯವರು ಅಷ್ಟು ನಿರ್ಲಜ್ಜರಾಗಿದ್ದಾರೆ’
‘ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುವುದಕ್ಕೆ ಕಾಂಗ್ರೆಸ್ ನೀಡಿರುವ ಕಾರಣವೇ ಹಾಸ್ಯಾಸ್ಪದ’