Political News: ಧಾರವಾಡ: ರಾಮ ಮಂದಿರ ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಧಾರವಾಡದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಕೆಲ ಸ್ನೇಹಿತರು ಈಗ ತಾನೇ ಬಂದು ನನಗೆ ಆಹ್ವಾನ ಮಾಡಿದ್ದಾರೆ.
ಇತಿಹಾಸ ನೋಡಿದ್ರೆ ಆರ್ ಎಸ್ ಎಸ್ ಅಜೆಂಡಾ ಯಾವತ್ತೂ ರಾಮಮಂದಿರ ಇರಲಿಲ್ಲ. RSS ಶುರುವಾಗಿ ನೂರು ವರ್ಷ ಆಗಿದೆ. VHP ಆಗಲಿ RSS ಆಗಲಿ ಅಜೆಂಡಾ ಇರಲಿಲ್ಲ. 30ವರ್ಷದ ಹಿಂದೆ ಬಾಬರಿ ಮಸೀದಿ ಗಲಾಟೆ ಆದಮೇಲೆ. ರಾಮ ಮಂದಿರ ಚರ್ಚೆ ಆಗಿದೆ ಅದು ಎಲ್ಲರಿಗೂ ಗೊತ್ತಿದೆ. ಚುನಾವಣೆ ವೇಳೆ ಅಷ್ಟೇ ರಾಮಮಂದಿರ ಚರ್ಚೆ ಆಗುತ್ತೆ, ಆಮೇಲೆ ಕ್ಲೋಸ್ ಆಗುತ್ತೆ. ಮಾದ್ಯಮ ಮೇಲೆ ನಿಮ್ಮ ಸಾನಿಧ್ಯ ಇದೆ ಅದು ಚುನಾವಣೆ ಬಳಿಕ ಬದಲಾವಣೆ ಆಗುತ್ತೆ. ಅದಾದ ಮೇಲೆ ನೀವು ತೋರಿಸಲ್ಲ. ನೀವು ಕೂಡಾ ರಾಮ ಮಂದಿರ ಪ್ರಶ್ನೆ ಕೇಳೋದು ಚುನಾವಣೆ ವರೆಗೆ ಮಾತ್ರ. ಅದಾದ ನಂತರ ನೀವು ಕೇಳಲ್ಲ, ನನಗೆ ಈಗಷ್ಟೇ ಬಂದು ಆಹ್ವಾನ ಮಾಡಿದ ಗೆಳೆಯರೂ ಮರೆತು ಬಿಡ್ತಾರೆ. ಇದು ಚುನಾವಣೆ ಗಿಮಿಕ್, ಅಧಿಕಾರಕ್ಕೆ ಬರಬೇಕು. ನನಗೆ ರಾಮ ಕನಸಿನಲ್ಲಿ ಬಂದಿದ್ರು, ರಾಮ ಬಂದು ಕನಸಿಲ್ಲಿ ಬಿಜೆಪಿಯವರು ಇದನ್ನ ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ನಾನು ಎಲ್ಲರಿಗೆ ದೇವರಾಗಿದ್ದೇನೆ, ನನಗೆ ಬಂದ ಕನಸಿದು. ಎಲ್ಲೊ ಒಂದು ಕಡೆ ನಿಲ್ಲಿಸಬೇಕಲ್ಲಾ ಇದು, ಈ ಸಮಯದಲ್ಲಿ ಚುನಾವಣೆ ಬಿಟ್ರೆ ಮತ್ತೇನಿದೆ. ಹಿಂದಿನ ವರ್ಷ ಯಾಕಿರಲಿಲ್ಲ ಈ ಕಥೆ, ಕಳೆದ ಬಾರಿ ಫುಲ್ವಾಮಾ ತಂದ್ರು. ಈಗ ರಾಮ ಮದಿರ ತಂದ್ರು, ಹಿಂದೂತ್ವ ತಂದ್ರು, ಇದನ್ನ ಬಿಟ್ರೆ ಬೇರೆ ಏನಾದ್ರು ಇದೆಯಾ..? ತಾವು ಕುಡಾ ಕೇಳಬೇಕು, ನಮಗು ಸುಸ್ತಾಗಿದೆ, ಜನರು ಸರಿಯಾಗಿ ಕೇಳಬೇಕಾದರೆ ನಿಮ್ಮಿಂದನೇ. ದಯಮಾಡಿ ನಮ್ಮನ್ನ ಸ್ವಲ್ಪ ಉಳಿಸಿ ಎಂದು ತಮ್ಮಲ್ಲಿ ಕೈಮುಗಿತೆನಿ ಎಂದು ಮಾದ್ಯಮದವರಿಗೆ ಲಾಡ್ ಕೈ ಮುಗಿದಿದ್ದಾರೆ.
ಕನಸಲ್ಲಿ ಇದೇ ಹೇಳಿದ್ದು ಎಲ್ಲ ಜನಾಂಗದಲ್ಲಿ ರಾಮ ಇದ್ದಾರೆ. ಮುಸ್ಲಿಮರು ರಾಮನ ಪೂಜೆ ಮಾಡಬಹುದು, ಎಲ್ಲ ಜನಾಂಗದವರು ಮಾಡಬಹುದು. ಇನ್ನು ಹಲವು ದೇವರು ಇದಾವೆ, ಇದು ಕೇವಲ ರಾಜಕೀಯ ಲಾಭ ಪಡೆಯಲು ಮಾಡುವದು, ಅವರು ಅದನ್ನೇ ಮಾಡ್ತಾರೆ. ಇವರು ಯಾರು ಕರಿಲಿಕ್ಕೆ ನಮಗೆ..? ಇಷ್ಟು ವರ್ಷ ಕರೆದಿಲ್ಲ, ಇಗ ಯಾಕೆ ಕರಿತಾರೆ..? ನರೇಂದ್ರ ಮೋದಿ ಕಳೆದ ೧೦ ವರ್ಷದಲ್ಲಿ ಎಷ್ಟು ಸಲ ರಾಮಮಂದಿರಕ್ಕೆ ಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಮಾಧ್ಯಮದವರು ನೀವೆಷ್ಟು ಸರಿ ಮಂದಿರಕ್ಕೆ ಹೋಗಿದ್ದೀರಿ. ಪೋಟೋ ಇದಾವಾ ನಿಮ್ಮವು..? ನೀವೇ ಹೋಗಿಲ್ಲ, ಅವರು ಹೋಗಿಲ್ಲ ಬೇರೆಯವರನ್ನ ಯಾಕೆ ಕರಿತಿರಿ..? ನೀವು ಯಾರು ನಮ್ಮನ್ನು ಕರೆಯೋಕೆ..? ಬೇರೆಯವರನ್ನು ಕರೆಯಬೇಕಲ್ಲ, ಎಲ್ಲರಿಗೂ ಕರೆಯಬೇಕು. ಕೇವಲ ರಾಜಕೀಯ ಲಾಭಕ್ಕೆ ಪ್ರಚಾರ ಪಡೆಯಲು ಇದೆಲ್ಲ ಎಂದು ಸಂತೋಷ್ ಲಾಡ್ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ.
ಈಗ ಶಂಕರಾಚಾರ್ಯರು ಬರಲ್ಲ ಅಂತ ಹೇಳಿದ್ದಾರೆ, ಕಾರಣ ಏನು..? ಮೋದಿಯವರು ರಾಮಮಂದಿರ ಪರ ಹೋರಾಟ ಮಾಡಿದ ನಿದರ್ಶನ ಇದೆ. ಶಂಕರಾಚಾರ್ಯರು ಇವರು ಅವತ್ತು ಹೋರಾಟ ಮಾಡಲ್ಲ ಅಂತ ಹೇಳಿದ್ದಾರೆ. ರಾಜಕೀಯ ಲಾಭಕ್ಕೆ ಹೀಗೆ ಮಾಡುತ್ತಿದ್ದಾರೆ ಅಂತ ಅವರೇ ಹೇಳಿದ್ದಾರೆ. ನಾವು ರಾಜಕೀಯವಾಗಿ ಎಲ್ಲ ಧರ್ಮವನ್ನ ಪಾಲಿಸುತ್ತೇವೆ. ಲಾಭ ನಷ್ಟ ಇದರಲ್ಲಿ ಏನು ಇಲ್ಲ, ನಾವು ಎಲ್ಲ ಧರ್ಮವನ್ನ ಸರ್ವಧರ್ಮ ನೋಡಿಕೊಳ್ಳುತ್ತೇವೆ.
ಕಾಂಗ್ರೆಸ್ ನವರೂ ಹಿಂದೂ ವಿರೋಧಿ ಅಂತ ತೋರಿಸುತ್ತಿದ್ದಾರೆ. ಹಿಂದೂ ಕೊಡಿಫೀಕೇಶನ್ ಬಿಲ್ ತಂದವರು ಯಾರು..? ಮೊದಲು ಹಿಂದೂ ಅಂತ ಇರುತ್ತಿರಲಿಲ್ಲ, ವೇ ಆಫ್ ಲಿವಿಂಗ್ ಸುಪ್ರೀಂ ಕೋರ್ಟ್ ಹಾಗೂ ಮೋದಿಯವರೆ ಹೇಳಿದ್ದಾರೆ. ಇದರ ಬಗ್ಗೆ ಬಹಿರಂಗವಾಗಿ ಚರ್ಚೆ ಆಗಬೇಕು. ಹಿಂದೂ ಕೊಡಿಫಿಕೇಶ್ ಬಿಲ್ ಬಂದಾಗ ಸಂಸತ್ ನಲ್ಲಿ ವಿರೋಧ ಮಾಡಿದವರು ಯಾರು..? ಹಿಂದೂ ಕೊಡಿಫಿಕೇಶ್ ಬಿಲ್ ಜಾರಿಯಾಗಲಿಲ್ಲ ಆಗ ಅಂಬೇಡ್ಕರ್ ರಾಜೀನಾಮೆ ಕೊಡ್ತಾರೆ.
ಇವರು ಅವರ ಪೋಟೋ ಹಾಕಿಕೊಂಡು ಪೂಜೆ ಮಾಡಬೇಕು. ಅಂಬೇಡ್ಕರ್ ಆ ಬಿಲ್ ಪಾಸ್ ಆಗದ ಹಿನ್ನೆಲೆ ರಾಜೀನಾಮೆ ಕೊಡ್ತಾರೆ. ಬಿಲ್ ಪಾಸ್ ಆಗಲು ಕಾರಣ ಅಂಬೇಡ್ಕರ್ ಮತ್ತು ನೆಹರು ಕಾರಣ. ಎಷ್ಟು ಶಕ್ತಿ ಪೀಠಗಳಿವೇ ನಮ್ಮ ದೇಶದಲ್ಲಿ..? 16 ಶಕ್ತಿಪೀಠ ಗಳಿವೇ ಅವೆಲ್ಲ ಇವರ ಮಾತನ್ನೇ ಕೇಳಬೇಕಾ..? ಈಗ ಒಂದು ಹುಚ್ಚು ಹಿಡಿದಿದೆ. ಅದೇ ಪಿಚ್ಚರ್ ನಡೆದಿದೆ ಅದನ್ನೇ ನಡೆಸಬೇಕು ಅಷ್ಟೇ. ಇದರಿಂದ ದೇಶದ ಜನರಿಗೆ ಯಾವುದೇ ಲಾಭ ಇಲ್ಲ. ಕುರ್ಚಿಗಾಗಿ ಮಾಡುತ್ತಿರುವ ಡ್ರಾಮಾ ಇದು. ರಾಜಕೀಯ ಲಾಭ ಬಿಟ್ಟರೆ ಇದರಿಂದ ಹಿಂದೂಗಳಿಗೆ ಲಾಭ ಇಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
10 ವರ್ಷದಲ್ಲಿ 2ಕೋಟಿ ಹಿಂದೂಗಳು ಪಾಸ್ ಪೋರ್ಟ್ ಬಿಟ್ಟು ಬೇರೆ ದೇಶಕ್ಕೆ ಹೋಗಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡೋಣವಾ. ಜಿಡಿಪಿ ಬಗ್ಗೆ ಮಾತನಾಡಬೇಕು. ಇಂದು ಶ್ರೀಲಂಕಾ, ಬಂಗ್ಲಾ, ನೇಪಾಳ ಸೇರಿ ಮಾಲ್ಡೀವ್ಸ್ ಬಗ್ಗೆ ವ್ಯವಹಾರ ಹೇಗಿದೆ..? ವಿಶ್ವಗುರು ಅಂತ ನೀವೇ ಹೇಳ್ತೀರಿ. ಯಾವ ವಿಶ್ವಗುರು ಪಾಲಿಸಿ ಚೆನ್ನಾಗಿದೆ ಇಡೀ ಏಷ್ಯಾ ದಲ್ಲಿ. ಚೈನಾ ದೇಶ ನಮ್ಮ ಒಳಗಡೆ ಬಂದಿದೆ, ಎಲ್ಲ ಕಡೆ ಬಂದು ಮುಗ್ಗರಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
ಲೋಕಸಭಾ ಟಿಕೆಟ್ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಚ್ಚರಿ ಹೇಳಿಕೆ..!