Political News: ಇಂದು ಮಂಡ್ಯದ ಹನುಮಧ್ವಜ ಕೇಸ್‌ಗೆ ಸಂಬಂಧಿಸಿದಂತೆ, ಮಾಜಿ ಸಿಎಂ ಕುಮರಾಸ್ವಾಮಿಯವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ ಮಾಡಿ, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ರಾಜಕಾರಣ ಬೆಳವಣಿಗೆ ನಡಿತಿದೆ. ನಾನು ಮಾಧ್ಯಮದ ಮುಂದೆ ಬರೊದೊ ಕಮ್ಮಿ ಆಗಿದೆ. ಮಂಡ್ಯ ಜಿಲ್ಲೆ ಹಾಳು ಮಾಡೋಕೆ ನಾನು ಬಂದಿದ್ದೇನೆ ಅಂತ ಹೇಳಿದ್ರು ನಿನ್ನೆ ನನಗೆ. ನನ್ನ ಮೇಲೆ ಆಪಾದನೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನೆಡೆದಿರುವ ಆ ಘಟನೆಗೂ ನನಗು ಯಾವುದೇ ಸಂಭಂದ ಇಲ್ಲ. ನನ್ನ ಮೇಲೆ ಯಾಕೆ ದೋಷ ತೋರಸ್ತೀದಿರಾ… ನಾನು ಏನು ಮಾಡ್ದೆ.? ನನಗೆ ಮಂಡ್ಯ ಪ್ರತಿಭಟನೆಗೆ ನನಗೆ ಅಹ್ವಾನ ಬಂದಿತ್ತು. ಅದಿಕ್ಕೆ ನಾನು ಮಂಡ್ಯಕ್ಕೆ ಹೋಗಿದ್ದೆ ಅಷ್ಟೇ. ಕೇಸರಿ ಸಾಲು ಹೆಗಲು ಮೇಲೆ ಹಾಕ್ಕೊಂದುಮೇಲೆ ಹಲವಾರು ಮಾತುಗಳು ಬಂತು. ನಾನು ಕೇಸರಿ ಶಾಲು ಹಾಕ್ಕೊಂಡ್ರೆ ತಪ್ಪೇನು..? ದಲಿತ ಸಮಾಜದಲ್ಲಿ ಕೂಡ ನಾನು ನೀಲಿ ಶಾಲನ್ನು ನಾನು ಧರಿಸಿದ್ದೆ ಆಗ ಯಾರು ಮಾತಾಡಿಲ್ಲ. ನಮ್ಮ ದೇಶದ ರಾಷ್ಟ್ರ ಧ್ವಜದಲ್ಲೂ ಕೂಡ ಕೇಸರಿ ಬಣ್ಣ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಕೇಸರಿ ಬಣ್ಣದ ಶಾಲ್ ಹಾಕಿದ್ದೆ ನನ್ನ ತಪ್ಪಾ ? ನಾನು ನೀಲಿ ಬಣ್ಣದ ಶಾಲು ಕೂಡ ಹಾಕಿದ್ದೀನಿ. ಫೋಟೋ ಬೇಕಾ ? ನನ್ನ ಪಕ್ಷವನ್ನು ನಾನು ಹೇಗೆ ಉಳಿಸಿ ಕೊಳ್ಳಬೇಕು ಅಂಥ ನಿಮ್ಮ ಸಲಹೆ ಬೇಕಾಗಿಲ್ಲ. ನಾನು ಹಿಂದುತ್ವದ ಬಗ್ಗೆ ಮಾತಾಡಿಲ್ಲ, ಸರ್ಕಾರದ. ವೈಫಲ್ಯದ ಬಗ್ಗೆ ಮಾತಾಡಿದೇನೆ. ನನಗೆ ಪಾಠ ಮಾಡ್ಬೇಡಿ ನಿಮ್ಮ ಎಂ ಎಲ್ ಗೆ ಪಾಠ ಮಾಡಿ ಕಾಂಗ್ರೆಸ್ಸಿಗರೇ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಇನ್ನು ಬುದ್ದಿ ಬಂದಿಲ್ಲ. ನಾನು ಮಂಡ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. 5 ದಿನ ಬೇಕಿತ್ತಾ ಹನುಮಾನ್ ಭಾವುಟವನ್ನು ಅಧಿಕಾರಿಗಳು ನೋಡೋಕೆ..? ಏನು ವಿನಯ ಏನು ನಯ ನಾಜೂಕು… ಅಬ್ಬಬ್ಬಾ ನಿಮ್ಮಿಂದ ಕಲಿಬೇಕೂ ನಾನು . ಚುನಾವಣೆಯಲ್ಲಿ ಸೋಲು ಗೆಲುವು .. ನನಿಗೆ ಮುಖ್ಯ ಅಲ್ಲ. ಪೊಲೀಸ್ ಅಧಿಕಾರಿಗಳನ್ನು ಗುಲಾಮರತರ ನೋಡುತ್ತಿದ್ದರೆ, 1989 ರ ಸಮಯ ನೆನಪಿಗೆ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮೊದಲು ಮಂಡ್ಯದಲ್ಲಿ ಶಾಂತಿ ನೆಲೆಸಲಿ. ರಾಮನ ಬಗ್ಗೆ ಹಾಡು ಹೇಳಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಎದ್ದು ಹೋದರು. ಅಮಾಯಕ ಜೊತೆ ಚಲ್ಲಾಟ ಆಡಿದ್ದು ಕಾಂಗ್ರೆಸ್ ಸರ್ಕಾರ. ಶೋಷಿತ ವರ್ಗದವರ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಗೆ ಅವಮಾನ ಮಾಡಿದ್ರು. ಕುರಿ ಕಾಯೋ ಮಗನನ್ನು ಆಗ ಆರ್ಥಿಕ ಸಚಿವರನ್ನಾಗಿ ಮಾಡಿದ್ರು ದೇವೇಗೌಡ ಅವರು. ಒಡೆದು ಆಳುವ ನೀತಿಯನ್ನು ಮುಗಿಸಿ ಸಿದ್ದರಾಮಯ್ಯಅವರೇ ಎಂದು ಕುಮಾರಸ್ವಾಮಿ ಸಿದ್ದರಾಮಯ್ಯನವರಿಗೆ ಪಾಠ ಮಾಡಿದ್ದಾರೆ.
ನರೇದ್ರ ಮೋದಿಯವರು ನನ್ನ ಬಗ್ಗೆ ಪ್ರೀತಿ ಇಟ್ಟಿದ್ದಾರೆ. ಜಾತಿ ರಾಜಕಾರಣ ನಾನು ಮಾಡಿಲ್ಲ ಮಾಡ್ತಿಲ್ಲ ಮಾಡೋದು ಇಲ್ಲ. ನೀವು ಜಾತಿ ರಾಜಕಾರಣ ಮಾಡ್ತ ಇರೋದು.ಮತ್ತೆ ನಮಗೆ ಹೀಯಾಳಿಸುತ್ತಿದ್ದಾರೆ. 102 ಜಾತಿಗಳಿದ್ದವೆ ನೋಡಿ ಎಂದು ಕುಮಾರಸ್ವಾಮಿ ವ್ಯಂಗ್ಯಾವಾಡಿದ್ದಾರೆ.