Thursday, December 5, 2024

Latest Posts

ಜುವೆಲ್ಲರಿ ಕೊಡುವ ಬದಲು ಈರುಳ್ಳಿ ಡಿಲೆವರಿ ಮಾಡಿದ ಆನ್‌ಲೈನ್ ಆ್ಯಪ್..?

- Advertisement -

News: ಆನ್‌ಲೈನ್ ಶಾಪಿಂಗ್‌ನಲ್ಲಿ ಅದೆಂಥೆಂಥ ಎಡವಟ್ಟು ನಡೆದಿರುವ ಬಗ್ಗೆ ನಾವು ನೀವು ಕೇಳಿರುತ್ತೇವೆ. ನೋಡಿರುತ್ತೇವೆ. ಇಲ್ಲಿ ಅಂಥದ್ದೇ ಮತ್ತೊಂದು ಎಡವಟ್ಟು ಆಗಿದ್ದು, ಆರ್ಡರ್ ಮಾಡಿದ್ದು ಜುವೆಲ್ಲರಿ ಆದರಿ ಬಂದಿದ್ದು ಈರುಳ್ಳಿ.

ನಿಧಿ ಜೈನ್ ಎಂಬಾಕೆ ಆನ್‌ಲೈನ್‌ಲ್ಲಿ 3 ರೀತಿಯ ಆಭರಣಗಳನ್ನು ಆರ್ಡರ್ ಮಾಡಿದ್ದರು. ಅದರಲ್ಲಿ ಎರಡು ಆರ್ಡರ್ ಸರಿಯಾಗಿ ಬಂದಿದೆ. ಆದರೆ ಮೂರನೇ ಆರ್ಡರ್‌ನಲ್ಲಿ ಆಭರಣದ ಬದಲು ಈರುಳ್ಳಿ ಬಂದಿದೆ. ಇದನ್ನು ನೋಡಿದ ನಿಧಿ ಶಾಕ್ ಆಗಿದ್ದಾರೆ. ಅಲ್ಲದೇ, ಕಸ್ಟಮರ್ ಕೇರ್‌ಗೆ ದೂರು ನೀಡಿದರೂ ಕೂಡ, ಕಂಪನಿ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ನು ಈ ವೀಡಿಯೋವನ್ನು ನಿಧಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಕೆ ಹೇಳಿರುವ ಪ್ರಕಾರ, ನಾನು ಜುವೆಲ್ಲರಿ ಆರ್ಡರ್ ಕೊಟ್ಟಾಗ, ಪೋಟೋದಲ್ಲಿ ಇರುವಂತೆ ಎರಡು ಆರ್ಡರ್ ಬಂದಿತ್ತು. ಆದರೆ ಮೂರನೇ ಜುವೆಲ್ಲರಿ ಫೋಟೋಗೂ ಬಾಕ್ಸ್‌ಗೂ ಸಂಬಂಧವೇ ಇರಲಿಲ್ಲ. ಬಾಕ್ಸ್ ಚೇಂಜ್ ಆದ ಹಾಗೆ ಇತ್ತು. ಹಾಗಾಗಿ ನನಗೆ ಡೌಟ್ ಬಂದು ನಾನು ಡಬ್ಬಾ ಓಪನ್ ಮಾಡಿದಾಗ, ಇದರಲ್ಲಿ ಈರುಳ್ಳಿ ಇತ್ತು. ಹಾಗಾಗಿ ನಾನು ಕಸ್ಟಮರ್ ಕೇರ್‌ಗೆ ಕಾಲ್ ಮಾಡಿದ್ದೆ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ನಾನು ಮನವಿ ಮಾಡುವುದೇನೆಂದರೆ, ನಾನು ಆರ್ಡರ್ ಮಾಡಿದ ಆಭರಣ ವಾಪಸ್ ನೀಡಿ, ಇಲ್ಲವೇ ನಮ್ಮ ಹಣ ನಮಗೆ ವಾಪಸ್ ನೀಡಿ ಎಂದು ಮಹಿಳೆ ಹೇಳಿದ್ದಾರೆ.

- Advertisement -

Latest Posts

Don't Miss