www.karnatakatv.net: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಹೊಸ ಸಾಹಸ ಯಶಸ್ವಿಯಾಗಿದೆ. ಬ್ಲೂ ಒರಿಜಿನ್ ಸಂಸ್ಥೆಯ ಸಬ್ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಮೂಲಕ ಅಂತರಿಕ್ಷಕ್ಕೆ ಹಾರಿದ ಜೆಫ್ ಬೆಜೋಸ್ ಹಾಗೂ ಸಹಪಯಣಿಗರು ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಆ ಮೂಲಕ ಬಾಹ್ಯಾಕಾಶಕ್ಕೆ ಪ್ರವಾಸ ಏರ್ಪಡಿಸುವ ಬ್ಲೂ ಒರಿಜಿನ್ ಬಯಕೆಗೆ ಮೊದಲ ಪ್ರಯತ್ನದಲ್ಲೇ ಬಲ ಸಿಕ್ಕಂತಾಗಿದೆ. ಹಾಗೆ ಎಲ್ಲರಿಗೂ ಕೃತಜ್ಞತೆಯನ್ನು ತಿಳಿಸಿದರು ಜೆಫ್ ಬೆಜೋಸ್ ಜತೆ ಅವರ ಸಹೋದರ ಮಾರ್ಕ್ ಬೆಜೋಸ್ ಹಾಗೂ ಇತರ ಇಬ್ಬರು ಗಗನ ಯಾತ್ರಿಗಳು ಈ ನೌಕೆಯನ್ನೇರಿದ್ದರು. ಇಡೀ ವಿಶ್ವದ ಗಮನ ಸೆಳೆದಿದ್ದ ಪ್ರಯಾಣ ಇದೀಗ ಯಶಸ್ವಿಯಾಗಿದ್ದು, ಟೆಕ್ಸಾಸ್ನ ಸ್ಥಳೀಯ ಸಮಯದ ಪ್ರಕಾರ ಮುಂಜಾನೆ 8.22ಕ್ಕೆ ನೌಕೆ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದೆ. ಇದು ಬ್ಲೂ ಒರಿಜಿನ್ ಸಂಸ್ಥೆಯ ಪ್ರಯೋಗಕ್ಕೆ ಸಿಕ್ಕ ಬಹುದೊಡ್ಡ ಯಶಸ್ಸಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಪ್ರಯತ್ನಕ್ಕೆ ಕೈ ಹಾಕಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.