Ambani Wedding News: ಭಾರತದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ ಮನೆಯಲ್ಲಿ ಕೆಲವು ತಿಂಗಳಿಂದ ಮಗನ ಮದುವೆ ಸಂಭ್ರಮ ಮನೆ ಮಾಡಿದೆ. ಆಕಾಶ್ ಮತ್ತು ಇಶಾರ ಮದುವೆ ಮಾಡಿಸಿರುವ ಮುಖೇಶ್, ಇದೀಗ ಕೊನೆಯ ಮಗನಾದ ಅನಂತ್ ಅಂಬಾನಿ ಮದುವೆ ಮಾಡಿ, ಜವಾಬ್ದಾರಿ ಮುಗಿಸಲಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಶಾಲಾ ದಿನಗಳಿಂದಲೇ ಪ್ರೀತಿಸಿದವರು. ಇದೀಗ ಹಸೆಮಣೆ ಏರಲು ರೆಡಿಯಾಗಿದ್ದಾರೆ. ರಾಧಿಕಾ ಕೂಡ ಸಾಮಾನ್ಯ ಮನೆತನದ ಹುಡುಗಿ ಏನಲ್ಲ. ಈಕೆ ಕೂಡ ಆಗರ್ಭ ಶ್ರೀಮಂತೆ. ಅಲ್ಲದೇ, ಭಾವಿ ಅತ್ತೆ ನೀತಾ ಅಂಬಾನಿಯಂತೆ, ಭರತನಾಟ್ಯ ಕಲಾವಿದೆಯೂ ಹೌದು.
ಅನಂತ್ ಮತ್ತು ರಾಧಿಕಾ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಕೆಲ ತಿಂಗಳ ಹಿಂದೆ, ಗುಜರಾತ್‌ನ ಜಾಮ್‌ನಗರದಲ್ಲಿ ಮದುವೆಯಂತೆಯೇ ಭರ್ಜರಿಯಾಗಿ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ನಟಿಯರು, ಸಖತ್ ಎಂಜಾಯ್ ಮಾಡಿದ್ದರು. ಬಾಲಿವುಡ್ ಖಾನ್‌ಗಳು ಒಂದೇ ಸ್ಟೇಜ್ ಮೇಲೆ ಡಾನ್ಸ್ ಮಾಡಿಸಿದ ಖ್ಯಾತಿ ಮುಖೇಶ್ ಅಂಬಾನಿಗೆ ಸಲ್ಲುತ್ತದೆ.
ಇನ್ನು ಅಂಬಾನಿಯ ಮಗನ ಮದುವೆಗೆ ಅಂಬಾನಿ ದಂಪತಿ ಏನು ಗಿಫ್ಟ್ ಕೊಟ್ಟಿರಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಮುಖೇಶ್ ಮತ್ತು ನೀತಾ, ಅನಂತ್ ಮತ್ತು ರಾಧಿಕಾಗೆ ದುಬೈನಲ್ಲಿ 650 ಕೋಟಿ ಬೆಲೆ ಬಾಳುವ ಮನೆಯನ್ನು ಗಿಫ್ಟ್ ಮಾಡಿದ್ದಾರೆ. ದುಬೈನಲ್ಲಿರುವ ದುಬಾರಿ ವಿಲ್ಲಾಗಳಲ್ಲಿ ಈ ವಿಲ್ಲಾ ಕೂಡ ಒಂದಾಗಿದೆ. 10 ಬೆಡ್ ರೂಮ್ ಹೊಂದಿರುವ ಈ ಮನೆಯಲ್ಲಿ ಬೀಚ್ ವೀವ್ ಕೂಡ ಕಾಣಸಿಗುತ್ತದೆ. ಇದೇ ಜುಲೈ 12ಕ್ಕೆ ರಾಧಿಕಾ ಮತ್ತು ಅನಂತ್ ಮುಂಬೈನಲ್ಲಿ ವಿವಾಹವಾಗಲಿದ್ದಾರೆ.




