Wednesday, September 17, 2025

Latest Posts

ಹಿಂದೂ ಸಮಾಜವನ್ನು ಒಗ್ಗಟ್ಟು ಮಾಡಿದ್ದು ಅಂಬೇಡ್ಕರ್: ಸಂತೋಷ್ ಲಾಡ್

- Advertisement -

Political News: ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಕಚೇರಿಯಲ್ಲಿ ಸಂವಿಧಾನ ಜಾಗೃತಿ ಪೂರ್ವಭಾವಿ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿ ಹಿಂದೂ ಸಮಾಜವನ್ನು ಒಗ್ಗಟ್ಟಾಗಿ ಮಾಡಿದ್ದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ (BR Ambedkar) ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ (Hubballi-Dharwad Corporation) ಕಚೇರಿಯಲ್ಲಿ ಸಂವಿಧಾನ ಜಾಗೃತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ವರ್ಣಗಳಿದ್ದವು, ಅಂಬೇಡ್ಕರ್ ಒಂದು ಮಾಡಿದರು. ನಾವು ಇವಾಗ ಬಳಸುತ್ತಿರುವ ಹಿಂದೂ ಪದ ಮೊದಲು ಇರಲಿಲ್ಲ. ಜನಾಂಗದ ಆಧಾರದ ಮೇಲೆ ಎಲ್ಲರನ್ನೂ ಕರೆಯುತ್ತಿದ್ದರು. ಹೀಗಾಗಿ ಹಿಂದೂ ಸಮಾಜವನ್ನು ಒಂದು ಮಾಡಿದ್ದು ಬಿ.ಆರ್.ಅಂಬೇಡ್ಕರ್ ಎಂದರು.

ನಾವು ಇಂದು ಅವರನ್ನು ದೇವರು ಅಂದುಕೊಳ್ಳುವ ಕಾಲ ಬಂದಿದೆ. ಹೆಣ್ಣುಮಕ್ಕಳಿಗೆ ಕಾನೂನಿನ ರಕ್ಷಣೆ ಬಗ್ಗೆ ಯಾರೊಬ್ಬರೂ ಚಿಂತಿಸಿರಲಿಲ್ಲ. ಡಾ.ಅಂಬೇಡ್ಕರ್ ಹೆಣ್ಣುಮಕ್ಕಳಿಗೆ ಆಸ್ತಿ ಹಕ್ಕು ಸಿಗುವಂತೆ ಮಾಡಿದರು. ಪ್ರತಿಯೊಬ್ಬ ಹೆಣ್ಣುಮಗಳು ಕೂಡ ಅಂಬೇಡ್ಕರ್ ಅವರಿಗೆ ಕೈಮುಗಿಯಬೇಕು. ಆ ಸಮಯದಲ್ಲಿ ಅಂಬೇಡ್ಕರ್ ಅವರಿಗೆ ನೋವು ಕೊಟ್ಟ ಉದಾಹರಣೆಯಿದೆ. ಡಾ.ಅಂಬೇಡ್ಕರ್ ಅಂದ್ರೆ ಕೇವಲ ಎಸ್ಸಿ, ಎಸ್ಟಿಗೆ ಮಾತ್ರ ಸೀಮಿತವಲ್ಲ. ಸರ್ವಜನಾಂಗದ ಒಳಿತಿಗಾಗಿ ಅಂಬೇಡ್ಕರ್ ತಮ್ಮ ಜೀವವನ್ನೇ ಸವೆಸಿದ್ದರು ಎಂದು ತಿಳಿಸಿದರು.

ಸಂವಿಧಾನ ಜಾಗೃತಿ
ಭಾರತದ ಸಂವಿಧಾನ ರಚನೆಯಾಗಿ 75 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ತಿಂಗಳ ಕಾಲ ಸಂವಿಧಾನ ಜಾಗೃತಿ ಜಾಥಾ ನಡೆಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಜಾಗೃತಿ ಜಾಥ ನಡೆಯಲಿದೆ. ಎಲ್ಲಾ ಗ್ರಾಮ ಪಂಚಾಯಿಗಳಲ್ಲಿ ಸಂಚರಿಸಲಿದೆ.

ಸಂವಿಧಾನ ಜಾಗೃತಿ ಜಾಥಾದಲ್ಲಿ ಸಂವಿಧಾನ ಪೀಠಿಕೆಯ ಮುದ್ರಿತ ಪ್ರತಿಗಳ ವಿತರಣೆ, ಬಸವಣ್ಣನವರ ಸಂದೇಶ ಹಾಗೂ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ತಜ್ಞರಿಂದ ಭಾಷಣ, ಜಾನಪದ ನೃತ್ಯ ಪ್ರದರ್ಶನಗಳನ್ನು ನೀಡಲಾಗುತ್ತದೆ. ಜಾಥದಲ್ಲಿ ಸಂಚರಿಸಲಿರುವ ಎಲ್‌ಇಡಿ ವಾಹನಗಳ ಮೂಲಕ ವಿಡಿಯೊ ಪ್ರದರ್ಶನ ಇರಲಿದ್ದು, ನಮ್ಮ ಪರಂಪರೆಯನ್ನು ಅನಾವರಣಗೊಳಿಸಲಾಗುತ್ತದೆ.

ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸ್ತಬ್ಧಚಿತ್ರಗಳನ್ನು ಸೃಜನಶೀಲವಾಗಿಸಲು ಜಿಲ್ಲಾ ಸಮಿತಿಗಳು ಯೋಜಿಸಿವೆ. ರಾಜ್ಯದ 7 ಜಿಲ್ಲೆಗಳ 10 ಸ್ಥಳಗಳಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೇಟಿ ನೀಡಿದ್ದು, ಆ ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.

2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ: ಕೋಡಿಮಠದ ಸ್ವಾಮೀಜಿ ಭವಿಷ್ಯ

ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ ಭವತಾರಿಣಿ ನಿಧನ

ವಿಜಯಲಕ್ಷ್ಮೀ ದರ್ಶನ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪವಿತ್ರಾ ಗೌಡ

- Advertisement -

Latest Posts

Don't Miss