- Advertisement -
ಮಂಡ್ಯ: ಮಂಡ್ಯದಲ್ಲಿ ಅಪ್ಪು- ಅಂಬಿ ಅರಮನೆ ಪುತ್ಥಳಿ ನಿರ್ಮಾಣವಾಗಿದ್ದು, ನಾಳೆ ಅನಾವರಣಗೊಳ್ಳಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ. ಹೊಸೂರು ಗ್ರಾಮದಲ್ಲಿ ಅಂಬಿ ಅಪ್ಪು ಅರಮನೆ ರೆಡಿಯಾಗಿದ್ದು, ಒಂದೇ ಗುಡಿಯಲ್ಲಿ ಅಂಬಿ ಮತ್ತು ಅಪ್ಪುವಿನ ಚಿಕ್ಕ ಪುತ್ಥಳಿ ನಿರ್ಮಾಣ ಮಾಡಲಾಗಿದೆ.
ರೆಬಲ್ & ಪವರ್ ಸ್ಟಾರ್ ಅಭಿಮಾನಿಗಳ ಬಳಗದಿಂದ ಈ ಗುಡಿ ನಿರ್ಮಾಣವಾಗಿದ್ದು. ಸುಮಾರು 12 ಲಕ್ಷ ವೆಚ್ಚದ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ನಾಳೆ ಸಂಜೆ ಈ ಪುತ್ಥಳಿ ಅನಾವರಣಗೊಳ್ಳಲಿದ್ದು, ಸಂಸದೆ ಸುಮಲತಾ ಅಂಬರೀಶ್ ಹಾಗೂ ಅಶ್ವಿನಿ ಪುನೀತ್ ರಾಜ್‍ಕುಮಾರ್ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಟ ದರ್ಶನ್, ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ, ಸೇರಿ ಹಲವರು ಭಾಗಿಯಾಗುವ ಸಾಧ್ಯತೆ ಇದೆ.
ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..
- Advertisement -