ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಅವರ ಪತ್ನಿ ನತಾಶಾ ನಡುವಿನ ಡಿವೋರ್ಸ್ ವದಂತಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಜೋಡಿ ದೂರ ದೂರ ಎಂದು ಹೇಳಲಾಗುತ್ತಿದ್ದರೂ, ಅಧಿಕೃತ ಮಾಹಿತಿ ಸಿಕ್ಕಿಲ್ಲ. ಪಾಂಡ್ಯ ಆಗಲಿ, ನತಾಶಾ ಆಗಲಿ ಎಲ್ಲಿಯೂ ಕೂಡ ಡಿವೋರ್ಸ್ ವದಂತಿಗೆ ಸ್ಪಷ್ಟನೆ ನೀಡದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಐತಿಹಾಸಿಕ ಟಿ20 ವಿಶ್ವಕಪ್ ಗೆಲುವಿನ ನಂತರ ಮನೆಗೆ ಮರಳಿರುವ ಹಾರ್ದಿಕ್ ಪಾಂಡ್ಯಾ, ಇನ್ಸ್ಟಾದಲ್ಲಿ ಹಾಕಿರುವ ಪೋಸ್ಟ್ವೊಂದು ವಿಚ್ಛೇಧನ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬರುವಂತೆ ಮಾಡಿದೆ.
ಪುತ್ರ ಅಗಸ್ತ್ಯನ ಜೊತೆ ಇರುವ ಸಾಕಷ್ಟು ಫೋಟೋಗಳನ್ನು ಹಾರ್ದಿಕ್ ಪಾಂಡ್ಯ ಹಂಚಿಕೊಂಡಿದ್ದಾರೆ. ಮನೆಯಲ್ಲಿ ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ಮಾಡಿರುವ ಪಾಂಡ್ಯ, ಮಗನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಚಿತ್ರಗಳಿಗೆ ‘ನನ್ನ ನಂ.1, ನಾನೇನು ಮಾಡುತ್ತೇನೆಯೋ, ಅದೆಲ್ಲವೂ ನಿನಗಾಗಿ ಮಾತ್ರ..’ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ಈ ಫೋಟೋ ಹಾಗೂ ವಿಡಿಯೋಗಳಲ್ಲಿ ಪಾಂಡ್ಯ ಪತ್ನಿ ಮಿಸ್ ಆಗಿದ್ದಾರೆ.
ಹಾರ್ದಿಕ್ ಪಾಂಡ್ಯ ಹಲವು ದಿನಗಳ ಬಳಿಕ ಪುತ್ರ ಅಗಸ್ತ್ಯನ ಜೊತೆ ಕಾಣಿಸಿಕೊಂಡಿದ್ದಾರೆ. ಕಳೆದ ಶನಿವಾರ ಬಾರ್ಬಡೋಸ್‍ನಲ್ಲಿ ಐತಿಹಾಸಿಕ ಟಿ20 ವಿಶ್ವಕಪ್ ಗೆಲುವಿಗೆ ಪ್ರಮುಖವಾಗಿ ಕಾರಣವಾದ ಬಳಿಕ ಶುಕ್ರವಾರ ಹಾರ್ದಿಕ್ ಪಾಂಡ್ಯ ತಮ್ಮ ಸ್ವಗೃಹಕ್ಕೆ ವಾಪಸಾಗಿದ್ದಾರೆ. ಈ ವೇಳೆ ಮಗನೊಂದಿಗೆ ಸಾಕಷ್ಟು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.
ಈ ಫೋಟೋಗೆ ಸಾಕಷ್ಟು ಅಭಿಮಾನಿಗಳು ಹಾರ್ದಿಕ್‍ಗೆ ಶುಭಾಶಯ ತಿಳಿಸಿದ್ದಾರೆ. ಅದರೊಂದಿಗೆ ನತಾಶಾ ಎಲ್ಲಿದ್ದಾರೆ ಎಂದೂ ಪ್ರಶ್ನೆ ಮಾಡಿದ್ದಾರೆ. ನಿಮ್ಮ ವೈಫ್ ಯಾವ ಫೋಟೋದಲ್ಲೂ ಕಾಣುತ್ತಿಲ್ಲವಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ, ನತಾಶಾ ಜೊತೆ ನೀವು ಇನ್ನೊಂದು ಫೋಟೋ ಪೋಸ್ಟ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.
ನತಾಶಾ ಹಾಗೂ ಹಾರ್ದಕ್ ಪಾಂಡ್ಯ ಇಬ್ಬರೂ ವಿಚ್ಚೇದನ ಪಡೆದಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಸುದ್ದಿಯಾಯಿತು. ಹೆಚ್ಚಿನವರು ನತಾಶಾ, ಹಾರ್ದಿಕ್ ಪಾಂಡ್ಯನನ್ನು ಮದುವೆಯಾಗಿದ್ದು ಬರೀ ಹಣಕ್ಕಾಗಿ ಮಾತ್ರ. ಈಗ ವಿಚ್ಚೇದನದ ಮೂಲಕ ಆತನ ಆಸ್ತಿಯ ಶೇ 70ರಷ್ಟು ಪಾಲು ಪಡೆದುಕೊಳ್ಳಲಿದ್ದಾರೆ ಎಂದು ಕೂಡಾ ವರದಿಯಾಗಿತ್ತು. ಆದರೆ, ಇಲ್ಲಿಯವರೆಗೂ ತಮ್ಮಿಬ್ಬರ ನಡುವಿನ ವಿಚ್ಛೇದನದ ಬಗ್ಗೆ ಹಾರ್ದಿಕ್ ಪಾಂಡ್ಯ ಆಗಲಿ, ನತಾಶಾ ಸ್ಟಾಂಕೋವಿಕ್ ಆಗಲಿ ಮಾತನಾಡಿಲ್ಲ.