ನವೆಂಬರ್ ಕ್ರಾಂತಿ, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ಶಾಸಕರು ನವೆಂಬರ್ ತಿಂಗಳನ್ನೇ ಎದುರು ನೋಡುತ್ತಿದ್ದಾರೆ. ತಟಸ್ಥರಾಗಿರುವ ಒಂದಷ್ಟು ಶಾಸಕರು ಸದ್ಯಕ್ಕೆ ಯಾರಿಗೆ ಜೈ ಅನ್ನೋದು ಅನ್ನೋ ಗೊಂದಲದಲ್ಲಿ ಇದ್ದಾರೆ. ಈ ಕ್ರಾಂತಿಯ ಸುಳಿವಿನ ಮಧ್ಯೆ ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿ ಅವರು ಖಡಕ್ ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ.
ಸಿಎಂ ಬದಲಾವಣೆ ಅನ್ನೋದು ಅಪ್ರಸ್ತುತ. ಸಿಎಂ ಬದಲಾವಣೆ ಬಗ್ಗೆ ಮಾತನಾಡಬಾರದು ಅಂತಾ ನಮ್ಮ ಪಕ್ಷದ ಹೈಕಮಾಂಡ್ ಹೇಳಿದ್ದಾರೆ. ಮುಖ್ಯಮಂತ್ರಿಗಳನ್ನು ಹೈಕಮಾಂಡ್ ಆಯ್ಕೆ ಮಾಡ್ತಾರೆ. ಅವರು ಶಾಸಕರ ಅಭಿಪ್ರಾಯ ಪಡೆದಿದ್ದಾರೆ. ಬಳಿಕ ವೋಟಿಂಗ್ ಆಯ್ತು. ಸಿದ್ದರಾಮಯ್ಯನವರೂ ಕಂಟೆಸ್ಟ್ ಮಾಡಿದ್ರು. ಬೇರೆಯವರೂ ಕಂಟೆಸ್ಟ್ ಮಾಡಿದ್ರು. ಹೆಚ್ಚಿನ ಮತ ಸಿದ್ದರಾಮಯ್ಯನವರಿಗೆ ಬಂತು.
ಅವರಿಗೆ ಮಧ್ಯದಲ್ಲೇ ಬಿಟ್ಟುಹೋಗಿ ಅಂತಾ ಏನಾದ್ರೂ ಹೇಳಿದ್ರಾ?. ನಾವು ಅವರಿಗೆ ವೋಟ್ ಹಾಕಿದ್ದು 5 ವರ್ಷಕ್ಕೆ. ಹೀಗಾಗಿ ಸಿದ್ದರಾಮಯ್ಯ 5 ವರ್ಷ ಪೂರ್ತಿ ಮುಖ್ಯಮಂತ್ರಿ ಆಗಿರ್ತಾರೆ. ಇದು ಪಕ್ಷಕ್ಕೆ ಬಿಟ್ಟಂತ ವಿಚಾರ. ಈ ಬಗ್ಗೆ ಸಿದ್ದರಾಮಯ್ಯನವರೇ ಹೇಳಿದ್ದಾರಲ್ಲ.
ನಾನೂ ಕೆಲವೊಮ್ಮೆ ಹೇಳೋದಿಲ್ವಾ?. ನಾನೇನು ಕಮ್ಮಿ ಇದ್ದೀನಾ?. ಅವರು ಎಷ್ಟು ಸಲ ಆಯ್ಕೆಯಾಗಿ ಬಂದಿದ್ದಾರೋ ಅಷ್ಟೇ ಸಲ ನಾನೂ ಆಯ್ಕೆಯಾಗಿದ್ದೀನಿ. ನಾನು 1985ರಿಂದಲೇ ಎಂಎಲ್‌ಎ. ಯಾರೂ ಕಡಿಮೆ ಇಲ್ಲ. ಶಿವಕುಮಾರ್ ಆಗಬಾರದು ಎಂದೇನಿಲ್ಲ.
ಡಿ.ಕೆ. ಶಿವಕುಮಾರ್ ಸಿಎಂ ಆಗಲಿ. ಬೇಕಾದ್ರೆ ನೀವೂ ಆಗಿ. 25 ವರ್ಷ ಆದರೆ ಸಾಕು.. ಯಾರಾದರೂ ಕೂಡ ಪ್ರಧಾನ ಮಂತ್ರಿ ಆಗಬಹುದು. 35 ವರ್ಷ ಆದರೆ ರಾಷ್ಟ್ರಪತಿ ಆಗಬಹುದು. ಅಭಿಮಾನಕ್ಕೆ ಹೇಳ್ತಾರೆ. ನನ್ನ ಪ್ರಕಾರ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರ್ತಾರೆ ಎಂದು ತಿಳಿದುಕೊಂಡಿದ್ದೇನೆ.