Shivaratri: ಮಹಾ ಶಿವರಾತ್ರಿಯಂದು ಜಾಗರಣೆಗಾಗಿ ತಮಿಳುನಾಡಿನ ಕೊಯಮತ್ತೂರಿನ ಆದಿಯೋಗಿ ದೇವಸ್ಥಾನದಲ್ಲಿ ಈಶಾ ಫೌಂಡೇಶನ್ ವತಿಯಿಂದ ಜಾಗರಣೆ ರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ರಾತ್ರಿ ಹಲವು ಗಾಯಕರು ಬಂದು ಸಂಗೀತ ಕಾರ್ಯಕ್ರಮ ಕೊಡುತ್ತಾರೆ. ಹಲವು ಗಣ್ಯರು, ಜನಸಾಮಾನ್ಯರು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳೆಲ್ಲ ಕಾರ್ಯಕ್ರದಲ್ಲಿ ಭಾಗವಹಿಸುತ್ತಾರೆ.
ಈ ಬಾರಿ ಕಾಾರ್ಯಕ್ರಮಕ್ಕೆ ಕನ್ನಡ, ಹಿಂದಿ ಹಾಡು, ಸಂಸ್ಕೃತ ಸೇರಿ ಭಾರತೀಯ ಹಲವು ಭಾಷೆಗಳಲ್ಲಿ ಹಾಡು ಹಾಡಿ ಖ್ಯಾತಿಯಾಗಿರುವ ವಿದೇಶಿ ಅಂಧ ಗಾಯಕಿಯನ್ನು ಕರೆಸಲಾಗಿತ್ತು. ಈಕೆಗೆ ಕಣ್ಣು ಕಾಣದಿದ್ದರೂ, ಈಕೆ ಹಾಡು ಮಾತ್ರ ಸುಶ್ರಾವ್ಯವಾಗಿರುತ್ತದೆ. ಏಕೆಂದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಈಕೆ ಅಷ್ಟು ಫೇಮಸ್. ಕೆಲ ಹಿಂದೂಗಳಿಗೂ ಕಂಡು ಹೇಳಲು ಬಾರದ ಸಂಸ್ಕೃತ ಶ್ಲೋಕವನ್ನು ಈಕೆ ನೋಡದೇ ಹೇಳುತ್ತಾಳೆ. ಭಾಗ್ಯದ ಲಕ್ಷ್ಮೀ ಬಾರಮ್ಮ ಅನ್ನುವ ಹಾಡು ಹೇಳಿದ ರೀಲ್ಸ್ ಸಖತ್ ವೈರಲ್ ಆಗಿತ್ತು.
ಅಂದಹಾಗೆ ಈ ವಿದೇಶಿ ಗಾಯಕಿಯ ಹೆಸರು, ಕ್ಯಾಸ್ಮೆ. ಶಿವರಾತ್ರಿ ಕಾರ್ಯಕ್ರಮದಲ್ಲಿ ಇವರು ಶ್ರೀ ಮಂಜುನಾಥ ಸಿನಿಮಾದ, ಮಹಾಪ್ರಾಣ ದೀಪಂ ಎಂಬ ಭಕ್ತಿ ಗೀತೆಯನ್ನು ಹಾಡಿದ್ದಾರೆ. ಇವರ ಹಾಡಿಗೆ ಹಲವು ಭಕ್ತರು, ಡಿಸಿಎಂ ಡಿಕೆಶಿ, ಅಮಿತ್ ಶಾ ಎಲ್ಲರೂ ಫಿದಾ ಆಗಿದ್ದಾರೆ. ಕೆಲವರು ಈಕೆಯ ಹಾಡನ್ನು ಕೇಳಿ ಭಾವುಕರಾಗಿದ್ದಾರೆ.