Saturday, July 5, 2025

Latest Posts

ಭಾರೀ ಮಳೆಯಿಂದಾಗಿ ಅಮಿತ್ ಶಾ ಕಾರ್ಯಕ್ರಮ ರದ್ದು, ಇನ್ನೊಮ್ಮೆ ಬರುತ್ತೇನೆಂದ ಚಾಣಕ್ಯ

- Advertisement -

ಬೆಂಗಳೂರು: ಇಂದು ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆಯುವ ರೋಡ್ ಶೋನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಗಮಿಸಬೇಕಿತ್ತು. ಅವರು ಈ ಕಾರಣಕ್ಕೆ ಬೆಂಗಳೂರಿಗೂ ಆಗಮಿಸಿದ್ದರು. ಆದರೆ ಭಾರಿ ಮಳೆಯ ಕಾರಣಕ್ಕಾಗಿ, ಅವರು ರೋಡ್ ಶೋನಲ್ಲಿ ಭಾಗವಹಿಸಲು ಆಗಲಿಲ್ಲ. ಆದ್ದರಿಂದ ರೋಡ್ ಶೋ ಕ್ಯಾನ್ಸಲ್ ಮಾಡಲಾಯಿತು.

ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾವಿರಾರು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರು. ಆದರೆ ಕಾರ್ಯಕ್ರಮ ರದ್ದಾದ ಕಾರಣಕ್ಕೆ, ಮರಳಿ ಹೋಗಬೇಕಾಯಿತು. ಈ ಕಾರಣಕ್ಕೆ ಅಮಿತ್ ಶಾ ಟ್ವೀಟ್ ಮಾಡಿದ್ದು, ಭಾರಿ ಮಳೆ ಇದ್ದ ಕಾರಣಕ್ಕೆ, ದೇವನಹಳ್ಳಿಯ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಆದರೆ ನನಗಾಗಿ ಅಲ್ಲಿ ಅಷ್ಟೊಂದು ಜನ ಬಂದಿದ್ದರು. ಅವರಿಗೆಲ್ಲ ನನ್ನ ವಂದನೆಗಳು. ಆದಷ್ಟು ಬೇಗ ನಾನು ಮತ್ತೊಮ್ಮೆ ಕಾರ್ಯಕ್ರಮಕ್ಕೆ ಬರುತ್ತೇನೆ. ಈ ಕಾರ್ಯಕ್ರಮ ಶುರುವಾಗುವ ಮೊದಲೇ ಇಷ್ಟೆಲ್ಲ ಜನ ಬಂದಿದ್ದಾರೆಂದರೆ, ಖಂಡಿತವಾಗಿಯೂ ಈ ಬಾರಿ ರಾಜ್ಯದಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ಅಮಿತಾ ಟ್ವೀಟ್ ಮಾಡುವ ಮೂಲಕ ಭವಿಷ್ಯ ನುಡಿದಿದ್ದಾರೆ.

ಕಾರ್ಯಕ್ರಮ ರದ್ದಾದ ಬಳಿಕ ಅಮಿತ್‌ ಶಾ, ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯ ಹೊಟೇಲ್‌ನಲ್ಲಿ ಸಭೆ ಕರೆದಿದ್ದು, ಸಿಎಂ ಬೊಮ್ಮಾಯಿ ಸೇರಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ, ಸೇರಿ ಹಲವು ಬಿಜೆಪಿ ಕಾರ್ಯಕರ್ತರು ಸಭೆಗೆ ಹಾಜರಿದ್ದರು.

‘ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ’

‘ಕಾಂಗ್ರೆಸ್ ಹಣ ಪಡೆದು, ಬಿ ಫಾರ್ಮ್ ವಿತರಣೆ ಮಾಡಿದೆ. ಅವರ 224 ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ’

- Advertisement -

Latest Posts

Don't Miss