Thursday, February 6, 2025

Latest Posts

ಸ್ಟ್ರಾಬೇರಿ ತಿಂದು 8 ವರ್ಷದ ಬಾಲಕ ಸಾವು..

- Advertisement -

International News: ನಾವು ಕೆಲ ದಿನಗಳ ಹಿಂದಷ್ಟೇ ಇಂಥದ್ದೇ ಸುದ್ದಿ ನೀಡಿದ್ದೆವು. ತೆಲಂಗಾಣದಲ್ಲಿ ಮೊಟ್ಟೆ ಬಜ್ಜಿ ತಿಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ವಿದೇಶದಲ್ಲಿ ಚಿಕನ್ ತಿಂದು ಓರ್ವ ಯುವಕ ಸಾವನ್ನಪ್ಪಿದ್ದ. ಇದೀಗ, ಬಾಲಕನೋರ್ವ ಸ್ಟ್ರಾಬೇರಿ ತಿಂದು ಸಾವನ್ನಪ್ಪಿದ ಘಟನೆ ಯುಎಸ್‌ನಲ್ಲಿ ನಡೆದಿದೆ.

ಗಾರ್ಡೆನ್‌ನಲ್ಲಿ ಬೆಳೆದಿದ್ದ ಸ್ಟ್ರಾಬೇರಿ ತಿಂದು ಬಾಲಕ, ಕುಸಿದು ಬಿದ್ದಿದ್ದಾನೆ. ಅವನಿಗೆ ಉಸಿರಾಡಲು ತೊಂದರೆಯಾಗಿದೆ. ಈ ವೇಳೆ ಸ್ಥಳದಲ್ಲೇ ಇದ್ದ ಪೋಷಕರು ಮಗುವನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಮಗು ಮೃತಪಟ್ಟಿದೆ. ಈ ವೇಳೆ ವೈದ್ಯರು ಈ ಬಗ್ಗೆ ವಿಚಾರಿಸಿದಾಗ, ಹಿಂದಿನ ದಿನ ಮಗು ಶಾಲೆಯ ಗಾರ್ಡೆನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಸ್ಟ್ರಾಬೇರಿ ತಿಂದಿತ್ತು ಎಂದು ತಿಳಿದು ಬಂದಿದೆ.

ಮಗುವಿಗೆ ಸ್ಟ್ರಾಬೇರಿ ತಿಂದು ಅಲರ್ಜಿಯುಂಟಾದ ಕಾರಣಕ್ಕೆ, ಮಗು ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಅಲ್ಲಿನ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಓರ್ವ ಯುವಕ ಬಟರ್ ಚಿಕನ್ ತಿಂದಿದ್ದು, ಇದರಲ್ಲಿ ಬಳಸಲಾಗಿದ್ದ ಬಾದಾಮಿಯನ್ನೂ ಕೂಡ ಸೇವಿಸಿದ್ದ. ಆದರೆ ಇವನಿಗೆ ಬಾದಾಮಿ ತಿಂದರೆ, ಅಲರ್ಜಿಯಾಗಿದ್ದು, ಬಾದಾಮಿ ಸೇವನೆ ಬಳಿಕ ಆತ ಸಾವನ್ನಪ್ಪಿದ್ದಾನೆ.

ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

- Advertisement -

Latest Posts

Don't Miss