Tuesday, October 14, 2025

Latest Posts

ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ವೃದ್ಧ ದಂಪತಿಗಳು

- Advertisement -

www.karnatakatv.net: ರಾಯಚೂರು : ಇವರಿಗೆ ವಯಸ್ಸು ೮೫ ಅಧಿಕ ದಾಟಿವೆ ನೊಡಲು ಕಣ್ಣು ಮಂಜಾಗಿವೆ ಇವರನ್ನು ನೋಡಿಕೊಳ್ಳಲು ಮಕ್ಕಳಿಲ್ಲ ಆದರು ಕಷ್ಟದಲ್ಲಿ ಜೀವನ ಸಾಗಿಸುತ್ತಿದರೆ . ಇವರ ಗೊಳು ಕೆಳೊವವರೆ ಇಲ್ಲ ಈ ನಡುವೆಯೇ ಆಳುವ ಸರ್ಕಾರಗಳು ಇವರಿಗೆ ಮಾಡಿರುವ ಅನ್ಯಾಯ ಒಂದೆರಡಲ್ಲ. ಅಷ್ಟಕ್ಕೂ ಯಾರು ಆ ನತದೃಷ್ಟರು ಅಂತೀರ ಈ ಸ್ಟೋರಿ ನೋಡಿ…

ಈ ವೃದ್ಧ ದಂಪತಿಗಳ ಹೆಸರು ಸಿದ್ದಪ್ಪ ಗಂಗಮ್ಮ.. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗುಂಡಾ ಎನ್ನುವ ಗ್ರಾಮದವರು. ಕಷ್ಟ ಎನ್ನುವ ಪದವನ್ನು ಆ ದೇವರು ಇವರಿಗಾಗಿಯೇ ಹುಟ್ಟು ಹಾಕಿದ್ದಾನೆ ಎನ್ನುವಂತಿದೆ. ಸಿದ್ದಪ್ಪ ಗಂಗಮ್ಮ ದಂಪತಿಗಳಿಗೆ ಮಕ್ಕಳಿಲ್ಲ. ಕಡು ಬಡತನದಲ್ಲಿರೋ ಈ ದಂಪತಿಗಳಿಗೆ ಕಳೆದ ಐದಾರು ವರ್ಷಗಳಿಂದ‌ ಅನ್ನ ಭಾಗ್ಯದ ಅಕ್ಕಿಯೇ ಆಧಾರ, ಆಹಾರ..‌ ಸದ್ಯಕ್ಕೆ ದುಡಿಯೋದಕ್ಕೆ ರಟ್ಟೆಯಲ್ಲಿ ಶಕ್ತಿಯೇ ಇಲ್ಲದ ಮನೆಯ ಯಜಮಾನ ಸಿದ್ದಪ್ಪಜ್ಜನಿಗೆ ಈಗ್ಗೆ ೬ ವರ್ಷಗಳ ಹಿಂದೆ ತೀವ್ರ ಹೊಟ್ಟೆ‌ನೋವು ಕಾಣಿಸಿಕೊಂಡು ಅದರ ಆಪರೇಷನ್ ಗೆಂದು ಲಕ್ಷಾಂತರ ರೂಪಾಯಿ ಸಾಲ ಮಾಡುತ್ತಾರೆ. ಸಾಲ ತೀರಿಸಲು ಗ್ರಾಮದಲ್ಲಿ ಇದ್ದೊಂದು ಪುಟ್ಟ ಮನೆಯನ್ನ ಮಾರುತ್ತಾರೆ. ನಿರಾಶ್ರಿತರಾಗಿದ್ದ ಇವರಿಗೆ ಸರ್ಕಾರದಿಂದ 2015-16 ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಲ್ಲಿ‌ ಮನೆ ಮಂಜೂರಾಗುತ್ತದೆ‌. ಆ ಮನೆಯೇ ಇದು..

ಹೌದು 2015-16 ನೇ ಸಾಲಿನ ಬಸವ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಈ ಮನೆಯನ್ನ ಕಟ್ಟಿಕೊಟ್ಟವರು ಸಿದ್ದಪ್ಪ ಗಂಗಮ್ಮ ಎಂಬ ವೃದ್ಧ ದಂಪತಿ ಸಂಬಂಧಿಗಳು. ಕಷ್ಟ ಇದ್ದಾಗ ಹತ್ತಿರವೂ ಸುಳಿಯದ ಸಂಬಂಧಿಗಳು ಈ ಮನೆ‌ ಮಂಜೂರಾದಾಗ ನಾವೇ ಕಟ್ಟಿಕೊಡ್ತೇವೆ ಎಂದು ಮುಂದೆ ಬಂದು ಕಟ್ಟಿಕೊಟ್ಟ ಮನೆ ಇದು ಹೀಗೆ ಸಂಬಂಧಿಗಳು ಕಟ್ಟಿಕೊಟ್ಟ ಆಶ್ರಯ ಯೋಜನೆ ಮನೆ ಹೆಸರಿಗಷ್ಟೇ ಮನೆ. ಈ ಮನೆಯ ಮೇಲೆ ಹಾಕಲಾದ ತಗಡಿನ ಶೀಟ್ ಗಳು ಗಾಳಿಗೆ ಹಾರಿ ಹೋಗಿವೆ. ಐದಾರು ವರ್ಷಗಳಿಂದ‌ ಮನೆಯಲ್ಲಿ ಕರೆಂಟೇ ಇಲ್ಲ. ಸರಿಯಾಗಿ ಕಣ್ಣು ಕಾಣಿಸದ ಇವರು ಇನ್ನೂ ಬೆಳಕಿರುವಾಗಲೇ ಅಡುಗೆ‌ಮಾಡಿಕೊಂಡು ಊಟ ಮಾಡಿ ಮಲಗಿಬಿಡುತ್ತಾರೆ.

ಇಷ್ಟೇ ಆಗಿದ್ದರೆ ಪರವಾಗಿಲ್ಲ. ಕೇವಲ ಸಂಬಂಧಿಕರಿಂದ‌ ಮಾತ್ರವಲ್ಲ ಆಳುವ ಸರ್ಕಾರಗಳಿಂದಲೂ ಈ ಅನಾಥ ವೃದ್ಧರಿಗೆ ಅನ್ಯಾಯವಾಗಿದೆ. ಕಳೆದ ೮-೯ ತಿಂಗಳಿನಿಂದ ಇವರಿಗೆ ವೃದ್ಧಾಪ್ಯ ವೇತನವೇ ಬಂದಿಲ್ಲ.‌ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವಿಕಲ ಚೇತನರಿಗೆ‌ ಮತ್ತು ವೃದ್ಧರಿಗೆ ನೀಡುವ ರಿಯಾಯಿತಿ ಕೆಲಸದ ಹೆಸರಲ್ಲಿ ಇವರ ಅಕೌಂಟ್ ಗೆ ಹಣ ಜಮೆ ಮಾಡಿದ್ದಾರೆ. ಮಾಡಿದಷ್ಟೇ ಸಲೀಸಾಗಿ 14000 ರೂಪಾಯಿಗಳನ್ನ ಕೊಳ್ಳೆ ಹೊಡೆದಿದ್ದಾರೆ. ಇದೇನ್ರಿ ಪಿಡಿಓ ಸಾಹೇಬ್ರೇ ನಿಮಗೆ ಮಾನವೀಯತೆಯಾದ್ರೂ ಬೇಡವಾ ಎಂದಿದ್ದಕ್ಕೆ ಅದು ಆನ್ ಲೈನ್ ಪೇಮೆಂಟ್ ನಾವಂತೂ ಅವರ ಅಕೌಂಟ್ ಗೆ ಹಣ ಜಮಾ ಮಾಡಿದ್ದೇವೆ. ಅವರ ಹಣ ಯಾರು ಕೊಳ್ಳೆ ಹೊಡೆದಿದ್ದಾರೋ ಗೊತ್ತಿಲ್ಲ ಎಂಬ ಬೇಜಾವಾಬ್ದಾರಿ ಉತ್ತರ ಕೊಡುತ್ತಾರೆ

ಒಟ್ಟಿನಲ್ಲಿ ಈ ನತದೃಷ ವೃದ್ಧ ದಂಪತಿ ಬಾಳಲ್ಲಿ ದೇವರ ಜೊತೆಗೆ ಸಂಬಂದಿಗಳು, ಆಳುವ ಸರ್ಕಾರಗಳು, ಜನಪ್ರತಿನಿಧಿಗಳು ಎಲ್ಲರೂ‌ ಮಾನವೀಯತೆ ಮರೆತಂತೆ ವರ್ತಿಸಿದ್ದಾರೆ. ಇನಾದರು ವರದಿ ನೊಡಿ ಎಚ್ಚೆತುಕೊಳುತ್ತಾರಾ ಅಂತ ಕಾದು ನೊಡಬೇಕಾಗಿದೆ .

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss