Wednesday, September 17, 2025

Latest Posts

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ತಲೆಗೆ 50 ಬಾರಿ ಸುತ್ತಿಗೆಯಿಂದ ಬಡಿದು ಕೊಲೆ

- Advertisement -

International News: ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ, ಶಿಕ್ಷಣ ಪಡೆಯುತ್ತಿದ್ದ ಭಾರತದ ವಿದ್ಯಾರ್ಥಿಯನ್ನ, ಅಮೆರಿಕದ ನಿವಾಸಿ ಕೊಂದಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿ ವಿವೇಕ್ ಸೈನಿ(25) ಎಂದು ಗುರುತಿಸಲಾಗಿದ್ದು, ಈತ ಹರ್ಯಾಣಾದ ಪಂಚಕುಲದ ನಿವಾಸಿಯಾಗಿದ್ದ. ಅಮೆರಿಕದ ಜಾರ್ಜಿಯಾದಲ್ಲಿ, ಶಿಕ್ಷಣ ಪಡೆಯುತ್ತ, ಅಂಗಡಿಯೊಂದರಲ್ಲಿ ಪಾಾರ್ಟ್‌ ಟೈಮ್ ಕೆಲಸ ಮಾಡುತ್ತಿದ್ದ. ಈತನನ್ನು ಕೊಂದ ವ್ಯಕ್ತಿ ಜೂಲಿಯನ್ ಫಾಕ್ನರ್ ಎಂದು ಗುರುತಿಸಲಾಗಿದ್ದು, ಈತ ಮಾದಕ ವ್ಯಸನಿಯಾಗಿದ್ದ.

ಕೆಲ ದಿನಗಳಿಂದ ವಿವೇಕ್ ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದು, ವಿವೇಕ್ ಜೊತೆ ಫ್ರೆಂಡ್ಲಿಯಾಗಿದ್ದ. ಅಲ್ಲದೇ, ಪ್ರತಿದಿನ ಫ್ರೀಯಾಗಿ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ವಿವೇಕ್, ತಾನು ಇನ್ನು ಫ್ರೀಯಾಗಿ ಇದನ್ನೆಲ್ಲ ಕೊಡಲಾಗುವುದಿಲ್ಲ. ಇದುವರೆಗೆ ತೆಗೆದುಕೊಂಡು ಹೋದ ವಸ್ತುಗಳ ದುಡ್ಡನ್ನು ಹಿಂದಿರುಗಿಸು ಎಂದಿದ್ದಾನೆ.

ಈ ಕಾರಣಕ್ಕೆ ಕೋಪಗೊಂಡಿದ್ದ ಜೂಲಿಯನ್, ಸುತ್ತಿಗೆ ತಂದು, ವಿವೇಕ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಅಲ್ಲದೇ, 50 ಬಾರಿ ತಲೆಗೆ ಹೊಡೆದಿದ್ದಾನೆ. ಹೊಡೆದ ಪೆಟ್ಟಿಗೆ ವಿವೇಕ್ ಸಾವನ್ನಪ್ಪಿದ್ದಾನೆ. ಇನ್ನು ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮೃತನ ಕುಟುಂಬಸ್ಥರು, ಮೃತದೇಹವನ್ನು ಭಾರತಕ್ಕೆ ತರಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಡ್ರೋನ್ ದಾಳಿಗೆ ಅಮೆರಿಕದ ಮೂವರು ಸೈನಿಕರು ಬಲಿ: ಬೈಡನ್ ಹೇಳಿದ್ದೇನು..?

ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಡಿದಾಡಿಕೊಂಡ ಸಂಸದರು: ವೀಡಿಯೋ ವೈರಲ್

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ 10 ವರ್ಷ ಜೈಲು ಶಿಕ್ಷೆ

- Advertisement -

Latest Posts

Don't Miss