ದೇವರ ಹುಂಡಿಗೆ ಬಿದ್ದ ಐ ಫೋನ್, ಈಗ ಇದು ದೇವರ ಕಾಣಿಕೆ ಅಂದ ದೇವಸ್ಥಾನ ಆಡಳಿತ ಮಂಡಳಿ

Tamilunadu News: ದೇವಸ್ಥಾನಕ್ಕೆ ಹೋದಾಗ, ಹುಂಡಿಗೆ ಹಣ ಹಾಕುವುದು ಪದ್ಧತಿ. ನಾವು ದುಡಿದ ಹಣದಲ್ಲಿ ಕೆಲ ಕಾಣಿಕೆಯನ್ನು ದೇವರಿಗೆ ಹಾಕಲಾಗುತ್ತದೆ. ಆದರೆ ನಮ್ಮ ಕಾಸ್ಟ್‌ಲೀ ಐಫೋನ್ ಹುಂಡಿಗೆ ಬಿದ್ದರೆ ಏನು ಗತಿ..? ಇಂಥ ಘಟನೆ ತಮಿಳು ನಾಡಿನ ದೇವಸ್ಥಾನವೊಂದರಲ್ಲಿ ನಡೆದಿದೆ.

ಚೆನ್ನೈನ ತಿರುಪ್ಪೂರ್ ಅರಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿಯ ಐಫೋನ್ ಅಪ್ಪಿತಪ್ಪಿ ಕಾಣಿಗೆ ಡಬ್ಬಕ್ಕೆ ಬಿದ್ದಿದೆ. ದೇವರಿಗೆ ಕಾಣಿಕೆ ಹಾಕಲು ಕಿಸೆಯಲ್ಲಿ ಕೈ ಹಾಕಿದಾಗ, ಶರ್ಟ್ ಕಿಸೆಯಲ್ಲಿದ್ದ ಮೊಬೈಲ್ ಕಾಣಿಗೆ ಡಬ್ಬಿಗೆ ಹೋಗಿ ಬಿದ್ದಿದೆ. ಕಾಣಿಗೆ ಡಬ್ಬಿಗೆ ಕೈ ಹಾಾಕಿ, ಮೊಬೈಲ್ ತೆಗೆಯಲು ಪ್ರಯತ್ನಿಸಿದರೆ, ಸಾಧ್ಯವಾಗಲಿಲ್ಲ.

ಆಗ ವ್ಯಕ್ತಿ ದೇವಸ್ಥಾನದ ಆಡಳಿತ ಮಂಡಳಿಗೆ ತನ್ನ ಮೊಬೈಲ್ ಹುಂಡಿಗೆ ಬಿದ್ದ ಬಗ್ಗೆ ಹೇಳಿ, ಮೊಬೈಲ್ ತೆಗೆದುಕೊಡಲು ಕೇಳಿದ್ದಾರೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಮೊಬೈಲ್ ಹುಂಡಿಗೆ ಬಿದ್ದಾಗಿದೆ. ಈಗ ಅದು ದೇವರಿಗೆ ನೀಡಿದ ಕಾಣಿಕೆ. ಅದನ್ನು ಮರಳಿ ಕೊಡಲಾಗುವುದಿಲ್ಲ. ಬೇಕಾದರೆ ಸಿಮ್ ಮತ್ತು ಡೇಟಾವನ್ನು ಇನ್ನೊಂದು ಮೊಬೈಲ್‌ಗೆ ಟ್ರಾನ್ಸ್‌ಫರ್ ಮಾಡಲು ಅವಕಾಶ ಕೊಡಲಾಗುತ್ತದೆ ಎಂದಿದ್ದಾರೆ. ಹಾಗಾಗಿ ಮೊಬೈಲ್ ಕಳೆದುಕೊಂಡವರು ಬರೀಗೈಯಲ್ಲೇ ಮನೆಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

About The Author