Wednesday, December 4, 2024

Latest Posts

60 ಅಡಿ ಆಳದ ಬಾವಿಗೆ ಬಿದ್ದರೂ ಉಳಿಯಿತು ವೃದ್ಧೆಯ ಜೀವ, ನಿಜಕ್ಕೂ ಇದು ಪವಾಡವೇ ಸರಿ

- Advertisement -

Chikkamagaluru News: 60 ಅಡಿ ಆಳದ ಬಾವಿಗೆ ಬಿದ್ದರೂ, 94 ವರ್ಷ ವಯಸ್ಸಿನ ವೃದ್ಧೆ ಬದುಕಿ ಬಂದ ಘಟನೆ ಚಿಕ್ಕಮಗಳೂರಿನ ಕೊಪ್ಪದ ಮರಕಟ್ಟೆ ಗ್ರಾಮದಲ್ಲಿ ನಡೆದಿದೆ.

ಇದೇ ಗ್ರಾಮದ ಕಮಲ ಎಂಬ ವೃದ್ಧೆ ಆಯತಪ್ಪಿ ಬಾವಿಗೆ ಬಿದ್ದಿದ್ದರು. ಈ ವೇಳೆ ಕಂಗಾಲಾಗದೇ, ಜೀವ ಉಳಿಸಿಕೊಳ್ಳಲು ಪೈಪ್ ಹಿಡಿದು ಒಂದು ಗಂಟೆಗೂ ಹೆಚ್ಚು ಕಾಲ ಕಮಲಾ ಬಾವಿಯಲ್ಲೇ ಇದ್ದರೂ. ಕಾಪಾಡಲು ಕೂಗಿ ಕರೆದಾಗ, ವಿಷಯ ತಿಳಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕಾಲ್ ಮಾಡಿ, ರಕ್ಷೆಣೆ ಕೋರಿ ಕರೆದಿದ್ದಾರೆ. ಅಲ್ಲದೇ, ತಾವೂ ವೃದ್ಧೆಯನ್ನು ಮೇಲೆತ್ತಲು ಹರಸಾಹಸ ಪಟ್ಟಿದ್ದಾರೆ.

ಕೊನೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು, ವೃದ್ಧೆಯನ್ನು ರಕ್ಷಿಸಿದ್ದಾರೆ. ಹಗ್ಗದ ಸಹಾಯದಿಂದ ಅಗ್ನಿಶಾಮಕ ದಳದ ವಿಶ್ವನಾಥ್ ಎಂಬುವವರು ವೃದ್ಧೆಯನ್ನು ಮೇಲೆತ್ತಿದ್ದಾರೆ. ಅಗ್ನಿಶಾಮಕ ದಳದವರು ಸಮಯಕ್ಕೆ ಸರಿಯಾಗಿ ಬಂದು, ವೃದ್ಧೆ ಜೀವ ಉಳಿಸಿದ್ದಕ್ಕಾಗಿ, ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.

- Advertisement -

Latest Posts

Don't Miss