Dharwad News: ಧಾರವಾಡ: ಧಾರವಾಡದಲ್ಲಿ ಬೆಳ್ಳಂಬೆಳಿಗ್ಗೆ ವೃದ್ಧೆಯ ಕೊಲೆ ನಡೆದಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಧಾರವಾಡದ ನವಲೂರು ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಕರೆವ್ವ ಈರಬಗೇರಿ(58) ಕೊಲೆಯಾದ ವೃದ್ಧೆಯಾಗಿದ್ದು, ಆಸ್ತಿ ವಿಚಾರವಾಗಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ಇದೆ. ಈ ವೃದ್ಧೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದು, ಇಂದು ದೇವಸ್ಥಾನಕ್ಕೆ ಹೋಗಿ ವಾಪಸ್ ಮನೆಗೆ ಹೋಗುವಾಗ, ಅಡ್ಡಗಟ್ಟಿದ ದುಷ್ಟರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.
ಸ್ಥಳಕ್ಕೆ ಧಾರವಾಡ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ, ವೃದ್ಧೆಯ ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಾಯಿ ತಿನ್ನದ ಬಿಸ್ಕೀಟನ್ನು ಕಾಂಗ್ರೆಸ್ ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ
ಮದುವೆಯಾಗಲಿದ್ದಾರಾ ಸ್ಪೋರ್ಟ್ಸ್ ಸ್ಟಾರ್ಸ್ ಪಿವಿ ಸಿಂಧು- ನೀರಜ್ ಛೋಪ್ರಾ..?
ಚಿಲಿಯಲಿ ಸಂಭವಿಸಿದ ಕಾಡ್ಗಿಚ್ಚಿಗೆ 100ಕ್ಕೂ ಹೆಚ್ಚು ಜನ ಬಲಿ, 200ಕ್ಕೂ ಹೆಚ್ಚು ಜನರು ಕಾಣೆ

