Friday, November 22, 2024

Latest Posts

Raichur : ಮಗುವನ್ನ ಕೊರೆಯುವ ಚಳಿಯಲ್ಲೇ ಕೂರಿಸಿದ ಓಪೆಕ್ ಆಸ್ಪತ್ರೆ ಸಿಬ್ಬಂಧಿ..!

- Advertisement -

ರಾಯಚೂರು : ಇದು ಹೇಳಿಕೊಳ್ಳೋಕೆ ಮಾತ್ರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ (Super Specialty Hospital). ಆದ್ರೆ ಈ ಆಸ್ಪತ್ರೆಗೆ ಬರುವ ರೋಗಿಗಳ ಸ್ಥಿತಿ ಮಾತ್ರ ಅಯೋಮಯ. ಈ ದಿನವೂ 22 ದಿನಗಳ ನವಜಾತ ಶಿಶುವಿನ ವಿಚಾರದಲ್ಲೂ ಇದೇ ದುಸ್ಥಿತಿ ಉಂಟಾಗಿತ್ತು. ಸರಿಯಾದ ಸಮಯಕ್ಕೆ ಆಂಬ್ಯಲೆನ್ಸ್ (Ambulance)ಬಾರದೆ ನವಜಾತ ಶಿಶು ಕೊರೆಯುವ ಚಳಿಯಲ್ಲೇ ನರಳಾಡಿದ ಅಮಾನವೀಯ ಘಟನೆಯೊಂದು ನಡೆದಿದೆ.ಆಕ್ಸಿಜನ್(Oxygen), ವೆಂಟಿಲೇಟರ್(Ventilator) ಅಳವಡಿಸಿಕೊಂಡ ಪುಟ್ಟ ಕಂದನನ್ನ ಎತ್ತಿಕೊಂಡು ಕೊರೆಯುವ ಚಳಿಯಲ್ಲೇ ಕುಳಿತ ಅಜ್ಜಿ. ಆಸ್ಪತ್ರೆಗೆ ಬರೋರು ಹೋಗೋರು ಪುಟಾಣಿ ಕೂಸಿನ ಸ್ಥಿತಿ ಕಂಡು ಮರುಗುತ್ತಾ ಆಸ್ಪತ್ರೆ ಸಿಬ್ಬಂಧಿಗಳಿಗೆ ಹಿಡಿ ಶಾಪ ಹಾಕ್ತಿರೋದು. ಇಂಥಹ ಮನಕಲುಕುವ ದೃಶ್ಯಗಳು ಕಂಡು ಬಂದಿದ್ದು ರಾಯಚೂರಿನ ಮಲ್ಟಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಓಪೆಕ್ (OPEC)ನಲ್ಲಿ. ರೀಮ್ಸ್ ಆಸ್ಪತ್ರೆ(Reims Hospital)ಯಲ್ಲಿ 22 ದಿನಗಳ ಹಿಂದೆ ಜನಿಸಿದ ನವಜಾತ ಶಿಶು ಅಳ್ತಿಲ್ಲ ಅಂತಾ ಅಜ್ಜಿ ಮಗುವನ್ನ ಹೆಚ್ಚಿನ ಚಿಕಿತ್ಸೆಗೆ ಓಪೆಕ್ ಆಸ್ಪತ್ರೆಗೆ ಕರೆ ತಂದಿದ್ರು. ಮಗುವನ್ನ ರೀಮ್ಸ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ನಲ್ಲೇ ಓಪೆಕ್ ಆಸ್ಪತ್ರೆಗೆ ತರಲಾಗಿತ್ತು. ಮಗುವಿಗೆ ಚಿಕಿತ್ಸೆ ಮುಗಿಸಿಕೊಂಡು ವಾಪಾಸ್ ಹೋಗ್ಬೇಕಾದ್ರೆ ಆಸ್ಪತ್ರೆ ಸಿಬ್ಬಂಧಿಗಳು ಆ್ಯಂಬುಲೆನ್ಸ್ ಪಂಚರ್ ಆಗಿದೆ ಎನ್ನುವ ಮೂಲಕ ಅಮಾನವೀಯವಾಗಿ ನಡೆದುಕೊಂಡು, ಒಂದು ಗಂಟೆಗಳ ಕಾಲ ಕೊರೆಯುವ ಚಳಿಯಲ್ಲೇ ಅಜ್ಜಿಯ ಮಡಿಲಲ್ಲಿ ಆಕ್ಸಿಜನ್ ವೆಂಟಿಲೇಟರ್ ಮಗುವನ್ನ ಮಲಗಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ.

ರಾಯಚೂರು ತಾಲೂಕಿನ ತುರ್ಕನದೋಣಿಯಿಂದ ಬಂದಿದ್ದ ಪೋಷಕರು ಕಳೆದ 22 ದಿನಗಳಿಂದಲೂ ರೀಮ್ಸ್ ಆಸ್ಪತ್ರೆಯಲ್ಲೇ ಇದ್ದಾರೆ. ತಾಯಿಯನ್ನ ರೀಮ್ಸ್ ಆಸ್ಪತ್ರೆಯಲ್ಲೇ ಬಿಟ್ಟು ಬಂದಿದ್ದ ಪೋಷಕರು ಮಗುವಿಗೆ ಚಿಕಿತ್ಸೆ ಕೊಡಿಸಿ ವಾಪಾಸ್ ಕರೆದೋಯ್ಯಬೇಕಿತ್ತು. ಆದ್ರೆ ಕನಿಷ್ಠ ಸೌಜನ್ಯಕ್ಕೂ ಮಗುವಿನ ಆರೋಗ್ಯ ದೃಷ್ಟಿಯಿಂದ ಒಳಗಡೆ ಕೂರಿಸದೇ ಹೊರಗಡೆ ಕೂರಿಸಿದ್ದಾರೆ. ರೀಮ್ಸ್ ಆಸ್ಪತ್ರೆಯಿಂದ ಮಗುವನ್ನ ಕರೆತರುವಾಗ ಜೊತೆಗೆ ಬಂದಿದ್ದ ಸಿಬ್ಬಂಧಿಗಳು ಸಹಿತ ನಮಗೂ ಇದಕ್ಕೂ ಸಂಬಂದ ಇಲ್ಲ ಎನ್ನುವಂತೆ ಕುಳಿತಿದ್ದು ಕಂಡುಬಂತು. ಯಾವಾಗ ಕರ್ನಾಟಕ ಟಿವಿ ಕ್ಯಾಮರಾ ಕಣ್ಣಿಗೆ ಬಿತ್ತೋ ಆಗಲೇ ಎಚ್ಚೆತ್ತುಕೊಂಡ ಸಿಬ್ಬಂಧಿಗಳು ಎದ್ನೋ, ಬಿದ್ನೋ ಅಂತಾ ಓಡೋಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಮಗುವನ್ನ ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದ್ರು.

ಮಲ್ಟಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆಗಿದ್ರೂ ಓಪೆಕ್ ಆಸ್ಪತ್ರೆಯ ಕರ್ಮಕಾಂಡ ನಿತ್ಯ ನಿರಂತರ ಎನ್ನುವಂತಾಗಿದೆ. ಕೊವೀಡ್ ಸಂದರ್ಭದಲ್ಲಿಯೂ ಇದೇ ರೀತಿಯ ಹತ್ತಾರು ಘಟನೆಗಳು ನಡೆದಿದ್ರೂ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮತ್ತೇ ಈಗ ಪುಟ್ಡ ಕಂದಮ್ಮನ್ನ ಕೊರೆಯುವ ಚಳಿಯಲ್ಲೇ ಕೂರಿಸಿ ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಇಲ್ಲಿನ ದುರ್ನಡತೆ ಹಾಗೂ ಅವ್ಯವಸ್ಥೆ ಬಗ್ಗೆ ಗಮನ ಹರಿಸಿ, ಸರ್ಕಾರಿ ಆಸ್ಪತ್ರೆ ಮೇಲೆ ಜನರು ವಿಶ್ವಾಸವಿಡುವಂತೆ ಮಾಡಬೇಕಿದೆ.

                                                                                    ಅನಿಲ್ ಕುಮಾರ್,ಕರ್ನಾಟಕ ಟಿವಿ,ರಾಯಚೂರು.

- Advertisement -

Latest Posts

Don't Miss