ಕೊಡವರ ಪರವಾಗಿ ಕಾಂಗ್ರೆಸ್ ನಾಯಕರಿಗೊಂದು ಬಹಿರಂಗ ಮನವಿ ಮಾಡಲಾಗಿದೆ.
2028ರ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಮತದಾರ ಖಂಡಿತ ಈ ಮೋಸಕ್ಕೆ ಉತ್ತರ ನೀಡಲಿದ್ದಾನೆ! Indian National Congress – Karnataka ನೀವು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಎಎಸ್ ಪೊನ್ನಣ್ಣ ಅವರಿಗೆ ಸಚಿವ ಸ್ಥಾನವನ್ನು ನೀಡಿದೆ ಇದ್ದರೆ ಖಂಡಿತ ನೀವು ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರವನ್ನು ಮರೆತುಬಿಡುವುದು ಒಳ್ಳೇದು!
ನನ್ನಂತ ಸಾಮಾನ್ಯ ಮತದಾರನ ಬೇಡಿಕೆ ಇದು! DK Shivakumar Siddaramaiah UT Khader ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ನಾವಂತೂ ಸಿದ್ದ 2028ರ ಚುನಾವಣೆಗೆ ಇವತ್ತಿನಿಂದನೇ ಕೆಲಸ ಪ್ರಾರಂಭ ಮಾಡುತ್ತೇವೆ ಅದು 2024ರ ಲೋಕಸಭಾ ಚುನಾವಣೆಯಲ್ಲಿ ನಿಮಗೆ ತಿಳಿಯುತ್ತದೆ!
A.S Ponnanna ನಂತಹ ವ್ಯಕ್ತಿ ಸಚಿವ ಸಂಪುಟದಲ್ಲಿ ಇಲ್ಲದ ಮೇಲೆ ನಮಗೆ ನಮ್ಮ ಸಂಪುಟದ ಮೇಲೆ ನಂಬಿಕೆ ಹೋದಂತೆ. ನಿಮ್ಮ ಈ ಮೋಸವನ್ನು ನಾವು ಮರೆಯುವಂತಿಲ್ಲ, ಮರೆಯುವುದಿಲ್ಲ ಕೂಡ!
ಬೆಂಗಳೂರಿನ ಏಸಿ ರೂಮಿನ ಸಚಿವರನ್ನು ಉಸ್ತುವಾರಿ ಸಚಿವರಾಗಿ ಮಾಡುತ್ತೀರಿ ಎಂದು ನಮಗೆ ತಿಳಿದಿದೆ, ಅವರು ವೀಕ್ ಎಂಡ್ ಜಾಲಿ ರೈಡ್ ಗೆ ಕೊಡಗು ಜಿಲ್ಲೆಗೆ ಬರುತ್ತಾರೆ ಅದೂ ಗೊತ್ತು!
ಎಂದು ಕೊಡವರ ಪರವಾಗಿ ಕಾಂಗ್ರೆಸ್ ನಾಯಕರಿಗೆ ಬಹಿರಂಗ ಮನವಿ ಮಾಡಲಾಗಿದೆ.
‘ಕಾಂಗ್ರೆಸ್‌ನವರು ಗೆದ್ದ ಅಹಂನಲ್ಲಿ ಇದ್ದಾರೆ. ಅಹಂ ಅಳಿಯುತ್ತದೆ ಎಂಬ ಕನಿಷ್ಠ ಅರಿವು ಅವರಿಗಿಲ್ಲ’
‘ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ನಾವು ಯಾರ ಒತ್ತಡಕ್ಕೂ ಮಣಿಯುವುದಿಲ್ಲ’