Dharwad News: ಧಾರವಾಡ : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಜರುಗಿದ ಗಾಣಿಗ ಸಮಾಜದ ಸಭೆಯಲ್ಲಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ರಾಜ್ಯಾದ್ಯಕ್ಷರಾದ ಆನಂದ ಕೆ ಮಂಡ್ಯ ಸಮಾಜದ ಜನರನ್ನು ಉದ್ದೇಶಿಸಿ ಮಾತನಾಡಿ, ಗಾಣಿಗ ಸಮಾಜ ಕರ್ನಾಟಕ ರಾಜ್ಯದಲ್ಲಿ ಐವತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಹಿಂದಿನ ಸರಕಾರಿ ತನ್ನ ಕೊನೆಯ ಗಳಿಗೆಯಲ್ಲಿ ಅಭಿವೃದ್ಧಿ ನಿಗಮ ಘೋಷಿಸಿತು. ಆದರೆ ಅಭಿವೃದ್ಧಿ ನಿಗಮಕ್ಕೆ ಅನುದಾನ ಮೀಸಲಿಡಲಿಲ್ಲ. ಆದ್ದರಿಂದ ಫೆಬ್ರವರಿ ತಿಂಗಳ ಬಜೆಟ್‌ನಲ್ಲಿ ಈಗಿನ ಕಾಂಗ್ರೆಸ್ ಸರಕಾರ ಅನುದಾನವನ್ನು ಮೀಸಲಿಟ್ಟು, ಬಡ ಗಾಣಿಗರ ಅಭಿವೃದ್ಧಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಪೆಬ್ರವರಿ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಈ ನಾಡಿನ ಗಾಣಿಗ ಸಮಾಜದ ಯುವಕರು ಮತ್ತು ಎಲ್ಲಾ ಗಾಣಿಗರ ಸಂಘಗಳ ಪ್ರಮುಖರಿಗೆ ಖುದ್ದು ಬೇಟಿಯಾಗಿ, ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸಂಚರಿಸುವ ಮೂಲಕ ಪೆಬ್ರವರಿ ತಿಂಗಳ ಫ್ರೀಡಂ ಪಾರ್ಕ್ ಧರಣಿ ಯಶಸ್ವಿಯಾಗಲು ಕೈಜೋಡಿಸಬೇಕು ಎಂದರು. ಅವರು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಗಾಣಿಗ ಸಮಾಜದ ಹಿರಿಯರು ಹಾಗೂ ಯುವಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಧಾರವಾಡ ಜಿಲ್ಲಾ ಅಧ್ಯಕ್ಷರಾದ ಮಲ್ಲಪ್ಪ ಹೊಸಕೇರಿ ಮಾತನಾಡಿ, ಸ್ವಾತಂತ್ರ್ಯ ನಂತರ ಇಷ್ಟು ವರ್ಷಗಳ ಕಾಲ ಗಾಣಿಗರು ದ್ವನಿ ಕಳೆದುಕೊಂಡಿದ್ದೇವೆ. ಇನ್ನೂ ಮುಂದೆ ನಮ್ಮ ದ್ವನಿ ನಮ್ಮನ್ನು ಆಳುವ ಸರಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕು. ಆದ್ದರಿಂದ ಪೆಬ್ರವರಿ 5 ರ ಬೆಂಗಳೂರಿನಲ್ಲಿ ಜರುಗಲಿರುವ ಹೋರಾಟಕ್ಕೆ ರಾಜ್ಯದ ಗಾಣಿಗ ಸಮಾಜದ ಎಲ್ಲಾ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು. ಪಂಚಾಯತಿ ಸದಸ್ಯರಾದ ಬಸು ಹೆಬ್ಬಾಳ, ಬಸವರಾಜ ಶಿವಪ್ಪ, ಲಕ್ಕಮ್ಮನವರ ಪ್ರಮುಖ ನಾಯಕರುಗಳಾದ ಮಲ್ಲಪ್ಪ ಲಕ್ಕಮ್ಮನವರ, ಮಂಜು ಪ್ರಭು ಲಕ್ಕಮ್ಮನವರ, ಅಡಿವೆಪ್ಪ ಲಕ್ಕಮ್ಮನವರಗಾಣಿಗ ಅಭಿವೃದ್ಧಿ ನಿಗಮಕ್ಕೆ ಅನುದಾನ ಮೀಸಲಿಡಲು ಆನಂದ ಕೆ ಮಂಡ್ಯ ಆಗ್ರಹಿಸಿದ್ದಾರೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಜರುಗಿದ ಗಾಣಿಗ ಸಮಾಜದ ಸಭೆಯಲ್ಲಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ರಾಜ್ಯಾದ್ಯಕ್ಷರಾದ ಆನಂದ ಕೆ ಮಂಡ್ಯ ಸಮಾಜದ ಜನರನ್ನು ಉದ್ದೇಶಿಸಿ ಮಾತನಾಡಿ, ಗಾಣಿಗ ಸಮಾಜ ಕರ್ನಾಟಕ ರಾಜ್ಯದಲ್ಲಿ ಐವತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಹಿಂದಿನ ಸರಕಾರಿ ತನ್ನ ಕೊನೆಯ ಗಳಿಗೆಯಲ್ಲಿ ಅಭಿವೃದ್ಧಿ ನಿಗಮ ಘೋಷಿಸಿತು. ಆದರೆ ಅಭಿವೃದ್ಧಿ ನಿಗಮಕ್ಕೆ ಅನುದಾನ ಮೀಸಲಿಡಲಿಲ್ಲ. ಆದ್ದರಿಂದ ಫೆಬ್ರವರಿ ತಿಂಗಳ ಬಜೆಟ್‌ನಲ್ಲಿ ಈಗಿನ ಕಾಂಗ್ರೆಸ್ ಸರಕಾರ ಅನುದಾನವನ್ನು ಮೀಸಲಿಟ್ಟು, ಬಡ ಗಾಣಿಗರ ಅಭಿವೃದ್ಧಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’
2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್




