ಮಾತಿನ ಮಲ್ಲಿ, ಆ್ಯಂಕರ್ ಅನುಶ್ರೀಗೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದ್ರೆ ಜೀವಾತ್ಮ ಇದ್ದಂತೆ. ತಮ್ಮ ನಡೆ, ನುಡಿ, ಆಚಾರ, ವಿಚಾರ, ಸಹಾಯ ಮನೋಭಾವ.. ಹೀಗೆ ಪ್ರತಿಯೊಂದ್ರಲ್ಲೂ ಅಪ್ಪು ಅವರನ್ನೇ ಅನುಸರಿಸ್ತಾರೆ. ಇದೀಗ ಅಪ್ಪು ಅಭಿಮಾನಿಯೇ ಅನುಶ್ರೀಯನ್ನ ಕೈಹಿಡಿದಿದ್ದಾರೆ. ಈ ಬಗ್ಗೆ ಸ್ವತಃ ಅನುಶ್ರೀಯವರೇ ಹೇಳಿಕೊಂಡಿದ್ದಾರೆ.
ಅನುಶ್ರೀ ಪತಿ ರೋಷನ್ ಅಪ್ಪು ಅಭಿಮಾನಿಯಂತೆ. ರೋಷನ್ ಕೂಡ ಅಪ್ಪು ಸರ್ ಅವ್ರನ್ನ ಬಹಳ ಇಷ್ಟ ಪಡೋದಾಗಿ ಅನುಶ್ರೀ ಹೇಳಿಕೊಂಡಿದ್ದಾರೆ. ನಟ ಯುವರಾಜ್‌ಕುಮಾರ್ ಅವರ ಮಾಜಿ ಪತ್ನಿ ಶ್ರೀದೇವಿಯವರ, ಬಹಳ ಆತ್ಮೀಯ ಸ್ನೇಹಿತರು ರೋಷನ್. ಅಪ್ಪು ಸರ್ ನಿಧನದ ಬಳಿಕ ನಡೆದಿದ್ದ, ಪುನೀತ ಪರ್ವ ಕಾರ್ಯಕ್ರಮದಲ್ಲಿ ಇಬ್ಬರು ಮೀಟ್ ಮಾಡಿದ್ರಂತೆ. ಅಲ್ಲಿಂದ ಅನುಶ್ರೀ-ರೋಷನ್ ನಡುವೆ ಸ್ನೇಹ ಬೆಳೆದಿತ್ತು. ಇನ್ನು, ಅಪ್ಪು ಸರ್ ಅವರೇ ನಮ್ಮಿಬ್ಬರನ್ನು ಸೇರಿಸಿದ್ದಾರೆ ಅಂತಾ ಅನುಶ್ರೀ ಭಾವುಕರಾದ್ರು.
ಅನುಶ್ರೀ-ರೋಷನ್ ಮದುವೆ ಮಂಟಪದ ಪಕ್ಕವೇ, ಪುನೀತ್ ರಾಜ್‌ಕುಮಾರ್ ಅವರ ಫೋಟೋ ಇಡಲಾಗಿತ್ತು. ಇದಕ್ಕಾಗಿಯೇ ಪ್ರತ್ಯೇಕ ಜಾಗ ನಿಗದಿಪಡಿಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಬಣ್ಣಬಣ್ಣದ ಹೂವುಗಳ ನಡುವೆ ಕಪ್ಪುಬಿಳುಪಿನ ಅಪ್ಪು ಭಾವಚಿತ್ರ ಇರಿಸಲಾಗಿತ್ತು. ಈ ಬಗ್ಗೆಯೂ ಅನುಶ್ರೀ ಮಾತನಾಡಿದ್ರು. ಅವರಿಲ್ಲದೇ ನಾವು ಮದುವೆ ಆಗೋದಕ್ಕೆ ಚಾನ್ಸೇ ಇಲ್ಲ. ಅವರ ಇರುವಿಕೆಯಲ್ಲಿ ನಮ್ಮ ಮದ್ವೆ ಆಗಿದೆ ಅಂತಾ ಭಾವುಕರಾದ್ರು.
ಇನ್ನು, ನಿರೂಪಣೆಗೆ ಬ್ರೇಕ್ ತೆಗೆದುಕೊಳ್ತೀರಾ ಅನ್ನೋ ಪ್ರಶ್ನೆಗೆ, ನಾಡಿದ್ದಿನಿಂದಲೇ ಕೆಲಸ ಶುರು ಮಾಡ್ತೀನಿ. ಮದ್ವೆ ಜೀವನದ ಒಂದು ಭಾಗ. ಮದ್ವೆ ತುಂಬಾ ಇಂಪಾರ್ಟೆಂಟ್. ಆದರೂ ಕೆಲಸನೂ ಇಂಪಾರ್ಟೆಂಟ್ ಅಲ್ವಾ ಅಂತಾ ನಗುತ್ತಲೇ ಉತ್ತರಿಸಿದ್ರು.