Hubballi News: ಹುಬ್ಬಳ್ಳಿ: ಆನೇಕಲ್ ಪಟಾಕಿ ದುರಂತದ ಬಳಿಕ ಧಾರವಾಡ ಜಿಲ್ಲೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಧಾರವಾಡದಲ್ಲಿ ಹಲವು ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು ಇಂದು ಹುಬ್ಬಳ್ಳಿಯಲ್ಲಿ ಅಕ್ರಮ ಪಟಾಕಿ ಗೋಡೌನ್ ಮೇಲೆ ಸುಮಾರು 70 ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ.
ಹುಬ್ಬಳ್ಳಿ ತಾಲೂಕಿನ ಶೆರೆವಾಡ ಗ್ರಾಮದಲ್ಲಿರುವ ಗೋಡೌನ್ ಮೇಲೆ ಕಂದಾಯ ಇಲಾಖೆ,ಪೊಲೀಸ್ ಇಲಾಖೆ,ವಾಯುಮಾಲಿನ್ಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಪಟಾಕಿ ಸಂಗ್ರಹಿಸಿದ ಹಿನ್ನಲೆಯಲ್ಲಿ ದಾಳಿ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಬೃಹತ್ ಗೋಡೌನ್ ನಲ್ಲಿ ಕೋಟ್ಯಾಂತರ ಮೌಲ್ಯದ ಪಟಾಕಿ ಸಂಗ್ರಹ ಪತ್ತೆಯಾಗಿದೆ. ಸರ್ವೆ ನಂಬರ್ 458 ರಲ್ಲಿ ಆರ್ .ಆರ್. ಹೆಬಸೂರ ಆ್ಯಂಡ್ ಸನ್ಸ್ ಹೆಸರಲ್ಲಿರುವ ಗೋಡೌನ್ ನಲ್ಲಿದ್ದ ಹಸಿರು ಪಟಾಕಿ ಅಧಿಕಾರಿಗಳು ಬೇರ್ಪಡಿಸಿದ್ದಾರೆ. ಆನೇಕಲ್ ಪಟಾಕಿ ದುರಂತದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದುಣ ಹಲವು ಕಡೆ ದಾಳಿ ಮುಂದುವರೆಸಿದ್ದಾರೆ.
ಲೋಕಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ದಾವಣಗೆರೆ ಅಬಕಾರಿ ಡಿಎಸ್‌ಪಿ ಪರಾರಿ