Friday, November 22, 2024

Latest Posts

Anganawadi: ಸರ್ಕಾರದ ವಿರುದ್ದ ಸಿಡಿದೆದ್ದ ಅಂಗನವಾಡಿ ನೌಕರರು

- Advertisement -

ಬೇಲೂರು: ಬೇಲೂರು ತಾಲ್ಲೂಕು ಅಂಗನವಾಡಿ ಕಾರ್ಯಕರ್ತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಅಂಗನವಾಡಿ ನೌಕರರನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ.

ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೆರಿಸಲು ಮೀನಾ-ಮೇಷ ಎಣಿಸುತ್ತಿದೆ.ಈ ಹಿಂದೆ ರಾಜ್ಯ ಸರ್ಕಾರ ನೀಡಿದ ಮೊಬೈಲ್‌ಗಳನ್ನು ಬಂಡವಾಳ ಮಾಡಿಕೊಂಡ ಸರ್ಕಾರ ಇಲ್ಲ-ಸಲ್ಲದ ಕೆಲಸಗಳನ್ನು ಅಂಗನವಾಡಿ ನೌಕರರಿಗೆ ಹೇರುತ್ತಿದೆ.

ವೈಜ್ಞಾನಿಕ ವೇತನ ನೀಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಬೇಲೂರು ತಾಲ್ಲೂಕು ಘಟಕದಿಂದ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಜಮಾಸಿ ಬೇಡಿಕೆಗಳು ಈಡೇರಿಸಬೇಕು ಎಂದು ಸರ್ಕಾರದ ವಿರುದ್ದ ದಿಕ್ಕಾರದ ಘೋಷಣೆ ಹಾಕಿದರು.ತಾಲ್ಲೂಕು ಅಂಗನವಾಡಿ ನೌಕರರ ಸಂಘ ಪದಾಧಿಕಾರಿಗಳಾದ ಇಂದಿರಮ್ಮ, ಮಂಜುಳಾ ಮತ್ತು ಕಾಮಾಕ್ಷಿರಾಜು ಇದ್ದರು.

ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಿ ಜಾರಿಗೊಳಿಸಬೇಕು. ನಮಗೆ ಸಾಮಾಜಿಕ ಭದ್ರತೆಗಳಾದ ಇಎಫ್‌ಐ ಮತ್ತು ಪಿಎಫ್ ಪಿಂಚಣಿ ಇತರ ಸೌಲಭ್ಯಗಳನ್ನು ನೀಡಲೇಬೇಕು. ೪೫ ಮತ್ತು ೪೬ ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್ ಗಳ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆರರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಕೋಡುವ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ತಕ್ಷಣವೇ ಜಾರಿಗೊಳಿಸಬೇಕಿದೆ. ಸುಪ್ರೀಂ ಕೋರ್ಟ್ ಮತ್ತು ಸಂಸದೀಯ ಮಂಡಳಿಗಳ ಶಿಪಾರಸ್ಸುಗಳ ಪ್ರಕಾರ ದೇಶದ ಅಂಗನವಾಡಿ ನೌಕರರು ಮೂಲ ವೇತನ ನಿಗಧಿ, ಇನ್‌ಕ್ರಿಮೆಂಟ್ ನಿಗಧಿ, ಇತರೆ ಭತ್ಯೆಗಳ ಪರಿಶೀಲನೆ ಮತ್ತು ನಿಗಧಿಗಾಗಿ ಸಮಿತಿಯೊಂದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಶೀಘ್ರವೇ ಜಾರಿಗೊಳಿಸಬೇಕಿದೆ.ನಮಗೆ ಏಕ ರೂಪದ ಸೇವಾ ನಿಯಮಗಳು ರೂಪಿಸಬೇಕು. ಸಂಘಟನೆ ಮತ್ತು ಹೋರಾಟದಲ್ಲಿ ಭಾಗವಹಿಸಿದ ಅಂಗನವಾಡಿ ಕಾರ್ಯಕರ್ತೆನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿರುವ ನೌಕರರನ್ನು ಮರು ನೇಮ ಮಾಡಲೇಬೇಕು. ನಾವುಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ನೀಡಿದಲ್ಲದೆ ಹೆಚ್ಚಿನ ಕೆಲಸಗಳಿಗೆ ಟ್ಯಾಬ್ಲೇಟ್ ಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಪ್ರೋಗ್ರಾಮ್ ನಲ್ಲಿ ಅಳವಡಿಸಬೇಕು ಹಾಗೂ ಈ ಸಂಬAಧ ನೌಕರರ ಮೇಲೆ ಕಿರುಕುಳ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಪೋಷಣ್ ಅಭಿಯಾನಕ್ಕೆ ಆಧಾರ್ ಲಿಂಕ್ ಹಿಂಪಡೆಯಬೇಕು. ಎನ್‌ಇಪಿ ೨೦೨೦ ನ್ನು ಹಿಂಪಡೆಯಬೇಕು. ದೇಶದಲ್ಲಿನ ಆರು ವರ್ಷಗಳ ಒಳಗಿನ ಎಲ್ಲಾ ಮಕ್ಕಳಿಗೂ ಪೂರ್ವ ಪ್ರಾಥಮಿಕ ಕಡ್ಡಾಯ ಶಿಕ್ಷಣ ಕಾಯಿದೆ ರೂಪಿಸಬೇಕಿದೆ. ಅಂಗನವಾಡಿಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡದೆ,ಸ್ಕೀಮ್ ಕೆಲಸಗಾರರನ್ನು ಕಾರ್ಮಿಕರ ಕಾಯಿದೆ ವ್ಯಾಪ್ತಿಗೆ ಒಳಪಡಿಸಬೇಕು. ಕಾರ್ಮಿಕ ವಿರೋಧಿ ಲೇಬರ್ ಕೋಡ್‌ಗಳನ್ನು ರದ್ದು ಪಡಿಸಬೇಕಿದೆ ಇಂತಹ ಹತ್ತಾರು ಬೇಡಿಗಳನ್ನು ಹಿಡಿದು ನಾವುಗಳು ಅಂಬೇಡ್ಕರ್ ವೃತ್ತದಿಂದ ಕೇಂಪೇಗೌಡ ವೃತ್ತ ಮಾರ್ಗವಾಗಿ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತ ಧಾವಿಸಿ ಬಳಿಕ ಶಿಶು ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮೊಬೈಲ್ ವಾಪಸ್ಸು ಸೇರಿದಂತೆ ಬೇಡಿಕೆಗಳ ಮನವಿಯನ್ನು ನೀಡಲಾಗುತ್ತದೆ ಎಂದರು.

 

C.M Nimbannanavar : ಮಾಜಿ ಶಾಸಕ ನಿಧನ : ಸ್ವಗೃಹದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ

Manglore : ಕರಾವಳಿಯಲ್ಲಿ ತುಸು ತಗ್ಗಿದ ಮಳೆ ಆರ್ಭಟ..!

Building:ದುರಸ್ಥಿ ಭಾಗ್ಯ ಕಾಣದ ನಿಜಾಮರ ಕಾಲದ ಕಟ್ಟಡಗಳು

- Advertisement -

Latest Posts

Don't Miss