Saturday, May 18, 2024

Latest Posts

ಶಿಶುವಿಗೆ ಸ್ತನಪಾನದ ಜೊತೆ ಹಸುವಿನ ಹಾಲು ಕುಡಿಸಿದರೆ ಒಳ್ಳೆಯದಾ..?

- Advertisement -

Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಮಕ್ಕಳ ಆಹಾರ ಸೇವನೆಯ ವಿಷಯದಲ್ಲಿ, ಹಿರಿಯರ ಮಾತು ಕೇಳಿಯೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ನಾವು ಶಿಶುವಿಗೆ ಸ್ತನಪಾನದ ಜೊತೆ ಹಸುವಿನ ಹಾಲು ಕುಡಿಸಬಹುದಾ..? ಹಾಗಾದರೆ, ಯಾವ ರೀತಿ ಹಾಲು ಕುಡಿಸಬೇಕು ಅಂತಾ ತಿಳಿಸಲಿದ್ದೇವೆ.

6 ತಿಂಗಳವರೆಗೆ ಮಗುವಿಗೆ ಸ್ತನಪಾನವನ್ನೇ ಮಾಡಿಸಬೇಕು ಅನ್ನೋ ನಿಯಮವಿದೆ. ಆದರೆ ತಾಯಿಯ ಎದೆ ಹಾಲು ಕಡಿಮೆಯಾದಾಗ, ಮಗುವಿಗೆ ಹಸುವಿನ ಹಾಲು ಕುಡಿಸುವುದು ಅನಿವಾರ್ಯವಾಗುತ್ತದೆ. ಆದರೆ ನೀವು ಸಡನ್ ಆಗಿ ಸ್ತನಪಾನ ಬಿಡಿಸಿ, ಹಸುವಿನ ಹಾಲು ಕುಡಿಸಿದರೆ, ಮಗುವಿನ ಆರೋಗ್ಯಕ್ಕೆ ತೊಂದರೆಯಾಗುತ್ತದೆ.

ಹಾಗಾಗಿ 3 ತಿಂಗಳವರೆಗಾದರೂ ನೀವು ಸ್ತನಪಾನವನ್ನೇ ಮಾಡಿಸಬೇಕಾಗುತ್ತದೆ. ನೀವು ಚೆನ್ನಾಗಿ ಹಸುವಿನ ಹಾಲನ್ನು ಕುಡಿದಾಗ, ನಿಮ್ಮ ಎದೆ ಹಾಲು ಹೆಚ್ಚುತ್ತದೆ. ಆಗ ಮಗುವಿಗೂ ಹೊಟ್ಟೆ ತುಂಬುವಷ್ಟು ಹಾಲು ಸಿಗುತ್ತದೆ. ಆದರೆ 3 ತಿಂಗಳ ಬಳಿಕ, ನೀವು ಸ್ತನಪಾನದ ಜೊತೆ, ಮಗುವಿಗೆ ಕೊಂಚ ಕೊಂಚ ಹಸುವಿನ ಹಾಲು ಕುಡಿಸಬಹುದು. 100ರಲ್ಲಿ 90 ಪರ್ಸೆಂಟ್ ಎದೆ ಹಾಲು ಕುಡಿಸಿದರೆ, 10 ಪರ್ಸೆಂಟ್‌ ಮಾತ್ರ ಹಸುವಿನ ಹಾಲು ಕುಡಿಸಿ.

ಇದೇ ರೀತಿ, ಮಗು ಆರೋಗ್ಯವಾಗಿದೆ. ಅದಕ್ಕೇನೂ ತೊಂದರೆಯಾಗುತ್ತಿಲ್ಲವೆಂದಾದಲ್ಲಿ ಮಾತ್ರ, ಈ ರೀತಿಯಾಗಿ ಅರ್ಧ ಸ್ತನಪಾನ , ಅರ್ಧ ಹಸುವಿನ ಹಾಲು ಕುಡಿಸಲು ಶುರು ಮಾಡಿ. ನೆನಪಿರಲಿ, ನಿಮ್ಮ ಎದೆ ಹಾಲು ಕಡಿಮೆಯಾದಲ್ಲಿ ಮಾತ್ರ ಹೀಗೆ ಮಾಡಿ. ಇಲ್ಲವಾದಲ್ಲಿ ಒಂದರಿಂದ ಒಂದೂವರೆ ವರ್ಷದವರೆಗೂ ನೀವು ಮಗುವಿಗೆ ಸ್ತನಪಾನ ಮಾಡಿಸಬಹುದು. ಆದರೆ ಹಸುಗೂಸಿರುವಾಗಲೇ, ಒಂದೇ ಸಲಕ್ಕೆ ಸ್ತನಪಾನ ನಿಲ್ಲಿಸಿ, ಹಸುವಿನ ಹಾಲು ಕುಡಿಸುವಂತಿಲ್ಲ. ಹಸುವಿನ ಹಾಲು ಕುಡಿಸುವಾಗಲೂ, ಅದನ್ನ ಸರಿಯಾಗಿ ಗಾಳಿಸಿ, ಕಾಯಿಸಿ, ಬಳಿಕ ಕುಡಿಸಿ.

ಬೀಟ್ರೂಟ್ ಈ ರೀತಿಯಾಗಿ ಬಳಸಿದರೆ, ಮೇಕಪ್ ಮಾಡುವುದೇ ಬೇಕಾಗಿಲ್ಲ..

ಬಾಯಿ ವಾಸನೆ ತಡೆಗಟ್ಟಲು ಇಲ್ಲಿದೆ ನೋಡಿ ಉತ್ತಮ ಪರಿಹಾರ..

ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..

- Advertisement -

Latest Posts

Don't Miss