ಅಂಗನವಾಡಿ ಅಡುಗೆ ಸಹಾಯಕರು ಹಾಗೂ ಬಿಸಿಯೂಟ ಕಾರ್ಮಿಕರು ಪ್ರತಿಭಟನೆ

Dharwad News: ಧಾರವಾಡ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ ಅಡುಗೆ ಸಹಾಯಕರು ಹಾಗೂ ಬಿಸಿಯೂಟ ಕಾರ್ಮಿಕರು ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದ ಅಂಗನವಾಡಿ ಅಡುಗೆ ಸಹಾಯಕರು ಹಾಗೂ ಬಿಸಿಯೂಟ ಕಾರ್ಮಿಕರು ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಬಿಸಿಯೂಟ ಕಾರ್ಮಿಕರಿಗೆ ಮಾಸಿಕ ಗೌರವಧನ 6000 ಸಾವಿರ ನೀಡಬೇಕು. ಬಾಕಿಯಿರುವ ಗೌರವಧನ ಕೂಡಲೇ ಬಿಡುಗಡೆ ಮಾಡಬೇಕು. ವರ್ಷದ 12 ತಿಂಗಳು ಗೌರವಧನ ನೀಡಬೇಕು. ಶಾಸನಬದ್ಧವಾಗಿ ಕಾರ್ಮಿಕರಿಗೆ ಇರುವ ರಜೆ ನೀಡಬೇಕು ಹಾಗೂ ಬಿಸಿಯೂಟ ಕಾರ್ಮಿಕರಿಗೆ ಸಮವಸ್ತ್ರ ನೀಡಬೇಕು ಎಂದು ಒತ್ತಾಯಿಸಿದರು.

ನಟಿ ಪೂನಂ ಪಾಂಡೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳು ಕೇವಲ ಲೋಕಸಭಾ ಚುನಾವಣೆವರೆಗೂ ಮಾತ್ರ: ಶಾಸಕ ಅರವಿಂದ್ ಬೆಲ್ಲದ್

ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿದ್ದಕ್ಕೆ ಸಂಕೋಚ ಪಡಬೇಕಿಲ್ಲ: ಸಿ.ಟಿ.ರವಿ

About The Author