Hubballi News: ಕೊರೋನಾ ಸೇರಿದಂತೆ ಅನೇಕ ಕ್ಲಿಷ್ಟಕರ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸಿದ ಕುಂದಗೋಳ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮವೊಂದರಲ್ಲಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ವರ್ಗಾವಣೆಗೊಂಡ ಕುಂದಗೋಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅನ್ನಪೂರ್ಣ ಸಂಗಳದರನ್ನು ಬೀಳ್ಕೊಡುವ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಮನಸ್ಸು ಗೆದ್ದಿದ್ದ ಅನ್ನಪೂರ್ಣ ಸಂಗಳದ ,ಅವರ ಹಠಾತ್ ವರ್ಗಾವಣೆ ಮಹಿಳೆಯರ ಕಣ್ಣಿರಿಗೆ ಕಾರಣವಾಗಿದೆ.
ದಕ್ಷ ಅಧಿಕಾರಿಯಾಗಿದ್ದ ಅನ್ನಪೂರ್ಣ ಸಂಗಳದ, ಇಲಾಖೆಯಲ್ಲಿ ಬ್ರಷ್ಟಾಚಾರಕ್ಕೆ ಬ್ರೇಕ್ ಹಾಕಿದ್ದರು ಎನ್ನಲಾಗಿದೆ. ಅಂಗನವಾಡಿ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಪೂರೈಕೆ ಮೇಲೆ ನಿಗಾ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ಅನ್ನಪೂರ್ಣ ಸಂಗಳದ ತೊಡಗಿದ್ದರು. ಇಂತಹ ಸಂದರ್ಭದಲ್ಲಿ ಅವರ ಹಠಾತ್ ವರ್ಗಾವಣೆ ಅಂಗನವಾಡಿ ಕಾರ್ಯಕರ್ತರಿಗೆ ನೋವು ತಂದಿದೆ ಕಣ್ಣಿರಿನಿಂದ ಅವರಿಗೆ ಬಿಳ್ಕೊಟ್ಟಿದ್ದಾರೆ..
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸವದಿ..