ಧಾರವಾಡದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರು

Dharwad News: ರಾಜ್ಯ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ‌ನ ಪ್ರಿಯಾಂಕ ಗಾಂಧಿ ಅವರು ಅಂಗನವಾಡಿ ಕಾರ್ಯಕರ್ತರೆಯ ಸಹಾಧನ ಏರಿಕೆ ಗ್ಯಾರಂಟಿ ಘೋಷಣೆ ಮಾಡಿದ್ದು, ಆದರೆ ಅದೂ ಇದುವರೆಗೂ ಈಡೇರಸದ ರಾಜ್ಯ ಸರ್ಕಾರ ನಿರ್ಲಕ್ಷ್ಯ ನಡೆ ಖಂಡಿಸಿ ಹಾಗೂ ಸಹಾಧನ 15 ಸಾವಿರಕ್ಕೆ ಏರಿಸುವ ಮೂಲಕ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ, ಧಾರವಾಡದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೀದಿಗೆ ಇಳಿದು ಪ್ರತಿಭಟನೆ ಮಾಡಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ‌

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಕಿಯರ ಫೆಡರೇಶನ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು.

ರಾಜ್ಯ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ನ ನಾಯಕಿ ಪ್ರಿಯಾಂಕ ಗಾಂಧಿಯವರು ಆರನೇಯ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯಧನ ಏರಿಕೆ ಘೋಷಣೆ ಮಾಡಿದರು. ಆದರೆ ಗ್ಯಾರಂಟಿಗಳ ಘೋಷಣೆ ನಮ್ಮ ಪಾಲಿಗೆ ಘೋಷಣೆಯಾಗಿಯೇ ಉಳಿದಿದೆ. ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದ್ದರು.

ನಮ್ಮ ಪಾಲಿನ ಆರನೇ ಗ್ಯಾರಂಟಿ ಈಡೇರುತ್ತಿಲ್ಲ.‌ ಹಾಗಾಗಿ ಈ ಕೂಡಲೇ ಅಂಗನವಾಡಿ ಕಾರ್ಯಕರ್ತೆಯರ ಸಹಾಧನ 15 ಸಾವಿರಕ್ಕೆ ಏರಿಸುವ ಮೂಲಕ ಸರ್ಕಾರದ ಆರನೇ ಗ್ಯಾರಂಟಿಯನ್ನು ಈಡೇರಿಸಬೇಕು.ಒಂದು ವೇಳೆ ಇದೇ ನಿರ್ಲಕ್ಷ್ಯ ಮುಂದುವರೆದಿದ್ದೆಯಾದಲ್ಲಿ ಉಗ್ರ ಹೋರಾಟಕ್ಕೆ ನಾವೆಲ್ಲರೂ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.‌

About The Author