Friday, March 14, 2025

Latest Posts

‘ರಾಹುಲ್ ಗಾಂಧಿ ಟ್ರೋಲರ್ ಗಳ ರೀತಿ ಮಾತನಾಡುತ್ತಿದ್ದಾರೆ ವಿನಃ ರಾಷ್ಟ್ರೀಯ ನಾಯಕರಂತಲ್ಲ’

- Advertisement -

ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೊದಲೇ ಅವರು ಕಾಂಗ್ರೆಸ್ ಬಿಡುವ ಸೂಚನೆ ನೀಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಮೋದಿ ವಿಷಯಕ್ಕೆ ಸಂಬಂಧಿಸಿದಂತೆ ಅನಿಲ್ ಗೆ ಕಾಂಗ್ರೆಸ್ಸಿಗರು ಟೀಕೆ ಮಾಡಿದ್ದರು. ಈ ಕಾರಣಕ್ಕೆ ಅನಿಲ್ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದರು.

ಅನಿಲ್ ಕಾಂಗ್ರೆಸ್ ತೊರೆದು ಎರಡು ದಿನಗಳೂ ಕಳೆದಿಲ್ಲ. ಆಗಲೇ ರಾಹುಲ್ ಗಾಂಧಿ ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ಅದರಲ್ಲಿ ಅನಿಲ್ ಹೆಸರನ್ನ ಪ್ರಸ್ತಾಪಿಸಿದ್ದಾರೆ. ಅಲ್ಲದೇ, ಪಕ್ಷ ತೊರೆದ 5 ಜನರ ಹೆಸರನ್ನ ಕೂಡ ಪ್ರಸ್ತಾಪಿಸಿದ್ದಾರೆ. ಅದಾನಿ ಎಂಬ ಹೆಸರಿನಲ್ಲೇ ಅನಿಲ್, ಗುಲಾಂ, ಸಿಂಧ್ಯಾ, ಕಿರಣ್, ಹಿಮಂತ್ ಎಂದು ಗ್ರಾಫಿಕ್ ಡಿಸೈನ್ ಇರುವ ಫೋಟೋವನ್ನ ರಾಹುಲ್ ಅಪ್ಲೋಡ್ ಮಾಡಿದ್ದಾರೆ. ಇದರ ಅರ್ಥ, ಪಕ್ಷ ತೊರೆದ ಗುಲಾಂ ನಭಿ ಆಜಾದ್, ಜ್ಯೋತಿರಾದಿತ್ಯ ಸಿಂಧ್ಯಾ, ಅನಿಲ್ ಆ್ಯಂಟನಿ, ಕಿರಣ್ ರೆಡ್ಡಿ ಮತ್ತು ಹಿಮಂತ್ ಎಂದು. ಇನ್ನು ಇದರೊಂದಿಗೆ ಹೀಗೆ ಬರೆಯಲಾಗಿದೆ, ಇವರು ಸತ್ಯವನ್ನು ಮರೆಮಾಚುತ್ತಾರೆ. ಹಾಗಾಗಿ ದಾರಿ ತಪ್ಪುತ್ತಾರೆ. ಪ್ರಶ್ನೆ ಏನೆಂದರೆ ಅದಾನಿ ಕಂಪನಿಯಲ್ಲಿರುವ 20 ಸಾವಿರ ಕೋಟಿ ದುಡ್ಡು ಯಾರದ್ದು ಎಂಬುದು..? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ಅನಿಲ್ ಆ್ಯಂಟನಿ, ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷ, ಪ್ರಧಾನಿ ಅಭ್ಯರ್ಥಿ ಎಂದು ಕರೆಯಲ್ಪಟ್ಟ ರಾಹುಲ್ ಗಾಂಧಿ ಈ ರೀತಿ ಮಾತನಾಡಿರುವುದು ದುಃಖಕರವಾಗಿದೆ. ಇವರು ಸಾಮಾಜಿಕ ಜಾಲತಾಣದಲ್ಲಿ ಬರುವ ಸೆಲ್ ಟ್ರೋಲರ್‌ಗಳಂತೆ ಮಾತನಾಡುತ್ತಿದ್ದಾರೆ ವಿನಃ ಓರ್ವ ರಾಷ್ಟ್ರೀಯ ನಾಯಕನಂತೆ ಅಲ್ಲ. ದೇಶ ಕಟ್ಟುವ ಕೆಲಸಕ್ಕಾಗಿ ದಶಕಗಳಿಂದ ಕೊಡುಗೆ ನೀಡಿದ ಈ ದಿಗ್ಗಜರೊಂದಿಗೆ ನನ್ನ ಹೆಸರಿರುವುದು ತುಂಬಾ ಸಂತಸದ ವಿಷಯ. ನಾನು ಕಾಂಗ್ರೆಸ್ ಪಕ್ಷ ತೊರೆದಿದ್ದು, ಅವರು ಭಾರತ ಮತ್ತು ಇಲ್ಲಿನ ಜನರಿಗಾಗಿ ಕೆಲಸ ಮಾಡಲು ಆದ್ಯತೆ ನೀಡಿದ್ದರೇ ವಿನಃ ತಮ್ಮ ಕುಟುಂಬಸ್ಥರಿಗಾಗಿ ಅಲ್ಲ ಎಂದು ಟ್ವೀಟ್ ಮಾಡುವ ಮೂಲಕ, ಪರೋಕ್ಷವಾಗಿ ಇವರದ್ದು ಕುಟುಂಬ ರಾಜಕಾರಣವೆಂದು ಹಂಗಿಸಿದ್ದಾರೆ.

‘ಇಲ್ಲಿ 80 ಕೋಟಿ ಉಚಿತ ರೇಷನ್ ನೀಡುತ್ತಿದ್ದಾರೆ, ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಪರದಾಟ’

‘ನೆಹರೂ ಕುಟುಂಬದ ರಾಹುಲ್ ಗಾಂಧಿಗೆ ಬಿಜೆಪಿಯವರು ತೊಂದರೆ ಕೊಡ್ತಿದ್ದಾರೆ’

‘ಈ ಬಾರಿ ಮಾಲೂರಿನಲ್ಲಿ ಕಾಂಗ್ರೆಸ್‌ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸುತ್ತೆ’

- Advertisement -

Latest Posts

Don't Miss