Bollywood News: ಕೆಲ ತಿಂಗಳ ಹಿಂದೆ ರಿಲೀಸ್ ಆಗಿದ್ದ ಅನಿಮಲ್ ಸಿನಿಮಾ ಬಗ್ಗೆ ಬಾಲಿವುಡ್ ಸೆಲೆಬ್ರಿಟಿ ಜಾವೇದ್ ಅಖ್ತರ್ ವಿರೋಧ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ರಣ್ವೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅನಿಮಲ್ ಸಿನಿಮಾ ರಿಲೀಸ್ ಆಗಿ, ಸೂಪರ್ ಹಿಟ್ ಆಗಿತ್ತು. ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಸಖತ್ ಫೇಮಸ್ ಆಗಿದ್ದರು. ಆದರೆ ಈ ಸಿನಿಮಾ ನೋಡಿದವರು, ಟೀಸರ್, ಟ್ರೇಲರ್ ನೋಡಿದವರೆಲ್ಲ ಸಿನಿಮಾ ಬಗ್ಗೆ ಹೆಚ್ಚು ನೆಗೆಟಿವ್ ಆಗಿಯೇ ಕಾಮೆಂಟ್ ಮಾಡಿದ್ದರು.
ಮಹಿಳೆಗೆ ಬೂಟು ನೆಕ್ಕು ಎಂದು ಹೇಳುವುದು. ಬೆತ್ತಲೆಯಾಗಿ ಓಡಾಡುವುದು. ಸಂಭೋಗದ ದೃಶ್ಯ ಇವೆಲ್ಲವೂ, ನೆಟ್ಟಿಗರ ಕಣ್ಣು ಕೆಂಪಾಗಿಸಿತ್ತು. ಇದೀಗ ಜಾವೇದ್ ಅಖ್ತರ್ ಕೂಡ ಇದೇ ರೀತಿ ವಿರೋಧ ವ್ಯಕ್ತಪಡಿಸಿದ್ದು, ವಿಕೃತ ಮನಸ್ಥಿತಿಯ ಜನರು ಅನಿಮಲ್‌ನಂಥ ಸಿನಿಮಾ ಮಾಡ್ತಾರೆ ಎಂದು ಹೇಳಿದ್ದಾರೆ.
ಇಂಥ ಸಿನಿಮಾವನ್ನು ಜನ ಗೆಲ್ಲಿಸುತ್ತಾರೆ ಅನ್ನೋದು ವಿಪರ್ಯಾಸದ ಸಂಗತಿ. 10, 12 ಸೇರಿ ಇಂಥ ಸಿನಿಮಾ ಮಾಡಿದ್ದಲ್ಲಿ, ಅಥವಾ ಒಂದು ಅಶ್ಲೀಲ ಹಾಡು ಮಾಡಿದ್ದಲ್ಲಿ ಅದು ಸಮಸ್ಯೆ ಅಲ್ಲ. ಅಥವಾ 400 ಮಂದಿಯಲ್ಲಿ 10ರಿಂದ 12 ಮಂದಿ ಅಮಾನವೀಯರು ಅಂದ್ರೆ ಅದು ತಪ್ಪಲ್ಲ. ಆದರೆ ಇಂಥ ಸಿನಿಮಾ ಹಿಟ್ ಆಗಿದೆ ಎಂದರೆ, ನಿಜಕ್ಕೂ ನಂಬಲಾಗದ ಸಂಗತಿ ಎಂದು ಜಾವೇದ್ ಅಖ್ತರ್ ಅನಿಮಲ್ ಸಿನಿಮಾ ಬಗ್ಗೆ ಬೇಸರ ಹೊರಹಾಕಿದ್ದಾರೆ.