Hassan News: ಹಾಸನ: ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಎಲ್ಲ ಜಿಲ್ಲೆಗಳಲ್ಲೂ ಕೆಂಪೆಗೌಡ ಜಯಂತಿ ಮಾಡುತ್ತಿದ್ದು, ಇದರಲ್ಲಿ ಯಾವುದೇ ಪಕ್ಷಪಾತವಿಲ್ಲ ಎಂದು ಹೇಳಿದ್ದಾರೆ.
ನಾಲ್ಕು ಮೆಡಿಕಲ್ ಕಾಲೇಜು, 40% ಕಮಿಷನ್, ಕರೋನಾ ಸಮಯದಲ್ಲಿ ಅನೇಕ ಆರೋಗ್ಯ ಸಂಬಂಧಿಸಿದ ಸಾಮಗ್ರಿ ಕೊಂಡುಕೊಳ್ಳೋ ಬಗ್ಗೆ ಅವ್ಯವಹಾರ, ಬಿಡ್ ಕಾಯಿನ್, ಅನೇಕ ಕಾಮಗಾರಿ ಬಗ್ಗೆ ಈ ಎಲ್ಲಾ ಬಗ್ಗೆ ನಾವು ತನಿಖೆ ಮಾಡುತ್ತೇವೆ. ಈಗಾಗಲೇ ಪಿಎಸ್ ಐ ಹಹರಣ ಬಗ್ಗೆಯೂ ತನಿಖೆ ಚುರುಕು ಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರ ಆಕ್ಸಿಜನ್ ದುರಂತ ಮರು ತನಿಖೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಂದಿನ ಹೆಲ್ತ್ ಮಿನಿಸ್ಟರ್ ಸುಧಾಕರ್ ಇಬ್ಬರೇ ಸತ್ತಿರೋದು ಅಂತ ಸುಳ್ಳು ಹೇಳಿದ್ರು. ಈ ಬಗ್ಗೆಯೂ ತನಿಖೆ ಮಾಡಲಾಗುವುದು ಎಂದರು. ಇನ್ನು ಸರ್ಕಾರ ಗ್ಯಾರಂಟಿ ವಿಚಾರ ವಿರೋಧ ಪಕ್ಷ ಟೀಕೆ ಸಂಗತಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾವು ಈಗಾಗಲೇ ಹೇಳಿದನ್ನ ಮಾಡಿಲ್ವ . ಈ ಗ್ಯಾರಂಟಿಯಲ್ಲಿ ಈಗಾಗಲೇ ಮಹಿಳೆಯರು ಫ್ರೀ ಓಡಾಡ್ತಿಲ್ವ? ಎಂದು ಪ್ರಶ್ನಿಸಿದ್ದಾರೆ.
ಅನ್ನ ಭಾಗ್ಯ ಕಾರ್ಯಕ್ರಮ ,10 ಕೆಜಿ ಕೊಡ್ತಿವಿ ಅಂತ ಹೇಳಿದ್ವಿ. 2ಲಕ್ಷ 29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕು , ಅಷ್ಟು ಅಕ್ಕಿ ಸಿಗ್ತಾ ಇಲ್ಲ . ನಮಗೆ ಏನು ಮಾಡಿದ್ರು ಅಂದ್ರೆ ಕೇಂದ್ರ ಸರ್ಕಾರದ FCI ಕೊಡ್ತಿವಿ ಅಂತ ಒಪ್ಕೊಂಡು ಪತ್ರ ಬರೆದ್ರು . ನಂತರ ಕೊಡಲ್ಲ ಅಂತ ಬರೆದ್ರು . ಇದು ಕೇಂದ್ರ ದ ಷಡ್ಯಂತ್ರ ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
FCI ಬಳಿ ಬೇಕಾದಷ್ಟು ಅಕ್ಕಿ ಇದೆ. ಇದನ್ನ ಫುಡ್ ಡಿಪಾರ್ಟ್ಮೆಂಟ್ ಹೇಳಿಕೆ ಬರೆಸಿರೋದು . ಇದನ್ನೇ ಅಮಿತ್ ಷಾ ಭೇಟಿ ಆದಾಗಲೂ ಹೇಳಿದೆ . ನಾವೇನು ಪುಕ್ಸಟೆ ಕೊಡಿ ಅಂತಿಲ್ಲ. ಇವ್ರು ಬಿಜೆಪಿಯವರು ಬಡವರ ಮೇಲೆ ಗದಾ ಪ್ರಹಾರ ಮಾಡ್ತಿದ್ದಾರೆ. ಸಧ್ಯ ನಾವು ಈಗಾಗಲೇ ಬಿಡ್ ಕರೆದಿದ್ದೆವೆ. ಆದರೆ ಅಕ್ಕಿ ಸಿಗ್ತಿಲ್ಲ, ಪಂಜಾಬ್, ತೆಲಂಗಾಣ, ಎಲ್ಲಾ ಕಡೆ ಪ್ರಯತ್ನ ಮಾಡಿದ್ವಿ. ನಾಳೆ ಈ ಬಗ್ಗೆ ಸಭೆ ಮಾಡಿ ತೀರ್ಮಾನಿಸಲಾಗುವುದು. ಅಕ್ಕಿ ಸಿಕ್ಕಿದ ಕೂಡಲೇ ಅನ್ನ ಭಾಗ್ಯ ಯೋಜನೆ ಜಾರಿಯಾಗತ್ತೆ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಯವರಿಗೆ ಏನು ಮೊರೆಲ್ ರೈಟ್ಸ್ ಇದೆ? ಬಿಜೆಪಿಯವರು ಹೇಳಿದ್ದಾರಾ? 600 ಪ್ರಣಾಳಿಕೆ ಹೇಳಿ ಮಾಡಿದ್ರಾ..? ಬೀದಿಗಿಳಿದು ಹೋರಾಟ ಮಾಡೋ ಬದಲು ಕೇಂದ್ರದ ಬಳಿ ಅಕ್ಕಿ ಕೊಡಿಸಲಿ . ದಯಾಮಾಡಿ ನಿಮ್ಮ ಬಳಿ ಯಾರಾದ್ರು ಹೇಳಿದ್ರೆ ನೀವೇ ಅವರಿಗೆ ಹೇಳಲಿ. ಅಶೋಕನ್ನ ಯಡಿಯೂರಪ್ಪ, ಬೊಮ್ಮಾಯಿ ಕೇಳಿ ನಾವು ಅನೌನಸ್ ಮಾಡಬೇಕಿತ್ತಾ? ಖಾಲಿ ಇರುವ ಹುದ್ದೆಯನ್ನ ಹಂತ ಹಂತವಾಗಿ ಭರ್ತಿ ಮಾಡಲಾಗುವುದು. 7ಲಕ್ಷ ಒಮ್ಮಲೇ ಮಾಡ್ತಿವಿ ಅಂತ ಹೇಳಲು ಆಗಲ್ಲ. ನಾವು ಹೇಳಿದ ಗ್ಯಾರಂಟಿ ಇಡೇರಿಸಲು 59 ಸಾವಿರ ಕೋಟಿ ಬೇಕು. ಈ ವರ್ಷ ಸ್ವಲ್ಪ ನಮಗೆ ಭಾರ ಜಾಸ್ತಿ ಆಗಬಹುದು . ಯುವ ನಿಧಿ ಅಂತ ಇನ್ನೊಂದು ಕಾರ್ಯಕ್ರಮ ಮಾಡಿದ್ದೇವೆ. 6 ತಿಗಳ ಒಳಗೆ ಕೆಲಸ ಸಿಗದೆ ಹೊದರೆ ಅವರಿಗೂ ಹೇಳಿದಂತೆ ನಡೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಬಿಜೆಪಿಗೆ ಹೋದವರನ್ನ ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಮಾತೇ ಇಲ್ಲ’
‘ಗೃಹಜ್ಯೋತಿ ಈಗ ಸುಡುಜ್ಯೋತಿ, ಗೃಹಲಕ್ಷ್ಮಿಗೆ ಗ್ರಹಣ, ನಿದಿರೆಗೆ ಜಾರಿದೆ ಯುವನಿಧಿ’