Sunday, April 13, 2025

Latest Posts

‘ಯೋಗಿ ಬರಲಿ, ಮೋದಿ ಬರಲಿ, ನಮಗೆ ದೊಡ್ಡ ಶಕ್ತಿ ದೇವೇಗೌಡರು’

- Advertisement -

ಮಂಡ್ಯ: ಮಂಡ್ಯದ ಬಾಳೆಹೊನ್ನಿಗ ಗ್ರಾಮದಲ್ಲಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದ್ದು, ಇಂದಿನಿಂದ ಪ್ರಚಾರ ಆರಂಭವಾಗಿದೆ. ಜನರು ಕೂಡ ಉತ್ತಮ ಪ್ರತಿಕ್ರಿಯೆ ಕೊಡ್ತಿದ್ದಾರೆ. ಜನರು ಆಶೀರ್ವಾದ ಮಾಡಲು ಮುಂದೆ ಬಂದಿದ್ದಾರೆ. ಅವರ ಪ್ರೀತಿಯಿಂದ ಕೆಲಸ ಮಾಡ್ತಿದ್ದೇನೆ. ಈ ಬಾರಿಯು ಆಶೀರ್ವಾದ ಮಾಡ್ತಾರೆ. ಬಾಳೆಹೋನ್ನಿಗ ಗ್ರಾಮದಲ್ಲಿ ಹಾಲಿನ ಅಭಿಷೇಕಾ ಮಾಡಿ ಶುಭಕೋರಿದ್ದಾರೆ ಎಂದರು‌.

ಅಲ್ಲದೇ, ಅಭಿವೃದ್ಧಿ ಕೆಲಸ ಇಟ್ಟಿಕೊಂಡು ಮತ ಕೇಳ್ತಿದ್ದೇನೆ. ಕೊರೊನಾ ಕಾಲದಲ್ಲಿ ಕೆಲಸ ಮಾಡಿದ್ದೇನೆ. ಯಾರು ಏನೇ ಹಾಕಿದ್ರು ಜೆಡಿಎಸ್ ಅಲೆ ಇದೆ. ಕ್ಷೇತ್ರದಲ್ಲಿ ಯಾರೇ ಅಬ್ಬರ ಮಾಡಿದ್ರು ನಡೆಯಲ್ಲ. ಅಲ್ಲದೇ, ಜೆಡಿಎಸ್‌ಗೆ ಹೆಚ್ಚು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಗಿಂತಲೂ ಹೆಚ್ಚು ಗೆದ್ದಿರುವುದು ಜೆಡಿಎಸ್‌. ಮಳವಳ್ಳಿ ಕ್ಷೇತ್ರ  ಜೆಡಿಎಸ್ ಭದ್ರಕೋಟೆ ಎಂದು ಹೇಳಿದ್ದಾರೆ.

ಜೆಡಿಎಸ್ ಛಿದ್ರ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅನ್ನದಾನಿ, ಫಲಿತಾಂಶದ ದಿನ ನೋಡಲಿ ಯಾರು ಛಿದ್ರ ಆಗಿದೆ ಅಂತ. ರೋಡ್ ಶೋ ಮಾಡಿ ಹೂ ಹಾಕಿಸಿಕೊಂಡ್ರಲ್ಲ ಛಿದ್ರಮಾಡದಲ್ಲ. ನಮ್ಮ ಮತಗಳು ಭದ್ರವಾಗಿವೆ ನಮಗೆ ಬರ್ತಾವೆ. ಜೆಡಿಎಸ್ ನಲ್ಲಿ ಯಾವುದೇ ಗೊಂದಲ ಇಲ್ಲ. ಕುಮಾರಣ್ಣನ, ದೇವೇಗೌಡ್ರು ಬರ್ತಾರೆ. ಪ್ರಚಾರ ಮಾಡ್ತಾರೆ ಎಂದು ಅನ್ನದಾನಿ ಹೇಳಿದ್ದಾರೆ.

ಬಿಜೆಪಿಗೆ ಸುಮಾಲತಾ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅನ್ನದಾನಿ, ಜೆಡಿಎಸ್ ಭದ್ರಕೋಟೆ ಸುಮ್ಮನೆ ಅಲ್ಲಾಡಿಸಲು ಆಗಲ್ಲ. ಕಾರ್ಯಕರ್ತರು ಪಕ್ಷದ ಆಧಾರ ಸ್ತಂಭ. ಯಾರು ಬಂದರು ನಮ್ಮ ಪಕ್ಷ ಶಕ್ತಿ ಇದೆ ಎಂದಿದ್ದಾರೆ.

ಇನ್ನು ಮಂಡ್ಯಕ್ಕೆ ಯುಪಿ ಸಿಎಂ ಯೋಗಿ ಆಗಮನ ವಿಚಾರದ ಬಗ್ಗೆ ಮಾತನಾಡಿದ ಅನ್ನದಾನಿ,  ಅವರು ಬರಲಿ,ಯೋಗಿ, ಮೋದಿ ಬಂದರು ಬರಲಿ‌. ದೇವೇಗೌಡ್ರು ಶಕ್ತಿ ಮುಂದೆ ಬೇರೆ ಶಕ್ತಿ ಇಲ್ಲ. ನಮಗೆ ದೊಡ್ಡ ಶಕ್ತಿ ದೇವೇಗೌಡ್ರು ಎಂದು ಅನ್ನದಾನಿ ಹೇಳಿದ್ದಾರೆ.

ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮೇಲುಗೈ..

ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಮಧ್ಯ ಕರ್ನಾಟಕ ಯಾರ ಪಾಲು..?

ಕರ್ನಾಟಕ ಟಿವಿ ಪ್ರಾಂತ್ಯವಾರು ಸರ್ವೆ: ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನದ್ದೇ ಮೈಲುಗೈ

- Advertisement -

Latest Posts

Don't Miss