Devotional :
ಮನೆಯಲ್ಲಿ ಮಕ್ಕಳು ಸರಿಯಾಗಿ ಊಟವನ್ನು ಮಾಡದೆ ಚೆಲ್ಲುತಿದ್ದರೆ ಮನೆಯ ಹಿರಿಯರು ಅವರಗೆ ಬುದ್ದಿ ಹೇಳುತ್ತಾರೆ. ಅನ್ನ ಪರಬ್ರಹ್ಮಸ್ವರೂಪ ಹಾಗೆ ಬಿಸಾಡಬಾರದು ಎನ್ನುತ್ತಾರೆ. ಯಾಕೆ ಅನ್ನವನ್ನು ಪರಬ್ರಹ್ಮಸ್ವರೂಪ ಎಂದು ಮಕ್ಕಳು ಕೇಳಿದರೆ ಯಾರೂ ಕೂಡಾ ಸರಿಯಾದ ಕಾರಣ ಹೇಳುವುದಿಲ್ಲಾ,ಹೇಳಲೂ ಸಾಧ್ಯವಿಲ್ಲ.
ವಾಸ್ತವವಾಗಿ, ಪ್ರತಿಯೊಂದು ಜೀವಿಯು ಹುಟ್ಟುವ ಮೊದಲು, ದೇವರು ಈ ಭೂಮಿಯಲ್ಲಿ ಆ ಜೀವಿಗೆ ಅಗತ್ಯವಿರುವ ಆಹಾರವನ್ನು ಸೃಷ್ಟಿಸುತ್ತಾನೆ. ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಜನ್ಮದ ಸಮಯದಲ್ಲಿ ಭಗವಂತನು ಆಹಾರವನ್ನು ಒದಗಿಸುತ್ತಾನೆ. ತಾಯಿಯ ಗರ್ಭದಿಂದ ಹೊರಬರುವ ಮೊದಲು, ನಮಗೆ ಇಷ್ಟು ಆಹಾರ ಮತ್ತು ಇಷ್ಟು ನೀರು ಎಂದು ದೇವರು ನಿರ್ಧರಿಸುತ್ತಾನೆ. ಅವನು ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯ ಪಾಪಗಳನ್ನು ಲೆಕ್ಕಹಾಕಿ ಅದಕ್ಕೆ ಅನುಗುಣವಾಗಿ ಮನುಷ್ಯರು ಯಾರ ಹೊಟ್ಟೆಯಲ್ಲಿ ಹುಟ್ಟಬೇಕು ಎಂದು ನಿರ್ಧರಿಸುತ್ತಾರೆ.
ದೇವರು ಕೊಡುವ ಅನ್ನ ನೀರು ಸರಿಯಾದ ಕ್ರಮದಲ್ಲಿ ಬಳಸಿದರೆ ಈ ಭೂಮಿಯ ಮೇಲೆ ಬದುಕಿಗೆ ಬೆಲೆಕೊಟ್ಟಂತೆ. ಅದಕ್ಕಾಗಿಯೇ ನೀವು ತಿನ್ನುವ ಆಹಾರವನ್ನು ಮತ್ತು ನೀವು ಕುಡಿಯುವ ನೀರನ್ನು ವ್ಯರ್ಥ ಮಾಡದೇ ಅಗತ್ಯವಿರುವವರಿಗೆ ದಾನ ಮಾಡುವ ಮೂಲಕ ನಿಮಗೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಅಲ್ಲದೆ ಭವಿಷ್ಯದಲ್ಲಿ ನಮಗೆ ಆಹಾರದ ಕೊರತೆ ಉಂಟಾಗುವುದಿಲ್ಲ ಮತ್ತು ಹೆಚ್ಚು ಕಾಲ ಬದುಕುತ್ತೇವೆ. ಸೃಷ್ಟಿಕರ್ತ ಕೊಟ್ಟ ಅನ್ನವನ್ನು ವ್ಯರ್ಥ ಮಾಡಿದರೆ ಆಯುಷ್ಯ ಕಡಿಮೆಯಾಗುತ್ತದೆ.
ಯಾವುದೇ ತಾಯಿಯಾಗಲಿ ತನ್ನ ಮಕ್ಕಳ ಮಕ್ಕಳ ಆಯಸ್ಸು ಕಡಿಮೆಯಾಗುವುದು ಸಹಿಸುವುದಿಲ್ಲ ಅದಕ್ಕೇ ಅನ್ನವನ್ನು ಬಿಸಾಡ ಬಾರದು ಎಂದು ದಂಡಿಸಿ ಹೇಳುತ್ತಾಳೆ. ಇದನ್ನೆಲ್ಲ ವಿವರವಾಗಿ ವಿವರಿಸಲು ಸಾಧ್ಯವಾಗದೆ ಕೇವಲ ಅನ್ನವೇ ಪರಬ್ರಹ್ಮಸ್ವರೂಪವೆಂದು ಹೇಳುತ್ತಾರೆ. ಆದುದರಿಂದ ಅನ್ನ ದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠವಾಗಿದೆ. ಯಾರಿಗಾದರೂ ಹಣ ಕೊಟ್ಟರೂ ಸಮಾಧಾನವಾಗುವುದಿಲ್ಲ. ಬದಲಾಗಿ ಒಟ್ಟೆಯ ತುಂಬಾ ಉಟ್ಟ ಕೊಟ್ಟರೆ ಸಾಕು ಸಮಾಧಾನವಾಗುತ್ತದೆ.
ನಾವು ಏನೇ ದಾನ ಮಾಡಿದರು ಇನ್ನು ಸ್ವಲ್ಪ ಕೊಟ್ಟರೆ ಚನ್ನಾಗಿರುತ್ತದೆ ಎಂದು ಹೇಳುತ್ತಾರೆ, ಚಿನ್ನಾಭರಣ, ಹಣ, ಬಟ್ಟೆ, ಏನೆಲ್ಲ ಕೊಟ್ಟರು ತೃಪ್ತರಾಗುವುದಿಲ್ಲ. ಆದರೆ ಅನ್ನವನ್ನು ಕೊಟ್ಟರೆ ಮನುಷ್ಯ ತೃಪ್ತನಾಗುತ್ತಾನೆ ಆದ್ದರಿಂದಲೇ ಅನ್ನ ದಾನವನ್ನು ಮೀರಿದ ದಾನವಿಲ್ಲ ಎಂದು ಹೇಳಲಾಗುತ್ತದೆ. ಅನ್ನ ಹೊಟ್ಟೆ ತುಂಬಿಸಿ ಬದುಕಿಸುವುದರಿಂದ ಅನ್ನವನ್ನು ವ್ಯರ್ಥ ಮಾಡಬಾರದು ಎಂಬ ಮಾತಿದೆ.
ಅನ್ನದಾತ_ಸುಖೀಭವ