Thursday, December 12, 2024

Latest Posts

ವಿಜಯ ಪ್ರಾಪ್ತಿಗಾಗಿ ಕಾರ್ತಿಕ ಮಾಸದಲ್ಲಿ ಈ ರೀತಿ ದೀಪಾರಾಧನೆ ಮಾಡಿ..!

- Advertisement -

Devotional :

ನಿಮ್ಮ ಜಾತಕದಲ್ಲಿ ಕಾಳ ಸರ್ಪದೋಷಗಳು ಇದ್ದರೆ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಜಯ ಸಿಗದೇ ಇದ್ದರೆ, ನಾವು ಹೇಳುವ ವಿಧದಲ್ಲಿ ದೀಪಾರಾಧನೆ ಮಾಡಿದರೆ ಕಾರ್ತಿಕ ಮಾಸದ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಹಾಗಾದರೆ ಮನೆಯಲ್ಲಿ ಯಾವ ರೀತಿ ದೀಪಾರಾಧನೆ ಮಾಡಿದರೆ ವಿಜಯ ಪ್ರಾಪ್ತಿಯಾಗುತ್ತದೆ ಎಂದು ತಿಳಿದು ಕೊಳ್ಳೋಣ .

ಎಲ್ಲ ಮಾಸಗಳಿಗಿಂತ ಕಾರ್ತಿಕಮಾಸ ಪವಿತ್ರವಾದ ಮಾಸವಾಗಿದೆ, ಕಾರ್ತಿಕಮಾಸವು ಅಕ್ಟೋಬರ್ 26 ಬುಧವಾರ ದಿಂದ ಪ್ರಾಂಭವಾಗಿ ,ನವೆಂಬರ್ 23ರಂದು ಕೊನೆಗೊಳ್ಳುತ್ತದೆ .ಕಾರ್ತಿಕಮಾಸದ 30ದಿನಗಳು ಶಿವ ಕೇಶವರ ಆರಾಧನೆ ಮಾಡಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತದೆ .ಈ ಮಾಸದಲ್ಲಿ ಒಟ್ಟು 4ಕಾರ್ತೀಕ ಸೋಮವಾರಗಳು ಬರುತ್ತದೆ ,ಅಕ್ಟೋಬರ್31 ಮೊದಲನೇ ಸೋಮವಾರ ,ಎರಡನೇ ಸೋಮವಾರ ನವೆಂಬರ್7, ಮೂರನೇ ಸೋಮವಾರ ನವೆಂಬರ್14 ,ನಾಲಕ್ಕನೆ ಕಾರ್ತಿಕ ಸೋಮವಾರ ಹಾಗೂ ಕಡೆಯ ಸೋಮವಾರ ನವೆಂಬರ್21. ಕಾರ್ತಿಕ ಮಾಸದ 30ದಿನ ಅಥವಾ ಕಾರ್ತಿಕ ಸೋಮವಾರಗಳಲ್ಲಿ ಮನೆಯಲ್ಲಿ ನಾವು ಹೇಳುವ ಪ್ರತ್ಯಾಕ ಸ್ಥಳಗಳಲ್ಲಿ ದೀಪಾರಾಧನೆ ಮಾಡಿದರೆ ವಂಶ ಪರಂಪರೆಯಾಗಿ ಬಂದಿರುವಂತಹ ಕಾಳಸರ್ಪ ದೋಷಗಳು ಕಳೆದು ಹೋಗಿ ನಿಮಗೆ ಅದೃಷ್ಟ ಕೂಡಿ ಬರುತ್ತದೆ .ಕಾರ್ತಿಕ ಮಾಸದಲ್ಲಿ ಶಿವ ಕೇಶವರ ಆರಾಧನೆ ಮಾಡಿದರೆ, ದೈವಬಲ, ಅದೃಷ್ಟ ,ಪ್ರಾಪ್ತಿಯಾಗುತ್ತದೆ .ಈ ಮಾಸದಲ್ಲಿ ಪವಿತ್ರವಾದ ನದಿ ಸ್ನಾನ ಹಾಗೂ ವಿಶೇಷ ದೀಪಾರಾಧನೆ ಮಾಡಿದರೆ ಅಖಂಡ ದೈವಬಲ ಪ್ರಾಪ್ತಿಯಾಗುತ್ತದೆ .ಜೀವನದಲ್ಲಿ ಸಂಕಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾದರೆ ಕಾರ್ತಿಕ ಮಾಸದಲ್ಲಿ ವಿಜಯ ಪ್ರಾಪ್ತಿಗಾಗಿ ಯಾವ ರೀತಿದೀಪರಾಧನೆ ಮಾಡಬೇಕು ಎಂದು ತಿಳಿದು ಕೊಳ್ಳೋಣ .

ಮೊದಲನೆಯದಾಗಿ ನಿಮ್ಮ ಮನೆಯ ಬಾಗಿಲಿನ ಹೊಸ್ತಿಲಿನ ಹೊರಭಾಗದಲ್ಲಿ ಎರಡು ದೀಪಗಳನ್ನು ಇಡಬೇಕು , ಎರಡನೆಯದಾಗಿ ತುಳಸಿಗಿಡದ ಮುಂದೆ ದೀಪವನ್ನು ಇಟ್ಟು ತುಲಸಿಗೆ ನಮಸ್ಕಾರ ಮಾಡಬೇಕು, ಮೂರನೆಯದಾಗಿ ನಿಮ್ಮ ಮನೆಯ ದೇವರ ಮನೆಯಲ್ಲಿ ದೇವರ ಚಿತ್ರಪಟದ ಮುಂದೆ ದೀಪಗಳನ್ನು ಇಡಬೇಕು. ನಾಲ್ಕನೆಯದಾಗಿ ನಿಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೀವು ದಾನ್ಯಗಳನ್ನು ಇಡುವ ಸ್ಥಳದಲ್ಲಿ ದೀಪಾರಾಧನೆ ಮಾಡಬೇಕು .ಹೀಗೆ ಪ್ರತ್ಯಕವಾಗಿ ನಿಮ್ಮ ಮನೆಯ 4ಜಾಗದಲ್ಲಿ ದೀಪಾರಾಧನೆ ಮಾಡಿದರೆ , ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ .ಕಾರ್ತಿಕ ಮಾಸದ 30ದಿನಗಳಲ್ಲೂ ಅಥವಾ ಕಾರ್ತಿಕ ಮಾಸದ ಸೋಮವಾರಗಳಲ್ಲಿ ಈ ರೀತಿ ದೀಪಾರಾಧನೆ ಮಾಡಿದರೆ ನಿಮ್ಮ ಕಷ್ಟಗಳು ದೂರವಾಗುತ್ತದೆ .ಮನೆಯ ಸದಸ್ಯರು ಮಾಡುವಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ವಿಜಯ ಪ್ರಾಪಿಯಾಗುತ್ತದೆ .ಈ ದೀಪಾರಾಧನೆಯನ್ನು ಸಂಜೆ ಮಾಡಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತದೆ .

ಕಾರ್ತಿಕ ಮಾಸದಲ್ಲಿ ಪ್ರತಿದಿನ ಹೀಗೆ ಪೂಜೆ ಮಾಡಿ…!

ಕಾರ್ತಿಕ ಮಾಸದಲ್ಲಿ ಕಾವೇರಿ ನದಿ ನೀರಿನ ಸ್ನಾನದ ಮಹತ್ವ..!

ಕಾರ್ತಿಕ ಸೋಮವಾರ ಉಪವಾಸದ ನಿಯಮಗಳೇನು…?

 

- Advertisement -

Latest Posts

Don't Miss