Tuesday, December 24, 2024

Latest Posts

ಅಭಿಮಾನಿಯ ನಡೆಗೆ ಸಿಟ್ಟಾಗಿ, ಮೈಕ್ ಬಿಸಾಡಿದ ಪಾಕಿಸ್ತಾನಿ ಸಿಂಗರ್

- Advertisement -

Pakistan News: ಪಾಕಿಸ್ತಾನಿ ಸಿಂಗರ್ ಬಿಲಾಲ್ ಸಯೀದ್, ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಸಿಟ್ಟಾಗಿ ತನ್ನ ಅಭಿಮಾನಿಯ ಬಳಿ ಮೈಕ್ ಬಿಸಾಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್‌ಗಳು ಬರುತ್ತಿದೆ.

ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಭಿಮಾನಿಯ ನಡೆಗೆ ಸಿಟ್ಟಾದ ಸಯೀದ್, ಮೈಕ್ ಎಸೆದು, ಕಾರ್ಯಕ್ರಮ ಬಿಟ್ಟು ಹೊರಹೋಗಿದ್ದಾರೆ. ಅರ್ಧಕ್ಕೆ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ. ಈ ಬಗ್ಗೆ ಹಲವು ಕಾಮೆಂಟ್ಸ್ ಬಂದಿದ್ದು, ಓರ್ವ ಪಬ್ಲಿಕ್ ಫಿಗರ್ ಆಗಿ, ಇಷ್ಟು ಸಿಟ್ಟು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಪ್ರಸಿದ್ಧಿ ಪಡೆಯಲು ಇದೊಂದು ಗಿಮಿಕ್ ಎಂದದಿದ್ದಾರೆ.

ಇನ್ನು ಈ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಸಯೀದ್, ನಾನು ಸ್ಟೇಜ್ ಪ್ರೊಗ್ರಾಮ್ ಕೊಡುವಾಗ ಸದಾ ಖುಷಿಯಾಗಿ ಇರುತ್ತೇನೆ. ಇಂಥ ಕಾರ್ಯಕ್ರಮಗಳಿಂದ ನನ್ನ ಎಲ್ಲಾ ಸುಸ್ತು, ಟೆನ್ಶನ್ ಎಲ್ಲಾ ಮಾಯವಾಗುತ್ತದೆ. ಅಷ್ಟು ಹೊತ್ತು ನಾನು ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೇ, ನನ್ನ ಫ್ಯಾನ್ಸ್‌ನ್ನು ಕಂಡರೆ ನನಗೆ ತುಂಬಾ ಪ್ರೀತಿ. ಆದರೆ ಕೆಲವೊಮ್ಮೆ ಆ ಪ್ರೀತಿ ಹೆಚ್ಚಾಗಿ ಹೀಗೆಲ್ಲಾ ಆಗುತ್ತದೆ. ಕೆಲವರು ಈ ರೀತಿ ನಡತೆ ತೋರಿದ್ದು ಇದೇ ಮೊದಲ ಬಾರಿಯಲ್ಲ. ಆದರೆ ನಾನು ಮೈಕ್ ಎಸೆದಿದ್ದು ಮಾತ್ರ ಇದೇ ಮೊದಲ ಬಾರಿ. ಅಲ್ಲದೇ ನಾನು ಈ ರೀತಿ ಎಂದಿಗೂ ಸ್ಟೇಜ್ ಬಿಟ್ಟು ಹೋಗಿರಲಿಲ್ಲ ಎಂದಿದ್ದಾರೆ. ಆದರೆ ಈ ಬಗ್ಗೆ ಸಯೀದ್ ಕ್ಷಮೆಯಾಚಿಸಿಲ್ಲ.

ಡ್ರೋನ್ ಪ್ರತಾಪ್ ವಿನ್ನರ್ ಆಗದ ಕಾರಣ, ಚಾಲೆಂಜ್ ಸೋತ ಅಭಿಮಾನಿ: ಅರ್ಧ ಗಡ್ಡ, ಮೀಸೆಗೆ ಕತ್ತರಿ

ಕ್ರಿಕೇಟಿಗ ಮಯಂಕ್ ಅಗರ್ವಾಲ್ ಆಸ್ಪತ್ರೆಗೆ ದಾಖಲು

ಎಲಿಮಿನೇಟ್ ಆದ ತಕ್ಷಣ ಸಿಟ್ಟಿನಿಂದ ಮನೆಗೆ ಹೋದ ನಟಿ ಅಂಕಿತಾ ಲೋಖಂಡೆ

- Advertisement -

Latest Posts

Don't Miss