Tuesday, July 15, 2025

Latest Posts

ಬೆಂಗಳೂರಿಗರಿಗೆ ಮತ್ತೆ ಶಾಕ್ : ಆಟೋ ದರ ದುಬಾರಿ – ಜಾರಿ ಯಾವಾಗ?

- Advertisement -

ದುಬಾರಿ ದುನಿಯಾದಲ್ಲಿ ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಆಟೋ ಪ್ರಯಾಣ ದರ ಏರಿಕೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರ ಜೊತೆ ವೇಟಿಂಗ್‌ ಮತ್ತು ಲಗೇಜ್ ದರ ಕೂಡ ನಿಗದಿಪಡಿಸಲಾಗಿದೆ.

ಗಾರ್ಡನ್‌ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಟಿಕೆಟ್​ ದರ ಏರಿಕೆ ಬೆನ್ನಲ್ಲೇ, ಜನರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಿದೆ. ಆಟೋ ಚಾಲಕರ ಅಹವಾಲು ಕೇಳಿದ ನಂತರ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಆಗಸ್ಟ್​ 1 ರಿಂದ ಎರಡು ಕಿಮೀ ಪ್ರಯಾಣಕ್ಕೆ ಆಟೋ ಮೀಟರ್ ದರ ಕನಿಷ್ಠ 30 ರೂಪಾಯಿ ಇದೆ. ಇದೀಗ ಆ ದರವನ್ನು ಎರಡು ಕಿಮೀಗೆ 36 ರುಪಾಯಿಗೆ‌ ಏರಿಕೆ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಎಷ್ಟೆಷ್ಟು ದರ ಏರಿಕೆ?

* ಕನಿಷ್ಠ ಎರಡು ಕಿಮೀ ಆಟೋ ಪ್ರಯಾಣ ದರ 30 ರೂ.ನಿಂದ 36ರೂ.ಗೆ ಹೆಚ್ಚಳ
(ಈ ಮೂಲಕ 6 ರೂ. ಹೆಚ್ಚಿಸಲಾಗಿದೆ)
ಕನಿಷ್ಠ ಪ್ರಯಾಣ ದರ ಬಳಿಕ ಪ್ರತಿ ಕಿಮೀ.ಗೆ 15 ರೂ.ನಿಂದ 18 ರೂ.ಗೆ ಏರಿಕೆ
* ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತವಾಗಿದೆ.
ಮೊದಲ 5 ನಿಮಿಷದ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 10 ರೂ.ನಿಗದಿ
* ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತವಾಗಿರಲಿದೆ.
ಮೊದಲ 20ಕೆ.ಜಿ ಯಿಂದ ನಂತರ ಪ್ರತಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ 10 ರೂ.ನಿಗದಿ
ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿ.ಗೆ ಸೀಮಿತ
* ರಾತ್ರಿ ವೇಳೆ ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ಪಡೆಯಬಹುದು
ಆದರೆ ಇದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮಾತ್ರ ಅನ್ವಯವಾಗುತ್ತದೆ.

- Advertisement -

Latest Posts

Don't Miss