ಪ್ರತಿಯೊಬ್ಬರಿಗೂ ತಮ್ಮ ಬಾಳಸಂಗಾತಿಯಾಗಿ ಬರೋರು, ಯಾವ ರೀತಿ ಇರಬೇಕು ಅನ್ನೋ ಕಲ್ಪನೆ ಇರುತ್ತೆ. ಅದೇ ರೀತಿ ಅನುಶ್ರೀ ಕೂಡ, ತಮ್ಮ ಪತಿಯಾಗುವವರ ಬಗ್ಗೆ, ಮದುವೆ ಬಗ್ಗೆ ಕಲ್ಪನೆ ಇಟ್ಟುಕೊಂಡಿದ್ರಂತೆ. ಅವರೀಗ ತಮ್ಮ ಮನಮೆಚ್ಚಿದ ಹುಡುಗನನ್ನೇ ಈಗ ಮದುವೆಯಾಗಿದ್ದಾರೆ. ಇದೇ ವೇಳೆ ಪತಿ ರೋಷನ್ ಬಗ್ಗೆ ಅನುಶ್ರೀ ತಮ್ಮ ಮನದಾಳದ ಮಾತನ್ನ ಹೇಳಿಕೊಂಡಿದ್ದಾರೆ.
ಪ್ರೇಮಿಗಳು, ಗಂಡ-ಹೆಂಡತಿ ಅನ್ನೋದಕ್ಕಿಂತಲೂ ಹೆಚ್ಚಾಗಿ, ನಾವಿಬ್ಬರು ಲೈಫ್ ಅನ್ನ ತುಂಬಾ ಸಿಂಪಲ್ ಆಗಿ ನೋಡೋರು. ಚಿಕ್ಕಚಿಕ್ಕ ವಿಚಾರಗಳನ್ನು, ಸಂತೋಷಗಳನ್ನು ಇಷ್ಟಪಡ್ತೀವಿ. ಇವರಿಗೆ ಸಹಾಯ ಮನೋಭಾವ ಜಾಸ್ತಿ. ನಮ್ಮಿಬ್ಬರಿಗೆ ದೊಡ್ಡ ದೊಡ್ಡ ಆಸೆಗಳೇನು ಇಲ್ಲ. ಜೀವನ ಚೆನ್ನಾಗಿ ಮಾಡಿಕೊಂಡು ಹೋಗ್ತೀವಿ.
ಅವರು ತಮ್ಮ ಕೈರುಚಿಯಲ್ಲೇ ಕೋಟ್ಯಾಧಿಪತಿ ಆಗಿದ್ದಾರೆ. ಅಡುಗೆ ಮಾಡೋದಂದ್ರೆ, ಅವರಿಗೆ ಪ್ಯಾಷನ್. ಚೆನ್ನಾಗಿ ಅಡುಗೆ ಮಾಡ್ತಾರೆ. ನನಗೆ ತಿನ್ನೋದು ಅಂದ್ರೆ ತುಂಬಾ ಇಷ್ಟ. ನನಗಾಗಿ ಅವರು ಮೊದಲು ಬಿರಿಯಾನಿ ಮಾಡಿದ್ರು. ಫಿಶ್ ಫ್ರೈ ಕೂಡ ಮಾಡ್ತಾರೆ ಅಂತಾ ನಾಚುತ್ತಲೇ, ಮಾಧ್ಯಮಗಳ ಎದುರು ಅನುಶ್ರೀ ಹೇಳಿದ್ರು.
ಅನುಶ್ರೀ-ರೋಷನ್ ಇಬ್ಬರಿಗೂ ಮಂತ್ರಮಾಂಗಲ್ಯದ ಬಗ್ಗೆ ಒಲವು ಇತ್ತಂತೆ. ಮಂತ್ರ ಮಾಂಗಲ್ಯಕ್ಕೆ ಜಾಗವನ್ನೂ ನೋಡಿಕೊಂಡು ಬಂದಿದ್ರಂತೆ. ಆದ್ರೆ, ಮಂತ್ರ ಮಾಂಗಲ್ಯ ಆಗೋಕೆ, ಕೆಲವೊಂದು ಒಂದು ರೂಲ್ಸ್ ಇದೆ. ಮದುವೆಗೆ ಸೀಮಿತ ಜನರಿಗಷ್ಟೇ ಅವಕಾಶ ಇರುತ್ತೆ. ಅನುಶ್ರೀ-ರೋಷನ್ ಫ್ಯಾಮಿಲಿ ಜನರನ್ನು ಲೆಕ್ಕ ಹಾಕಿದ್ರೆ, ಸ್ವಲ್ಪ ಜಾಸ್ತಿ ಜನರಾಗಿದ್ದಾರೆ. ಮಂತ್ರಮಾಂಗಲ್ಯದ ರೂಲ್ಸ್ ಬ್ರೇಕ್ ಮಾಡೋಕೆ ಇಷ್ಟ ಇರಲಿಲ್ಲ. ಹೀಗಾಗಿ ಸರಳಕ್ಕಿಂತ ಒಂಚೂರು ಮೇಲೆ ಮದುವೆ ಮಾಡಿಕೊಂಡಿದ್ದೇವೆ ಅಂತಾ ಅನುಶ್ರೀ ಹೇಳಿದ್ದಾರೆ.