Tuesday, October 22, 2024

Latest Posts

IRCCLಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ..!

- Advertisement -

ಇಂಡಿಯನ್ ರೈಲ್ವೆ ಕನ್​​ಸ್ಟ್ರಕ್ಷನ್​ ಕಂಪನಿ ಲಿಮಿಟೆಡ್(Indian Railway Construction Company Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 40 ಸಹಾಯಕ ವ್ಯವಸ್ಥಾಪಕ(ಸಿವಿಲ್) ಮತ್ತು ಕಾರ್ಯನಿರ್ವಾಹಕ(ಸಿವಿಲ್) ಹುದ್ದೆಗಳು(Assistant Manager & Executive posts) ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಮಾರ್ಚ್​ 11 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ https://www.ircon.org ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ,

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್(ಸಿವಿಲ್)- 20
ಎಕ್ಸಿಕ್ಯೂಟಿವ್(ಸಿವಿಲ್)-20
ಒಟ್ಟು 40 ಹುದ್ದೆಗಳು

ವಿದ್ಯಾರ್ಹತೆ:
ಸಹಾಯಕ ವ್ಯವಸ್ಥಾಪಕ(ಸಿವಿಲ್)-ಸಿವಿಲ್ ಎಂಜಿನಿಯರಿಂಗ್​ ಉತ್ತೀರ್ಣ (ಶೇ.75ರಷ್ಟು ಅಂಕಗಳೊಂದಿಗೆ)
ಕಾರ್ಯನಿರ್ವಾಹಕ(ಸಿವಿಲ್)-ಸಿವಿಲ್ ಎಂಜಿನಿಯರಿಂಗ್​ ಉತ್ತೀರ್ಣ (ಶೇ.75ರಷ್ಟು ಅಂಕಗಳೊಂದಿಗೆ)

ವಯೋಮಿತಿ:
ಅಸಿಸ್ಟೆಂಟ್ ಮ್ಯಾನೇಜರ್(ಸಿವಿಲ್)- 30 ವರ್ಷ
ಎಕ್ಸಿಕ್ಯೂಟಿವ್(ಸಿವಿಲ್)-33 ವರ್ಷ

ಉದ್ಯೋಗದ ಸ್ಥಳ : ನವದೆಹಲಿ

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 1,000 ರೂ. ಅರ್ಜಿ ಶುಲ್ಕ
SC/ST/PWD/EWS/ ಮಾಜಿ ಸೈನಿಕ-ಯಾವುದೇ ಅರ್ಜಿ ಶುಲ್ಕ ಇಲ್ಲ.

ಅರ್ಜಿ ಸಲ್ಲಿಕೆ ವಿಧಾನ : ಆನ್​ಲೈನ್​​

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/03/2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11/03/2022

ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ & ಸಂದರ್ಶನ

- Advertisement -

Latest Posts

Don't Miss