Monday, December 23, 2024

Latest Posts

ಅಪ್ಪು ನನ್ನ ಅಣ್ಣನಿದ್ದಂತೆ :ತಮಿಳು ನಟ ವಿಶಾಲ್

- Advertisement -


ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದಂತಹ `ಪುನೀತ್ ನುಡಿ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳು ನಟ ವಿಶಾಲ್ ಅವರು ನಾನು ಒಬ್ಬ ಕನ್ನಡಿಗ, ಯಾಕೆಂದರೆ ನಮ್ಮ ಅಪ್ಪ ಕನ್ನಡಿಗರು. ನನಗೆ ಅಪ್ಪು ಅವರು ಅಣ್ಣನಂತೆ, ನನ್ನ ಹುಟ್ಟು ಹಬ್ಬದ ದಿನ ಅವರು ನಿಧನವಾಗಿದ್ದಾರೆ ಎಂದಾಗ ಎರಡು ದಿನ ನನಗೆ ನಂಬಲು ಸಾದ್ಯೆವಾಗಲ್ಲಿ. ಈಗಲೂ ಅವರು ನನ್ನ ಕಣ್ಣ ಮುಂದೆ ಕಾಣುತ್ತಿದ್ದಾರೆ. ನಾನು ನನ್ನ ಗೆಳೆಯನಿಗೆ ಮಾತು ನೀಡಿದ್ದೇನೆ , ನಾನು ನನ್ನ ಅಣ್ಣನಿಗೆ ಮಾತು ನೀಡಿದ್ದೇನೆ, ನಾನು ಒಬ್ಬ ಒಳ್ಳೆಯ ವ್ಯಕ್ತಿಗೆ ಮಾತು ನೀಡಿದ್ದೇನೆ, ನಾನು ನನ್ನ ನೆಚ್ಚಿನ ನಟನಿಗೆ ಮಾತು ಕೊಟ್ಟಿದ್ದೇನೆ. ಶಿವಣ್ಣ, ರಾಘಣ್ಣ ಹಾಗೂ ಅವರ ಕುಟುಂಬದವರಿಗೆ ನನ್ನ ಮನವಿ ನನಗೆ ಒಂದೇ ಒಂದು ಅವಕಾಶ ಕೊಡಿ ಶಕ್ತಿಧಾಮದಲ್ಲಿ ಇರುವ 1800 ಮಕ್ಕಳ ವಿದ್ಯಾಬ್ಯಾಸಕ್ಕೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ. 16 ವರ್ಷದ ಸಿನೆಮಾ ಪಯಣದಲ್ಲಿ ನಾನು ಇನ್ನೂ ಒಂದು ಸ್ವಂತ ಮನೆ ಕೂಡ ಮಾಡಿಲ್ಲ, ನಾನು ಅಪ್ಪ ಕಟ್ಟಿದ ಮನೆಯಲ್ಲಿ ಇದ್ದೇನೆ, ನಾನು ಮನೆಕಟ್ಟಲು ಕೂಡಿಸಿಟ್ಟ ಹಣವನ್ನ ಮಕ್ಕಳ ವಿದ್ಯಾಬ್ಯಾಸಕ್ಕೆ ನೀಡುತಿದ್ದೆನೆ. ಮಕ್ಕಳ ವಿದ್ಯಾಬ್ಯಾಸ ತುಂಬಾ ಮುಖ್ಯ, ನಾನು ಮಾಡುತ್ತಿರುವುದು ಪ್ರಚಾರಕ್ಕಾಗಿ ಅಲ್ಲ, ಪುನೀತ್ ಅವರ ಹೆಸರು 100 ವರ್ಷ ಅಲ್ಲ 1000 ವರ್ಷವಾದರು ಅವರ ಹೆಸರು ಮರೆಯಬಾರದು. ಒಳ್ಳೆಯ ಕೆಲಸಗಳು ಮಾಡುವವರು ಹೇಳಿ ಮಾಡುವುದಿಲ್ಲ, ಹೇಳದೆ ಮಾಡುತ್ತಾರೆ ಅಂತಹವರಲ್ಲಿ ಪುನೀತ್ ಕೂಡ ಒಬ್ಬ, ಅವರು ಸತ್ತ ನಂತರ ಅವರು ಮಾಡಿದ ಕೆಲಸಗಳು ನಮಗೆ ತಿಳಿಯುತ್ತಿವೆ. ಪುನೀತ್ ಆತ್ಮ ಸಂತೋಷವಾಗಿ ಇರಬೇಕು. ಅವರು ಇಲ್ಲೇ ಎಲ್ಲೋ ಒಂದು ಕಡೆ ನಿಂತು ನೋಡ್ತಿದ್ದಾರೆ, ಅವರು ನಗ್ತಾ ಇರಬೇಕು ಅಂದರೆ ಯಾವುದೇ ಕಾರಣಕ್ಕೂ ಅವರು ಮಾಡಿದ ಒಳ್ಳೆಯ ಕೆಲಸಗಳು ನಿಲ್ಲಬಾರದು ಎಂದು ವಿಶಾಲ್ ಹೇಳಿದರು.

- Advertisement -

Latest Posts

Don't Miss