ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ದೈಹಿಕವಾಗಿ ಜೊತೆಯಿಲ್ಲದೊದ್ರೂ, ಮಾನಸಿಕವಾಗಿ ಸದಾ ನಮ್ಮೊಂದಿಗೆ ರ‍್ತಾರೆ. ಅಪ್ಪಾಜಿ ಅಭಿಮಾನಿಗಳೇ ದೇವರು ಅಂತಿದ್ರು..ಆದ್ರೆ ಅಪ್ಪಾಜಿ ಕುಡಿ ಅಭಿಮಾನಿಗಳಿಗೇನೇ ದೇವರಾಗ್ಬಿಟ್ರು. ಹೌದು, ಈ ಕ್ಷಣಕ್ಕೂ ಪುನೀತ್ ರಾಜ್‌ಕುಮಾರ್ ನಗುವಿರೋ ಫೋಟೋ ನೋಡಿದ್ರೆ ಖಂಡಿತ ಅವ್ರು ನಮ್ಮಿಂದ ದೂರ ಹೋಗಿಲ್ಲ ಇಲ್ಲೇ ಎಲ್ಲೋ ಇದ್ದಾರೆ, ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಅನ್ನೋ ಭಾವನೆಯೇ ಎಲ್ರಿಗೂ ಆಗುತ್ತೆ. ಆದ್ರೆ ಈ ವಾಸ್ತವತೆಯನ್ನ ನಂಬಲೇಬೇಕಲ್ವಾ..ಆದ್ರೂ ಪವರ್ ಸ್ಟಾರ್ ಎಂದಿಗೂ ಅಜರಾಮರ. ಸದ್ಯ ಅಪ್ಪು ಕಂಡಿದ್ದ ಕನಸುಗಳು ನನಸಾಗ್ತಿರೋ ಸಮಯ. ಈಗಾಗ್ಲೇ ಜೇಮ್ಸ್ ಸಿನಿಮಾ ರಿಲೀಸಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣ್ತಿದೆ. ನಿಮ್ಮೆಲ್ರಿಗೂ ಗೊತ್ತಿರೋ ಹಾಗೇ ಈ ಸಿನಿಮಾ ರಿಲೀಸಾಗಿದ್ದು, ಪುನೀತ್ ಹುಟ್ಟಿದ ದಿನದಂದು. ಹೌದು, ತನ್ನ ಬರ್ತಡೇ ದಿನವೇ ಜೇಮ್ಸ್ ಸಿನಿಮಾ ರಿಲೀಸಾಗ್ಬೇಕು ಎಂಬುದು ಅಪ್ಪು ಆಸೆಯಾಗಿತ್ತಂತೆ. ಯಾಕಂದ್ರೆ ಅಪ್ಪು ನಟಿಸಿದ್ದ ಯಾವ ಚಿತ್ರವೂ ಅವ್ರ ಬರ್ತಡೇ ದಿನ ರಿಲೀಸಾಗಿರಲಿಲ್ಲವಂತೆ. ಹಾಗಾಗಿ ಈ ಸಿನಿಮಾವನ್ನ ಪವರ್ ಸ್ಟಾರ್ ಆಸೆಯಂತೆ ಮಾರ್ಚ್ ೧೭ರಂದೇ ಬಿಡುಗಡೆ ಮಾಡಿತು ಚಿತ್ರತಂಡ. ಇನ್ನು ಪುನೀತ್ ಕನಸಿನ ಕೂಸು ಗಂಧದಗುಡಿ ಸಾಕ್ಷö್ಯಚಿತ್ರ. ಅರಣ್ಯ ಮತ್ತು ವನ್ಯಜೀವಿಗಳ ಕುರಿತು ರೆಡಿಯಾಗಿರೋ ಈ ಡಾಕ್ಯುಮೆಂಟರಿ ಮೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗುತ್ತೆ ಎನ್ನಲಾಗಿದೆ. ಜೊತೆಗೆ ತನ್ನ ಪಿಆರ್‌ಕೆ ನಿರ್ಮಾಣ ಸಂಸ್ಥೆಯಿAದ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬುದು ಅಪ್ಪು ಕನಸಾಗಿತ್ತು. ಇದೀಗ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಜವಾಬ್ದಾರಿಯನ್ನು ಮುಂದುವರೆಸ್ತಿದ್ದಾರೆ. ಅಪ್ಪು ನಿಧನದ ಬಳಿಕ ಪಿಆರ್‌ಕೆ ನಿರ್ಮಾಣ ಸಂಸ್ಥೆಯಿAದ “ಆಚಾರ್ & ಕೋ” ಸಿನಿಮಾ ಸೆಟ್ಟೇರಿದ್ದು, ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿ ಶುಭಹಾರೈಸಿದ್ದಾರೆ. ಇಷ್ಟೇ ಅಲ್ಲ ಚಂದನವನದ ರಾಜಕುಮಾರನಿಗೆ ಮತ್ತೊಂದು ಕನಸಿತ್ತು ಅದೇ ಶಕ್ತಿಧಾಮ ಕೇಂದ್ರದ ಬಳಿ ಶಾಲೆ ನರ‍್ಮಾಣ ಮಾಡುವಾಸೆ. ಮಹಿಳೆಯರ ಪುನರ್ವಸತಿ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ ಸಿಎಮ್ ಬಸವರಾಜ ಬೊಮ್ಮಾಯಿ ೫ ಕೋಟಿ ನೆರವು ಘೋಷಿಸಿದ್ದಾರೆ. ಅಷ್ಟೇ ಅಲ್ಲ ಶಕ್ತಿಧಾಮದಲ್ಲಿ ಇನ್ಫೋಸಿಸ್ ಫೌಂಡೇಷನ್ ಬ್ಲಾಕ್ ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮ ವಿದ್ಯಾಶಾಲೆಯ ಶಂಕುಸ್ಥಾಪನೆ ನೆರವೇರಿತು. ಸಿಎಮ್ ಬೊಮ್ಮಾಯಿ ಶಿಲಾನ್ಯಾಸ ನೆರವೇರಿಸಿದರು. ಒಟ್ಟಿನಲ್ಲಿ ಅಪ್ಪು ಕನಸುಗಳೆಲ್ಲವೂ ನನಸಾಗುತ್ತಿರೋದು ಒಂದೆಡೆಯಾದರೆ, ಅಪ್ಪು ಅಭಿಮಾನಿಗಳಿಗೆ ತನ್ನೊಡೆಯ ಇಲ್ಲದಿರೋ ನೋವು ತಡೆಯಲಾಗದಷ್ಟು. ಅದೇನೇ ಇರ್ಲಿ ಅಪ್ಪು ಸದಾ ಅಜರಾಮರ.
ನಳಿನಾಕ್ಷಿ, ಕರ್ನಾಟಕ ಟಿವಿ